ಕನ್ನಡಪ್ರಭ ವಾರ್ತೆ ವಿಜಯಪುರ
ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮಾತನಾಡಿ, ಇದುವರೆಗೆ 2,90,184 ಮತದಾರರ ಗಣತಿ ನಮೂನೆ ವಿತರಣೆ ಮಾಡಲಾಗಿದೆ. ಅದರಲ್ಲಿ 1,52,389 ಗಣತಿ ನಮೂನೆಗಳು ಡಿಜಿಟೈಜೇಷನ್ ಮಾಡಲಾಗಿದೆ. ಆನಲೈನ್‌ನಲ್ಲಿ ಮತದಾರರು ಸಲ್ಲಿಸಿದ ಒಟ್ಟು ಗಣತಿ ನಮೂನೆಗಳು 2,341, ಸಂಗ್ರಹಿಸಲಾಗದ/ಗೈರುಹಾಜರಾದ ಮತದಾರರು 13,064, ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು 9,102, ಮರಣ ಹೊಂದಿರುವ ಮತದಾರರು 4,126, ಈಗಾಗಲೇ ನೋಂದಾಯಿಸಿಕೊಂಡ ಮತದಾರರು 3,694 ಮತ್ತು ಇತರೆ 176. ಬಿ.ಎಲ್.ಒ ಗಳಿಂದ ಪ್ರತಿದಿನ ಎ.ಎಸ್.ಡಿ.ಡಿ.ಒ ಪಟ್ಟಿ ಪರಿಶೀಲಿಸಿ ಮತದಾರರ ಗಣತಿ ನಮೂನೆ ವಿತರಿಸಲು ಲಭ್ಯವಾಗದೇ ಇರುವ ಮತದಾರರನ್ನು ಗೈರು ಹಾಜರಿಯೆಂದು ಪಟ್ಟಿ ಮಾಡಲಾಗಿದೆ ಎಂದರು.
ಎಲ್ಲ ರಾಜಕೀಯ ಪಕ್ಷಗಳ ಬಿ.ಎಲ್.ಎ-2 ರವರಿಗೆ ಎ.ಎಸ್.ಡಿ.ಡಿ.ಒ ಪಟ್ಟಿ, ಮತಗಟ್ಟೆವಾರು ಮಾಹಿತಿ ನೀಡಲಾಗುವುದು. ತಮ್ಮ ಪಕ್ಷದಿಂದ ನೇಮಕ ಮಾಡಲಾದ ಬಿ.ಎಲ್.ಎರವರಿಗೆ ಮತದಾರರು/ಮತದಾರರ ಮನೆಗಳು ಲಭ್ಯವಾದಲ್ಲಿ ಸಂಬಂದಪಟ್ಟ ಬಿ.ಎಲ್.ಒ ಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.ಈಗಾಗಲೇ ಮನೆಗೆ ತೆರಳಿ ಹಂಚಿಕೆ ಮಾಡಲಾದ ಗಣತಿ ನಮೂನೆಗಳನ್ನು ಬಿ.ಎಲ್.ಒ ಅವರು ಸಂಗ್ರಹಿಸಲು ತೆರಳಿದಾಗ ಕೆಲವು ಮತದಾರರು ಗಣತಿ ನಮೂನೆಗಳನ್ನು ಮರಳಿ ನೀಡುತ್ತಿಲ್ಲ. ಅಂತಹ ಮತದಾರರಿಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಸರಿಯಾದ ತಿಳಿವಳಿಕೆ ನೀಡಿ, ಗಣತಿ ನಮೂನೆಗಳನ್ನು ಭರ್ತಿ ಮಾಡಿ ಮರಳಿಸಬೇಕು. ಗಣತಿ ನಮೂನೆಗಳನ್ನು ಮತದಾರರು ಮರಳಿಸದೇ ಇದ್ದಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂದು ತಿಳಿಸಿದರು.