ಬಡತನ, ಭದ್ರತೆ ಬದಲು ಎಸ್ಐಆರ್ ಚರ್ಚೆ: ಆರೋಪ

KannadaprabhaNewsNetwork |  
Published : Jun 18, 2026, 02:00 AM IST
 | Kannada Prabha

ಸಾರಾಂಶ

ನುಸುಳುಕೋರರನ್ನು ಹೊರದಬ್ಬುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷ ಕಳೆದಿದೆ. ಈ ಅವಧಿಯಲ್ಲಿ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಬಂದಿರುವ ವಿದೇಶಿಗರ ಪಟ್ಟಿಯನ್ನು ಕೇಂದ್ರ ನೀಡಬೇಕಿದೆ.

ಗದಗ: ಸದ್ಯ ರಾಷ್ಟ್ರ ಮಟ್ಟದಲ್ಲಿ ಬಡತನ, ಭದ್ರತೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಆದರೆ, ಎಸ್ಐಆರ್ ಕುರಿತು ಚರ್ಚೆ ಆಗುತ್ತಿದೆ ಎಂದು ಜಮಾತೆ ಇಸ್ಲಾಮೆ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯೂಸೂಫ್ ಕುನ್ನಿ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಹೆಚ್ಚು ಜನ ಶ್ರೀಮಂತರು, ರಾಜಕೀಯ ಪ್ರಭಾವಿಗಳು ಮಾತ್ರ ಮತ ಹಾಕುತ್ತಿದ್ದರು. ಸ್ವಾತಂತ್ರ್ಯದ ನಂತರ 1955ರಲ್ಲಿ ಮೊದಲ ಬಾರಿ 17 ಕೋಟಿ 32 ಲಕ್ಷ ಜನರಿಗೆ ಮತದಾನದ ಹಕ್ಕು ನೀಡಲಾಗಿತ್ತು. 2024ರ ಚುನಾವಣೆಯಲ್ಲಿ 100 ಕೋಟಿ ಜನರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ.

ನುಸುಳುಕೋರರನ್ನು ಹೊರದಬ್ಬುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷ ಕಳೆದಿದೆ. ಈ ಅವಧಿಯಲ್ಲಿ ಬೇರೆ ಬೇರೆ ದೇಶಗಳಿಂದ ಭಾರತಕ್ಕೆ ಬಂದಿರುವ ವಿದೇಶಿಗರ ಪಟ್ಟಿಯನ್ನು ಕೇಂದ್ರ ನೀಡಬೇಕಿದೆ. ದೇಶದ 13 ರಾಜ್ಯಗಳಲ್ಲಿ ನಡೆದ ಎಸ್ಐಆರ್‌ನಲ್ಲಿ ಒಟ್ಟು 6 ಕೋಟಿಗೂ ಅಧಿಕ ಮತದಾರರನ್ನು ಪಟ್ಟಿಯಿಂದ ತಗೆದು ಹಾಕಲಾಗಿದೆ. ಆದರೆ, ಎಷ್ಟು ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ದೇಶದ ಜನರ ಮುಂದೆ ಹೇಳಬೇಕು ಎಂದರು.

ಯುವ ಮುಖಂಡ ಸರೋವರ ಬೆಂಕಿಕೇರಿ ಮಾತನಾಡಿದರು. ಹೀಸಾಬೆಲ್ಲಾ, ಬಿಲಾಲ್ ಗೋಕಾವಿ, ಜುನೈದ್ ಉಮಚಗಿ, ಆರಾಧನಾ ಬಣಕಾರ, ಆರೀಫ್ ಉಲ್ಲಾ, ಮುತ್ತು ಬಿಳೆಯಲಿ, ಅನ್ವರ್ ಬಾಗೆವಾಡಿ ಹಲವರು ಉಪಸ್ಥಿತರಿದ್ದರು.ಅಪರಿಚಿತ ವ್ಯಕ್ತಿ ಶವ ಪತ್ತೆ

ಗದಗ: ಜೂ.16ರಂದು ಮುನಿರಾಬಾದ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ಪುರುಷನ ಸುಮಾರು 40- 45 ವರ್ಷದ ಯಾವುದೋ ಕಾಯಿಲೆಯಿಂದ ಬಳಲಿ ಸ್ವಾಭಾವಿಕವಾಗಿ ಮೃತಪಟ್ಟ ಶವ ಪತ್ತೆಯಾಗಿದೆ.ಈ ಕುರಿತು ಗದಗ ರೈಲ್ವೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ. ಮೃತನು ಕೋಲು ಮುಖ, ಅಗಲವಾದ ಹಣೆ ಮತ್ತು ಉದ್ದನೆಯ ಮೂಗು, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಸುಮಾರು 5.5 ಅಡಿ ಎತ್ತರ, ತಲೆಯಲ್ಲಿ ಸುಮಾರು 3- 4 ಇಂಚು ಕಪ್ಪು ಮತ್ತು ಬಿಳಿ ಕೂದಲು, ಸುಮಾರು 1/2 ಇಂಚು ಕಪ್ಪು ದಾಡಿ ಮತ್ತು ಮೀಸೆ ಬಿಟ್ಟಿರುತ್ತಾನೆ.ಮೃತನ ಮೈಮೇಲೆ ಒಂದು ಬಿಳಿ, ನೀಲಿ, ಕೆಂಪು ಮಿಶ್ರಿತ ಚೆಕ್ಸ್ ಪುಲ್ ಶರ್ಟ್, ಒಂದು ಕಪ್ಪು ಕಲರಿನ ನೈಟ್ ಪ್ಯಾಂಟ್, ಒಂದು ನೀಲಿ ಮತ್ತು ಕೆಂಪು ಗೆರೆಯುಳ್ಳ ಅಂಡರವೇರ್ ಧರಿಸಿದ್ದಾನೆ. ಬಲಗೈಯಲ್ಲಿ ಒಂದು ಸ್ಟೀಲಿನ ಕೈಗಡಗ ಹಾಕಿದ್ದಾನೆ.

ಈ ಅಪರಿಚಿತ ಮೃತನು ಬಗ್ಗೆ ಮಾಹಿತಿ ಇದ್ದಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಯ ದೂ. 08372- 278744 ಅಥವಾ ಮೊ. 9480802128 Email: gadagrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ. 080- 22871291 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಲಾನುಭವಿಗಳಿಗೆ ಸ್ವ ಉದ್ಯೋಗಕ್ಕೆ ಸೌಲಭ್ಯ ಕಲ್ಪಿಸಿಕೊಡಿ
ರೈತರ ಚಿತ್ತ ಇರಲಿ ಸಾವಯವ, ನೈಸರ್ಗಿಕ ಕೃಷಿಯತ್ತ