ರಾಷ್ಟ್ರದ ಹಿತದೃಷ್ಟಿಯಿಂದ ಎಸ್‌ಐಆರ್ ಅಭೂತಪೂರ್ವ ಕಾರ್ಯಕ್ರಮ

KannadaprabhaNewsNetwork |  
Published : Jul 07, 2026, 01:30 AM IST
ಪೋಟೋ: 06ಎಸ್‌ಎಂಜಿಕೆಪಿ02ಶಿವಮೊಗ್ಗದ ರಾಷ್ಟ್ರಭಕ್ತರ ಬಳಗ ಮತ್ತು ಶನೈಶ್ಚರ ದೇವಾಲಯ ಸಮಿತಿಯ ಸಹಯೋಗದಲ್ಲಿ ಸೋಮವಾರ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಲು ಬಿಎಲ್‌ಎ-2 ಕಾರ್ಯಕರ್ತರ ಸಮಾವೇಶ ಹಾಗೂ ಎಸ್‌ಐಆರ್ ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ವಕೀಲ ಹಾಗೂ ಸಾಹಿತಿ ಎಂ.ಆರ್.ಸತ್ಯನಾರಾಯಣ್ ಉದ್ಘಾಟಿಸಿದರು.  | Kannada Prabha

ಸಾರಾಂಶ

ಶಿವಮೊಗ್ಗ ರಾಷ್ಟ್ರದ ಹಿತದೃಷ್ಟಿಯಿಂದ ಎಸ್‌ಐಆರ್ ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದು ವಕೀಲ ಹಾಗೂ ಸಾಹಿತಿ ಎಂ.ಆರ್. ಸತ್ಯನಾರಾಯಣ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಷ್ಟ್ರದ ಹಿತದೃಷ್ಟಿಯಿಂದ ಎಸ್‌ಐಆರ್ ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದು ವಕೀಲ ಹಾಗೂ ಸಾಹಿತಿ ಎಂ.ಆರ್. ಸತ್ಯನಾರಾಯಣ್ ಹೇಳಿದರು.

ನಗರದ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಶನೈಶ್ಚರ ದೇವಾಲಯ ಸಮಿತಿಯ ಸಹಯೋಗದಲ್ಲಿ ಸೋಮವಾರ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಲು ಬಿಎಲ್‌ಎ-2 ಕಾರ್ಯಕರ್ತರ ಸಮಾವೇಶ ಹಾಗೂ ಎಸ್‌ಐಆರ್ ಮಾಹಿತಿ ಕೇಂದ್ರದವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಐಆರ್ ಯಾವುದೇ ಗ್ಯಾರಂಟಿಗಾಗಿ ಅಲ್ಲ, ಇದು ರಾಜಕಿಯ ಪಕ್ಷದ ಕಾರ್ಯಕ್ರಮವೂ ಅಲ್ಲ. ಜಗತ್ತಿನ ಅತಿ ದೊಡ್ಡ ಮತ್ತು ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಮತ್ತು ಹೊರದೇಶದಿಂದ ಅನಧಿಕೃತವಾಗಿ ಬಂದು ಇಲ್ಲಿ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಬಾರದು ಎನ್ನುವ ಉದ್ದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಎಸ್‌ಐಆರ್ ಮತದಾರರ ಶೀಘ್ರ ಪರಿಷ್ಕರಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದರು.

ಎಸ್‌ಐಆರ್‌ನಲ್ಲಿ ಎರಡು ಸ್ಪಷ್ಟ ಉದ್ದೇಶವಿದೆ. ಯಾವ ಅರ್ಹ ಪ್ರಜೆಯೂ ಮತದಾನದಿಂದ ವಂಚಿತರಾಗಬಾರದು. ಯಾರು ಅನರ್ಹರಿದ್ದಾರೋ ಅವರನ್ನು ಹೊರಗಿಡಬೇಕು ಎಂಬುದು ಈ ಪ್ರಕ್ರಿಯೆಯ ಉದ್ದೇಶ. ಇದು ಕಾನೂನು ಬಾಹಿರವಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಜೆಗಳೂ ತಮ್ಮ ಜವಾಬ್ದಾರಿಯನ್ನು ಅರಿತು ಪ್ರಾಮಾಣಿಕವಾಗಿ ವರ್ತಿಸಬೇಕು. ಈ ವ್ಯವಸ್ಥೆಯನ್ನು ಕಲುಷಿತಗೊಳಿಸಿದರೆ ಪ್ರಜಾಪ್ರಭುತ್ವ ಕುಂಠಿತಗೊಳ್ಳುತ್ತದೆ. ಮತದಾರ ನಿಷ್ಕ್ರಿಯನಾದರೆ ಪ್ರಜಾಪ್ರಭುತ್ವವೇ ನಿಷ್ಕ್ರಿಯವಾಗುತ್ತದೆ ಎಂದರು.

ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ಎಸ್‌ಐಆರ್ ರಾಜಕೀಯ ಚಟುವಟಿಕೆಯಲ್ಲ, ಅನೇಕ ಮುಸ್ಲಿಂ ಸಮುದಾಯದವರು ಎರಡು-ಮೂರು ಕಡೆಗಳಲ್ಲಿ ಮತ ಹಾಕಿದ್ದಾರೆ ಎಂಬ ದೂರು ಕೇಳಿಬರುತ್ತಿದೆ. ಅದಕ್ಕೆ ಉತ್ತರವೇ ಎಸ್‌ಐಆರ್ ಎಂದರು.

ಎಸ್‌ಐಆರ್ ಪ್ರಕ್ರಿಯೆ ಈ ದೇಶದ ಪ್ರಜೆ ಹೌದಾ ಅಥವಾ ಅಲ್ಲವೇ ಎನ್ನುವುದನ್ನು ದೃಢಪಡಿಸುತ್ತದೆ. ಬಿಎಲ್‌ಒಗಳು ಮನೆ ಮನೆಗೆ ಬರಬೇಕು. ಬಂದಿಲ್ಲದಿದ್ದರೆ ಕಾರ್ಯಕರ್ತರೇ ಅವರಿಗೆ ನೆರವು ನೀಡಿ ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸಬೇಕು. ಬಿಎಲ್‌ಎ-2 ಅವರಿಗೆ ಎಲ್ಲ ವಾರ್ಡ್‌ಗಳಲ್ಲೂ ರಾಷ್ಟ್ರಭಕ್ತರ ಬಳಗ ತರಬೇತಿ ನೀಡಿದ್ದು, ಅಧಿಕೃತವಾಗಿ ಟ್ಯಾಗನ್ನು ಕೂಡ ನೀಡಿದೆ. ಆ ಕಾರ್ಯಕರ್ತರು ಬಿಎಲ್‌ಒ ಜೊತೆಗೆ ಬಂದು ಎಸ್‌ಐಆರ್ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸುತ್ತಾರೆ. ಒಂದೇ ಒಂದು ಮತ ಹೋದರೂ ಅದು ದೇಶಕ್ಕೆ ದೊಡ್ಡ ನಷ್ಟ. ಅದಕ್ಕಾಗಿ ಎಸ್‌ಐಆರ್ ಫಾರಂನ್ನು ತಿಳಿದವರ ಬಳಿಯೇ ಮಾಹಿತಿ ಪಡೆದು ಭರ್ತಿ ಮಾಡಿ ಅದಕ್ಕಾಗಿಯೇ ಇಲ್ಲಿ ಸಲಹಾ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಈ ಸೇವಾ ಕೇಂದ್ರ ಜು.29 ರವರೆಗೆ ಕಾರ್ಯಾಚರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಈ. ವಿಶ್ವಾಸ್, ಕೆ.ಈ. ಕಾಂತೇಶ್, ಸುವರ್ಣಾಶಂಕರ್, ಶ್ರೀಕಾಂತ್, ಬಾಲು, ಜಾದವ್, ನವುಲೆ ಈಶ್ವರಪ್ಪ, ಶನೈಶ್ಚರ ದೇವಾಲಯ ಸಮಿತಿಯ ಪ್ರಮುಖರಾದ ವಿ. ರಾಜು, ಸ.ನ. ಮೂರ್ತಿ, ವೆಂಕಟೇಶ್ ಮತ್ತಿತರರಿದ್ದರು.

- - -

-06ಎಸ್‌ಎಂಜಿಕೆಪಿ02:

ಶಿವಮೊಗ್ಗದ ರಾಷ್ಟ್ರಭಕ್ತರ ಬಳಗ ಮತ್ತು ಶನೈಶ್ಚರ ದೇವಾಲಯ ಸಮಿತಿಯ ಸಹಯೋಗದಲ್ಲಿ ಸೋಮವಾರ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಲು ಬಿಎಲ್‌ಎ-2 ಕಾರ್ಯಕರ್ತರ ಸಮಾವೇಶ ಹಾಗೂ ಎಸ್‌ಐಆರ್ ಮಾಹಿತಿ ಕೇಂದ್ರದ ಉದ್ಘಾಟನೆಯನ್ನು ವಕೀಲ ಹಾಗೂ ಸಾಹಿತಿ ಎಂ.ಆರ್. ಸತ್ಯನಾರಾಯಣ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3000ಕ್ಕೂ ಅಧಿಕ ಪಿಂಚಣಿ ಕಾರ್ಡ್ ರದ್ದುಗೊಳಿಸಿ ವಂಚನೆ: ನವೀನ್
ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಕೆಲಸ