- 140ಕ್ಕೂ ಹೆಚ್ಚು ಮಂದಿ ಐಐಐಟಿ, ಎನ್‌ಐಟಿಗೆ ದಾಖಲಾಗುವ ಸಾಧ್ಯತೆ
- 363 ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ - - -ಕನ್ನಡಪ್ರಭ ವಾರ್ತೆ, ದಾವಣಗೆರೆ 2024ರ ಜೆ.ಇ.ಇ ಮೇನ್ಸ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸರ್ ಎಂ.ವಿ. ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದು, ಒಟ್ಟು 363 ವಿದ್ಯಾರ್ಥಿಗಳು ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳ ವಿವರ: ಸಾಗರಿಕ ಯು.ಎಂ. (41ನೇ ರ‍್ಯಾಂಕ್), ಶ್ರೇಯಸ್ ಬಿ. (99ನೇ ರ‍್ಯಾಂಕ್), ಯಶವಂತ್ ಕುಮಾರ್ ಎಚ್. (227ನೇ ರ‍್ಯಾಂಕ್), ಶ್ರೇಯಸ್ ಶಂಭುಲಿಂಗಪ್ಪ ನಾಗನೂರ್ (263ನೇ ರ‍್ಯಾಂಕ್), ಚಿರಾಗ್ ಆರ್. (310ನೇ ರ‍್ಯಾಂಕ್), ತೇಜಸ್ವಿನಿ ಸಿ.ಎಂ. (317ನೇ ರ‍್ಯಾಂಕ್), ಪ್ರಿಯಾಂಕ ಎಚ್. (391ನೇ ರ‍್ಯಾಂಕ್), ಕೆ.ವಿದ್ಯಾ (690ನೇ ರ‍್ಯಾಂಕ್), ಬಿ.ಪ್ರಜ್ವಲ್ ಕುಮಾರ್ (874ನೇ ರ‍್ಯಾಂಕ್), ವಿನಯ್ ಡಿ.ವಿ. (998ನೇ ರ‍್ಯಾಂಕ್), ಸೃಜನ್ ಕೆ.ಎಸ್. (1262ನೇ ರ‍್ಯಾಂಕ್), ರೋಹನ್ ಜಿ. (1319ನೇ ರ‍್ಯಾಂಕ್), ಮಹೇಶ್‌ಬಾಬು ಕೆ.ಎಸ್. (1400ನೇ ರ‍್ಯಾಂಕ್), ಎಸ್.ಸಂತೋಷ್ ಪ್ರದ್ಯುಮ್ನ (1405ನೇ ರ‍್ಯಾಂಕ್), ಶ್ರೇಯಸ್ ಜಿ.ಎಚ್. (1486ನೇ ರ‍್ಯಾಂಕ್), ರತನ್ ಎ. ಮರೋಳ್ (1504ನೇ ರ‍್ಯಾಂಕ್), ಅನನ್ಯ ಗೌರಿಶ್ರೀ ಬಿ. (1566ನೇ ರ‍್ಯಾಂಕ್), ರೆಹಾನ್ ನೂರ್ ಮಹಮ್ಮದ್ (1592ನೇ ರ‍್ಯಾಂಕ್), ಕೊಟ್ರೇಶ್ ಶಿವಮೂರ್ತಿ ಬಸಾಪುರ (1711ನೇ ರ‍್ಯಾಂಕ್), ಕೌಶಿಕ್ ಕೆ.ಎನ್. (1857ನೇ ರ‍್ಯಾಂಕ್), ಕರಣ್ ಎಚ್. (1860ನೇ ರ‍್ಯಾಂಕ್) ರ‍್ಯಾಂಕ್ ಪಡೆದಿದ್ದಾರೆ.
ರಾಷ್ಟ್ರಮಟ್ಟದಲ್ಲಿ 50ನೇ ರ‍್ಯಾಂಕ್ ಒಳಗೆ 1 ವಿದ್ಯಾರ್ಥಿ, 100ನೇ ರ‍್ಯಾಂಕ್ ಒಳಗೆ 2 ವಿದ್ಯಾರ್ಥಿಗಳು, 500ನೇ ರ‍್ಯಾಂಕ್ ಒಳಗೆ 7 ವಿದ್ಯಾರ್ಥಿಗಳು, 1000ನೇ ರ‍್ಯಾಂಕ್ ಒಳಗೆ 10 ವಿದ್ಯಾರ್ಥಿಗಳು, 2000ನೇ ರ‍್ಯಾಂಕ್ ಒಳಗೆ 21 ವಿದ್ಯಾರ್ಥಿಗಳು ಹಾಗೂ 5000ನೇ ರ‍್ಯಾಂಕ್ ಒಳಗೆ 42 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ರ‍್ಯಾಂಕ್ ಗಿಟ್ಟಿಸಿದ್ದಾರೆ.ಕಾಲೇಜಿನ ವಿದ್ಯಾರ್ಥಿ ಡಿ.ವಿ.ವಿನಯ್ ಸಾಮಾನ್ಯ ವಿಭಾಗದಲ್ಲಿ 99.94 ಪರ್ಸೆಂಟೇಲ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. 99 ಪರ್ಸೆಂಟೇಲ್‌ಗಿಂತ ಹೆಚ್ಚು ಅಂಕವನ್ನು ಭೌತಶಾಸ್ತ್ರದಲ್ಲಿ 30, ರಸಾಯನಶಾಸ್ತ್ರದಲ್ಲಿ 47, ಗಣಿತಶಾಸ್ತ್ರದಲ್ಲಿ 9 ವಿದ್ಯಾರ್ಥಿಗಳು ಪಡೆದಿದ್ದು, 98 ಪರ್ಸೆಂಟೇಲ್‌ಗಿಂತ ಹೆಚ್ಚು ಅಂಕವನ್ನು ಭೌತಶಾಸ್ತ್ರದಲ್ಲಿ 59, ರಸಾಯನಶಾಸ್ತ್ರದಲ್ಲಿ 85, ಗಣಿತಶಾಸ್ತ್ರದಲ್ಲಿ 12 ವಿದ್ಯಾರ್ಥಿಗಳು ಪರ್ಸೆಂಟೇಲ್ ಪಡೆದು ಸಾಧನೆಗೈದಿದ್ದಾರೆ.
ಒಟ್ಟಾರೆ 140ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಐಐಐಟಿ ಅಥವಾ ಎನ್‌ಐಟಿಗಳಲ್ಲಿ ದಾಖಲಾಗುವ ಸಾಧ್ಯತೆಗಳಿವೆ. ಅಲ್ಲದೇ, ಅರ್ಹತೆ ಗಳಿಸಿದ ಎಲ್ಲ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಗೆ ತರಬೇತಿ ಪಡೆಯುತ್ತಿದ್ದು, ಅಲ್ಲಿಯೂ ಅತ್ಯುತ್ತಮ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.ಈ ಅಮೋಘ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
- - - -25ಕೆಡಿವಿಜಿ44ಃ ಸಾಗರಿಕ ಯು.ಎಂ. - - --25ಕೆಡಿವಿಜಿ45ಃ: ಬಿ.ಶ್ರೇಯಸ್ - - -
-25ಕೆಡಿವಿಜಿ46ಃ: ಯಶವಂತ್ ಕುಮಾರ್- - -
-25ಕೆಡಿವಿಜಿ47ಃಶ್ರೇಯಸ್ ಶಂಭುಲಿಂಗಪ್ಪ- - -
-25ಕೆಡಿವಿಜಿ48ಃ ಚಿರಾಗ್ ಆರ್.- - -