ಅಜೀಜಅಹ್ಮದ ಬಳಗಾನೂರ
ಕೊರೋನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಫೋಟೋ ಸ್ಟುಡಿಯೋ, ಝೆರಾಕ್ಸ್ ಸೆಂಟರ್‌ಗಳಿಗೆ ಎಸ್‌ಐಆರ್ ವರವಾಗಿದೆ. ಇದೀಗ ಜನದಟ್ಟಣೆಯಿಂದ ಕೂಡಿದ್ದು ಭರ್ಜರಿ ವ್ಯಾಪಾರ ನಡೆಯುತ್ತಿದೆ.
ಹೌದು. ಎಸ್‌ಐಆರ್ ಸಾವಿರಾರು ವ್ಯಾಪಾರಸ್ಥರಿಗೆ ದುಡಿಮೆ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ 3000ಕ್ಕೂ ಹೆಚ್ಚು ಫೋಟೋ ಸ್ಟುಡಿಯೋಗಿದ್ದು ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಆರಂಭವಾಗುತ್ತಿದ್ದಂತೆ ಜನರು ಅಗತ್ಯ ದಾಖಲೆ, ಫೋಟೋ ತೆಗೆಸಿಕೊಳ್ಳಲು ಸಿಎಸ್ ಸೆಂಟರ್, ಫೋಟೋ ಸ್ಟುಡಿಯೋಗೆ ದಾವಿಸುತ್ತಿದ್ದಾರೆ.ನಿತ್ಯ ₹6000 ವ್ಯಾಪಾರ:
ಎಸ್‌ಐಆರ್ ಪ್ರಕ್ರಿಯೆಗೆ ಪಾಸ್‌ಪೋರ್ಟ್ ಗಾತ್ರದ ಫೋಟೋ ಮಾತ್ರವಲ್ಲದೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣಪತ್ರ, ವಿಳಾಸದ ದಾಖಲೆ ಸೇರಿದಂತೆ ವಿವಿಧ ದಾಖಲೆಗಳ ಝೆರಾಕ್ಸ್ ಪ್ರತಿಗಳಿಗಾಗಿ ಝೆರಾಕ್ಸ್ ಅಂಗಡಿಗಳಲ್ಲೂ ಜನದಟ್ಟಣೆ ಹೆಚ್ಚಾಗಿದೆ. ಈ ಮೊದಲು ಅಂಗಡಿಗೆ 20ರಿಂದ 30ರ ವರೆಗೆ ಬರುತ್ತಿದ್ದ ಗ್ರಾಹಕರ ಸಂಖ್ಯೆ ಇದೀಗ 100ರ ಗಡಿ ದಾಟಿದೆ. ಕೆಲ ಸಂದರ್ಭದಲ್ಲಿ ಜನದಟ್ಟಣೆ ಹೆಚ್ಚಾಗಿ ಮರಳಿ ಬಂದ ಉದಾಹರಣೆಗಳು ಇವೆ ಎನ್ನುತ್ತಾರೆ ಗ್ರಾಹಕರ ನೀಲಕಂಠ ಬಡಿಗೇರ.
ಕಿರಣ್ ಬಾಕಳೆ, ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋ ಗ್ರಾಫರ್ ಅಸೋಸಿಯೇಶನ್ ಗೌರವ ಅಧ್ಯಕ್ಷ