ಹಾವೇರಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.೨೩ರವರೆಗೆ ಕಾಲಾವಕಶಾವಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಜಿಲ್ಲೆಯ ಅರ್ಹ ಹಾಗೂ ಯುವ ಮತದಾರರ ನೋಂದಣಿಗೆ ಸೆ.೧೯ ಹಾಗೂ ೨೦ ರಂದು ಎರಡು ದಿನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಕುರಿತು ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಂದ ಪ್ರಭಾತಪೇರಿ ಆಯೋಜಿಸಲಾಗುತ್ತಿದೆ. ಮತದಾರರ ಪಟ್ಟಿಗೆ ಅರ್ಹ ಮತದಾರರ ಸೇರ್ಪಡೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಹೆಸರಿನಲ್ಲಿ ವ್ಯತ್ಯಾಸ, ಗೈರು ಹಾಜರಾಗಿ ಸೇರಿದಂತೆ ೬೦,೦೧೧ ಮತದಾರರರಿಗೆ ನೋಟೀಸ್ ಕಳುಹಿಸಲು ಗುತಿಸಲಾಗಿತ್ತು. ಈವರೆಗೆ ೫೦,೩೧೦ ಜನರಿಗೆ ನೋಟೀಸ್ ಕಳುಹಿಸಲಾಗಿದೆ. ೯,೭೦೧ ಮತದಾರರಿಗೆ ನೋಟೀಸ್ ರವಾನೆ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ ೧೩,೦೫೮ ಜನರ ಹೀರಿಂಗ್ ಆಗಿದೆ, ೨,೭೨೪ ಜನರು ಹೇರಿಂಗ್‌ಗೆ ಗೈರು ಹಾಜರಾಗಿದ್ದಾರೆ. ಅವರಿಗೆ ಪುನಃ ಹೀರಿಂಗ್ ದಿನಾಂಕ ನೀಡಲಾಗುವುದು ಎಂದು ತಿಳಿಸಿದರು.ಹಕ್ಕು ಆಕ್ಷೇಪಣೆ ಸಮಯದಲ್ಲಿ ಅರ್ಹ ಮತದಾರರು ಸೇರ್ಪಡೆಗೆ ನಮೂನೆ-೬ರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಒದಗಿಸಬೇಕು. ಸಾರ್ವಜನಿಕರು ಮೋಬೈಲ್ ಮುಖಾಂತರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದಲ್ಲಿ ಗಿಊಂ ಂಠಿಠಿ (ಗಿoಣeಡಿ ಊeಟಠಿಟiಟಿe ಂಠಿಠಿಟiಛಿಚಿಣioಟಿ) ನ್ನು ಡೌನಲೋಡ್ ಮಾಡಿಕೊಂಡು ಅದರ ಮೂಲಕವು ಅರ್ಜಿ ನಮೂನೆ-೬, ೭ ಮತ್ತು ೮ನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ೬ ವಿಧಾಸಭಾ ಕ್ಷೇತ್ರಗಳ ಮತಟ್ಟೆಗಳ ವಿಧಾಸಭಾವಾರು ವಿವರದ ಪಟ್ಟಿಯನ್ನು ಜಿಲ್ಲಾ ವೆಬ್ ಸೈಟ್ hಚಿveಡಿi.ಟಿiಛಿ.iಟಿ ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದ್ದಾರೆ.