ಪುರಭವನದಲ್ಲಿ ಸಿತಾರ್ ವಾದನ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ

KannadaprabhaNewsNetwork |  
Published : Jul 14, 2026, 02:45 AM IST
ಮಂಗಳೂರು: ಸಿತಾರ್ ವಾದನ, ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

ಸಂಗೀತ ಭಾರತಿ ಫೌಂಡೇಶನ್ ಮಂಗಳೂರು ಆಶ್ರಯದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ರಿಸ್ಟ್ರಿಮ್ ಎಂಬ ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು.

ಮಂಗಳೂರು: ಸಂಗೀತ ಭಾರತಿ ಫೌಂಡೇಶನ್ ಮಂಗಳೂರು ಆಶ್ರಯದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ ರಿಸ್ಟ್ರಿಮ್ ಎಂಬ ಸಿತಾರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು.ಸಂಗೀತ ಭಾರತಿ ಫೌಂಡೇಶನ್ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್ ಉದ್ಘಾಟಿಸಿದರು. ಶ್ರೇಷ್ಠ ಸಿತಾರ್ ವಾದಕ ಬೆಂಗಳೂರಿನ ಸಂಜೀವ್ ಕೊರ್ತಿ ಅವರಿಂದ ಸಿತಾರ್ ವಾದನ ನಡೆಯಿತು. ಬಳಿಕ ರಾಷ್ಟ್ರಮಟ್ಟದ ಖ್ಯಾತಿಯ ಪಂಡಿತ್ ಶಶಾಂಕ್ ಮಕ್ತೇದಾರ್ ಗೋವಾ ಅವರಿಂದ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು. ತಬ್ಲಾದಲ್ಲಿ ಗೋವಾದ ಮಯಾಂಕ್ ಬೆಡೆಕರ್ ಹಾಗೂ ಹಾರ್ಮೋನಿಯಂನಲ್ಲಿ ಶಿರಸಿಯ ಗುರುಪ್ರಸಾದ್ ಹೆಗೆಡೆ ಅವರು ಸಾಥ್ ನೀಡಿದರು.ಮುಖ್ಯ ಪ್ರಾಯೋಜಕರಾಗಿ ಬ್ಯಾಂಕ್ ಆಫ್ ಮಹಾರಾಷ್ಟ್ರ, ಸಹಪ್ರಯೋಜಕರಾಗಿ ಡಾ.ಪಿ. ದಯಾನಂದ ಪೈ, ನಿರ್ದೇಶಕರು ಸಂಚುರಿ ಗ್ರೂಪ್ ಆಫ್ ಬೆಂಗಳೂರು, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಶ್ರೀನಿಧಿ ಬಿಲ್ಡರ್ಸ್, ಮುದ್ರ ಪ್ರಿಂಟ್ರರ್ಸ್, ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳು ಸಹಕಾರ ನೀಡಿದ್ದಾರೆ. ಸಂಗೀತ ಭಾರತಿ ಫೌಂಡೇಶನ್ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್, ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿಗಳಾದ ಅಂಕುಶ್ ಎನ್., ರಮೇಶ್ ಕೆ.ಜಿ, ಖಜಾಂಚಿ ಕರುಣಾಕರ ಬಳ್ಕೂರು, ಸೌಮ್ಯ ಕಾಮತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ಷಣಾ ಸಂಸ್ಥೆ ಆರಂಭ ಹೆಮ್ಮೆ ವಿಚಾರ: ಡಾ. ಭರತ್ ಶೆಟ್ಟಿ
ಬಗರ್ ಹಕುಂ ಹಕ್ಕು ಪತ್ರ- ಫ್ಲಾಟಿಂಗ್ ಕಡ ಶೀಘ್ರ ವಿಲೇವಾರಿಗೆ ಸೂಚನೆ