ಕೊಟ್ಟೂರು: ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕದ ಸಂಘಕ್ಕೆ ಕಟ್ಟಡ ನಿರ್ಮಿಸಲು ಅನುವಾಗುವಂತೆ ನಿವೇಶನವನ್ನು ದೊರಕಿಸಿಕೊಡುವುದರ ಜೊತೆಗೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಧನಸಹಾಯವನ್ನು ಬಿಡುಗಡೆ ಮಾಡಲು ಮುಂದಾಗುವೆ ಎಂದು ಶಾಸಕ ಕೆ.ನೇಮರಾಜ ನಾಯ್ಕ್ ಹೇಳಿದರು.ತಾಲೂಕು ಸರ್ಕಾರಿ ನೌಕರರ ಸಂಘದವರು ಮುದ್ರಿಸಿರುವ 2026ನೇ ವರ್ಷದ ದಿನದರ್ಶಿಕೆ ತಾಲೂಕು ಶಾಖೆಯ ಡೈರಿ ಮತ್ತು ಪಾಕೇಟ್ ಕ್ಯಾಲೆಂಡರ್ ಮತ್ತಿತರಗಳನ್ನು ಇಲ್ಲಿನ ಪಶು ಆಸ್ಪತ್ರೆಯ ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಯೋಗೇಶ್ವರ ದೀನ್ನೆ ಪ್ರಾಸ್ತಾವಿಕ ಮಾತನಾಡಿ, ಸರ್ಕಾರ ನೌಕರರ ಪ್ರತಿ ಮನೆಯಲ್ಲಿ ತಮ್ಮದೇ ಸಂಘಟನೆಯ ಕ್ಯಾಲೆಂಡರ್ ಮತ್ತು ಡೈರಿಯನ್ನು ಹಾಕುವ ಮೂಲಕ ದೈನಂದಿನ ಕೆಲಸದಲ್ಲಿ ಸದಾ ಜಾಗೃತರಾಗಿ ಸರ್ಕಾರಿ ಸೇವೆಯನ್ನು ಒದಗಿಸಿ ಕೊಡಲು ಮುಂದಾಗಬೇಕಿದೆ ಎಂದರು.
ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್, ಡಾ.ಚಂದ್ರನಾಯಕ್, ಡಾ.ಕೊಟ್ರೇಶ್, ವೀರೇಶ್ ತುಪ್ಪದ, ಸಿಎಚ್ ಎಂ ಗಂಗಾಧರ್, ಹೇಮಚಂದ್ರ ಕೆ, ರಮೇಶ್ ಕೆ, ಮಂಜುನಾಥ ಬಿ.ಟಿ., ಮೀನಾಕ್ಷಿ ವಿ. ಇದ್ದರು.ರಾಜ್ಯ ಪರಿಷತ್ ಸದಸ್ಯ ಸಿ.ಮ. ಗುರುಬಸವರಾಜ ಸ್ವಾಗತಿಸಿ, ನಿರೂಪಿಸಿದರು. ಎ.ವಿ. ಗುರುಬಸವರಾಜ ವಂದಿಸಿದರು.