ಪ್ರವಾಸಿ ಗೈಡ್‌ಗಳಿಗೆ ನಿವೇಶನ ನೀಡಲು ಪ್ರಯತ್ನ

KannadaprabhaNewsNetwork |  
Published : Nov 25, 2023, 01:15 AM IST
24ಎಚ್ಎಸ್ಎನ್8 : ಪ್ರವಾಸಿ ಮಾರ್ಗದರ್ಶಿಗಳ ಪುನಃ ಚೇತನ ತರಬೇತಿ ಕಾರ್ಯಕ್ರಮವನ್ನು ಶಾಸಕರಾದ  ಎಚ್ ಕೆ ಸುರೇಶ್ ಉದ್ಘಾಟಿಸಿದರು . | Kannada Prabha

ಸಾರಾಂಶ

ಬೇಲೂರು ತಾಣದ ಪ್ರವಾಸಿ ಮಾಗ೯ದರ್ಶಿಗಳಿಗೆ, ಮನೆ ರಹಿತರಿಗೆ ನಿವೇಶನ ನೀಡಲು ಪ್ರಯತ್ನ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕರಾದ ಎಚ್ ಕೆ ಸುರೇಶ್ ಹೇಳಿದರು. ಹಾಸನ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೇಲೂರು ಮುಂದಿನ ದಿನಗಳಲ್ಲಿ ಪ್ರವಾಸಿ ಮಾಗ೯ದರ್ಶಿಗಳಿಗೆ, ಮನೆ ರಹಿತರಿಗೆ ನಿವೇಶನ ನೀಡಲು ಪ್ರಯತ್ನ ಪ್ರಯತ್ನಿಸುತ್ತಿದ್ದೇನೆ ಎಂದು ಶಾಸಕರಾದ ಎಚ್ ಕೆ ಸುರೇಶ್ ಹೇಳಿದರು.

ಹಾಸನ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಪ್ರವಾಸಿ ಮಾರ್ಗದರ್ಶಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬೇಲೂರು, ಹಳೇಬೀಡು ವಿಶ್ವ ಪರಂಪರಿಗೆ ಸೇರಿರುವು ನಮ್ಮಗೆ ತುಂಬಾ ಸಂತೋಷದ ವಿಚಾರ. ಹಳೇಬೀಡಿನಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲು ಈಗಾಗಲೇ ಜಾಗವನ್ನು ಗುರುತಿಸಲಾಗಿದೆ. ಮುಂದಿನ ವರ್ಷ ಹೊಯ್ಸಳ ಮಹೋತ್ಸವವನ್ನು ಆಚರಿಸಲು ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮನವರಕೆ ಮಾಡಿದ್ದೇನೆ. ನನಗೆ ನಾಟಕೀಯವಾಗಿ ಮಾತನಾಡಲು ಬರುವುದಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇನೆ ಒಂದು ನಯಾ ಪೈಸೆ ಮುಟ್ಟದೆ ಕೆಲಸ ಮಾಡುತ್ತೇನೆ ಎಂದರು.

ಪ್ರವಾಸಿ ಮಾರ್ಗದರ್ಶಿಗಳಿಗೆ ಗೌರವಧನ ಹೆಚ್ಚಿಸುವಂತೆ ಸದನದಲ್ಲಿ ಒತ್ತಾಯಿಸುತ್ತೇನೆ. ಮುಂದಿನ ದಿನದಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ದೇವಾಲಯದ ವತಿಯಿಂದಲೇ ಟೆಂಡರ್ ಕರೆಯಲಾಗುವುದು. ಈ ವಿಚಾರವಾಗಿ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ ಎಂದು ಹೇಳಿದರು.

ಪ್ರವಾಸೋದ್ಯಮ ಜಿಲ್ಲಾ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿಯವರು ಮಾತನಾಡಿ, ಬೇಲೂರು ಹಳೇಬೀಡು ವಿಶ್ವ ಪರಂಪರೆ ಪಟ್ಟಿಗೆ ಸೇರಲು ಸಾಹೇಬರ ಅದೃಷ್ಟ. ಮಾರ್ಗದರ್ಶಕರ ಗೌರವಧನ ಹೆಚ್ಚಿಸಲು ಪ್ರಯತ್ನಿಸಬೇಕು. ಬೇಲೂರಿನಲ್ಲಿ ಹೊಯ್ಸಳ ಮಹೋತ್ಸವ ನಡೆಸಿ ಅದು ಜನೋತ್ಸವವಾಗಿ ಬದಲಾವಣೆಯಾಗಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಯಾವುದೇ ಕೆಲಸವಾದರೂ 24 ಗಂಟೆಯಲ್ಲೇ ಮಾಡುತ್ತೇನೆ ಎಂದು ಶಾಸಕರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ತರಬೇತುದಾರ ಕೃಷ್ಣರವರು ಹಾಗೂ ಸಿಬ್ಬಂದಿ ನಾಗರಾಜ್‌ರವರು, ಎಂಜಿನಿಯರ್ ಮನು, ಹೋಟೆಲ್ ಮ್ಯಾನೇಜರ್, ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ
ಅತ್ತೂರು: ಶತ ಕಂಠದಲ್ಲಿ ಗೀತ ಗಾಯನ ಕಾರ್ಯಕ್ರಮ