ಶಿವಾನಂದ ಅಂಗಡಿ ಸೇರಿ 72 ಜನರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ

KannadaprabhaNewsNetwork | Published : Jan 26, 2025 1:30 AM

ಸಾರಾಂಶ

ಕನ್ನಡಪ್ರಭದ ಮುಖ್ಯ ಉಪಸಂಪಾದಕ ಶಿವಾನಂದ ಅಂಗಡಿ ಸೇರಿದಂತೆ 72 ಜನರಿಗೆ ಪ್ರಸಕ್ತ ಸಾಲಿನ ಸಂಗೊಳ್ಳಿ ರಾಯಣ್ಣ ಹಾಗೂ 20 ಮಹಿಳಾ ಸಾಧಕರಿಗೆ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ. 26ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿ: ಕನ್ನಡಪ್ರಭದ ಮುಖ್ಯ ಉಪಸಂಪಾದಕ ಶಿವಾನಂದ ಅಂಗಡಿ ಸೇರಿದಂತೆ 72 ಜನರಿಗೆ ಪ್ರಸಕ್ತ ಸಾಲಿನ ಸಂಗೊಳ್ಳಿ ರಾಯಣ್ಣ ಹಾಗೂ 20 ಮಹಿಳಾ ಸಾಧಕರಿಗೆ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜ. 26ರಂದು ಮಧ್ಯಾಹ್ನ 3 ಗಂಟೆಗೆ ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ, ಒಟ್ಟು 12 ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು 92 ಜನರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪತ್ರಿಕಾ ರಂಗದಲ್ಲಿ ಕನ್ನಡಪ್ರಭದ ಮುಖ್ಯ ಉಪಸಂಪಾದಕ ಶಿವಾನಂದ ಅಂಗಡಿ, ಪತ್ರಕರ್ತರಾದ ಶಿವಣ್ಣ ಅವಧೂತ, ನಿಜಗುಣಿ ದಿಂಡಲಕೊಪ್ಪ, ಪ್ರಕಾಶ ಚಳಗೇರಿ, ವಿಜಯಕುಮಾರ ಪೂಜಾರಿ, ಎಸ್‌.ಎನ್‌. ಗೋವರ್ಧನ, ಹೇಮರಡ್ಡಿ ಸೈದಾಪೂರ, ಸಂಗಮೇಶ ಮೆಣಸಿನಕಾಯಿ. ಸುದ್ದಿವಾಹಿನಿ ವಿಭಾಗದಲ್ಲಿ ಪ್ರಕಾಶ ಮುಳ್ಳೊಳ್ಳಿ, ಪ್ರಕಾಶ ಹಿರೇಮಠ, ವಿನಾಯಕ ಪೂಜಾರಿ, ಭರತ ಮಂಗಳಗಟ್ಟಿ. ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಎಚ್‌. ರಾಮನಗೌಡರ, ಆರ್‌.ಎಫ್. ಕವಳಿಕಾಯಿ ಸೇರಿದಂತೆ ನಾಲ್ವರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಬಸವರಾಜ ಬಳಿಗಾರ ಸೇರಿದಂತೆ ಐವರಿಗೆ, ಪೊಲೀಸ್‌ ಇಲಾಖೆಯಲ್ಲಿ ಎಂ.ಎಸ್. ಹೂಗಾರ ಸೇರಿ 16 ಜನರಿಗೆ. ಕ್ರೀಡಾ ವಿಭಾಗದಲ್ಲಿ ಪಾಂಡಪ್ಪ ಪೈಲ್ವಾನ್ ಸೇರಿ ಐವರಿಗೆ. ವಿಮಾನ ನಿಲ್ದಾಣ ಸರ್ಕಾರಿ ಸೇವೆಯಲ್ಲಿ ಪಿಐ ಮಹೇಶ ಹುದ್ದಾರ ಸೇರಿ ಇಬ್ಬರಿಗೆ, ನ್ಯಾಯವಾದಿ ಕ್ಷೇತ್ರದಲ್ಲಿ ಇಬ್ಬರಿಗೆ, ಕೃಷಿ ಕ್ಷೇತ್ರದಲ್ಲಿ ನಾಲ್ವರಿಗೆ, ಕಲಾ ಸೇವೆ ಕ್ಷೇತ್ರದಲ್ಲಿ ಮೂವರಿಗೆ, ಸಮಾಜ ಸೇವೆ ಕ್ಷೇತ್ರದಲ್ಲಿ 15 ಜನರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಮೂವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಹಾಗೂ ಮಹಿಳಾ ಕ್ಷೇತ್ರದಲ್ಲಿ ಸೇವೆಗೈದ ವಿಜಯಲಕ್ಷ್ಮೀ ಕಲಬುರ್ಗಿ ಸೇರಿದಂತೆ 20 ಮಹಿಳೆಯರಿಗೆ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ತಾಲೂರ, ಚಂದ್ರಶೇಖರ ಮಾದಣ್ಣವರ, ಯಲ್ಲಪ್ಪ ಕುಂದಗೋಳ, ಜಗದೀಶ ರಿತ್ತಿ, ಗುರು ಚಲವಾದಿ ಸೇರಿದಂತೆ ಹಲವರಿದ್ದರು.

Share this article