ಪ್ರಚಾರಕ್ಕಾಗಿ ಎ.ಮಂಜುರಿಂದ ಅಪಪ್ರಚಾರ

KannadaprabhaNewsNetwork |  
Published : Feb 18, 2024, 01:35 AM IST
17ಕೆಆರ್ ಎಂಎನ್ 5.ಜೆಪಿಜಿಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳಿಗೆ ಸಮರ್ಥ ಅಭ್ಯರ್ಥಿ ಸಿಗುತ್ತಿಲ್ಲ. ಹೀಗಾಗಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಾಲಕೃಷ್ಣರವರನ್ನು ಅವಹೇಳನ ಮಾಡಿದರೆ ಪ್ರಚಾರಕ್ಕೆ ಬರುತ್ತೇನೆ. ಆಗ ವರಿಷ್ಠರು ತನ್ನನ್ನು ಗುರುತಿಸುತ್ತಾರೆಂದು ಮಾಜಿ ಶಾಸಕ ಎ.ಮಂಜುನಾಥ್ ಹಗಲುಗನಸು ಕಾಣುತ್ತಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು ವಾಗ್ದಾಳಿ ನಡೆಸಿದರು.

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳಿಗೆ ಸಮರ್ಥ ಅಭ್ಯರ್ಥಿ ಸಿಗುತ್ತಿಲ್ಲ. ಹೀಗಾಗಿ ಸಂಸದ ಡಿ.ಕೆ.ಸುರೇಶ್ ಮತ್ತು ಶಾಸಕ ಬಾಲಕೃಷ್ಣರವರನ್ನು ಅವಹೇಳನ ಮಾಡಿದರೆ ಪ್ರಚಾರಕ್ಕೆ ಬರುತ್ತೇನೆ. ಆಗ ವರಿಷ್ಠರು ತನ್ನನ್ನು ಗುರುತಿಸುತ್ತಾರೆಂದು ಮಾಜಿ ಶಾಸಕ ಎ.ಮಂಜುನಾಥ್ ಹಗಲುಗನಸು ಕಾಣುತ್ತಿದ್ದಾರೆ ಎಂದು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬೊಬ್ಬ ಮುಖಂಡರಿಂದ ಬಂಡವಾಳ ಹಾಕಿಸಿ ಬಾಲಕೃಷ್ಣರವರು ಚುನಾವಣೆ ಮಾಡುತ್ತಿದ್ದಾರೆ. ಆ ಮುಖಂಡರಿಗೆ ಯಾವುದೇ ಅಧಿಕಾರ ನೀಡುತ್ತಿಲ್ಲವೆಂದು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ನಾನು ಸಾಮಾನ್ಯ ಕುಟುಂಬದಿಂದ ಬಂದವನು. ಬಾಲಕೃಷ್ಣರವರು ನನ್ನನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕನನ್ನಾಗಿ ಮಾಡಿ ಉಪಾಧ್ಯಕ್ಷ ಸ್ಥಾನದಲ್ಲಿ

ಕೂರಿಸಿದ್ದಾರೆ. ನನಗೆ ಅಧಿಕಾರ ದೊರಕಿಸಿಕೊಡಲು ಅವರು ಸ್ವಂತ ಹಣ ಖರ್ಚು ಮಾಡಿದ್ದಾರೆ. ನನ್ನಂತಹ ಹತ್ತಾರು ಯುವಕರಿಗೆ ಅಧಿಕಾರ ಕೊಡಿಸುವಲ್ಲಿ ಬಾಲಕೃಷ್ಣರವರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.

ಬಾಲಕೃಷ್ಣರವರ ಜೊತೆಗೆ ನಮ್ಮೆಲ್ಲರ ಒಡನಾಟ ಚೆನ್ನಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಅಭಿವೃದ್ಧಿಯತ್ತ ಗಮನ ಹರಿಸುವಂತೆ ಸಲಹೆ ನೀಡುತ್ತಾರೆ. ಅದೇ ರೀತಿ ಮಂಜುನಾಥ್ ಅವರು ಅಪಪ್ರಚಾರ ಮಾಡುವುದನ್ನು ಬಿಡಬೇಕು. ಅಭಿವೃದ್ಧಿ ವಿಚಾರವಾಗಿ ಚರ್ಚೆಗೆ ಬರುವುದಾದರೆ ನಾವು ಸಿದ್ಧರಾಗಿದ್ದೇವೆ. ಬಾಲಿಷ ಹೇಳಿಕೆ ನೀಡುವುದನ್ನು ಮುಂದುವರೆಸಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಸುರೇಶ್ ಮತ್ತು ಬಾಲಕೃಷ್ಣ ಜೋಡೆತ್ತಿನಂತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಬ್ಬರ ನಡುವೆ ತಂದಿಕ್ಕುವ ಕೆಲಸ ಮಾಡುವುದು ಬೇಡ. ನೀವು ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಯಾರು ಕಾರಣ ಎಂಬುದೆಲ್ಲ ಗೊತ್ತಿದೆ. ನಮ್ಮ ಮನೆ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಯರೇಹಳ್ಳಿ ಮಂಜು ಟಾಂಗ್ ನೀಡಿದರು.

ತಾಪಂ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಬಾಲಕೃಷ್ಣರವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ಬೇಡ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆದು ತೋರಿಸಲೆಂದು ಮಾಜಿ ಶಾಸಕರು ಸವಾಲು ಹಾಕಿದ್ದರು. ಈಗ ಬಾಲಕೃಷ್ಣ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದು, ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ಗಂಗಾಧರ್ ಬಳಿ ಹಣ ಪಡೆದರೆಂದು ಆರೋಪ ಮಾಡುತ್ತಿದ್ದೀರಿ. ನೀವು ಜಿಪಂ ಟಿಕೆಟ್ ಕೊಡಿಸುವ ಭರವಸೆ ನೀಡಿ ತಹಸೀಲ್ದಾರ್ ಶಿವಣ್ಣ ಅವರಿಂದ ಹಣ ಖರ್ಚು ಮಾಡಿಸುತ್ತಿದ್ದೀರಿ. ಇದು ಮೋಸ ಅಲ್ಲವೇ. ಈ ಮಾತನ್ನು ನಿಮ್ಮ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿರುವ 224 ಶಾಸಕರ ಪೈಕಿ ಬಾಲಕೃಷ್ಣರವರು ಸೂಪರ್ ಎಂಎಲ್ ಎ ಆಗಿದ್ದಾರೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ, ಅಭಿವೃದ್ಧಿ ಮಾಡುತ್ತಿದ್ದಾರೆ. ಇದನ್ನು ಸಹಿಸದ ನೀವು ಅಸೂಯೆ ಪಡುತ್ತಿದ್ದೀರಾ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶ್ಯಾನುಭೋಗನಹಳ್ಳಿ ಗ್ರಾಪಂ ಅಧ್ಯಕ್ಷ ನರಸಿಂಹಮೂರ್ತಿ, ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಎಸ್. ಗಂಗಾಧರಯ್ಯ (ಗುಂಡ), ಅಕ್ಕೂರು ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ , ಮುಖಂಡರಾದ ರಾಮಚಂದ್ರ, ಕ್ಯಾಸಾಪುರ ಮಂಜುನಾಥ್ , ವೇದರಾಜು ಇತರರಿದ್ದರು.

ಕೋಟ್ ...

ಜಿಪಂ ಟಿಕೆಟ್ ಕೊಡಿಸುವುದಾಗಿ ಹೇಳಿ ಕೂಟಗಲ್ ಗಂಗಾಧರ್ ಅವರಿಂದ 50 ಲಕ್ಷ ಪಡೆದು ನಾಮ ಹಾಕಿದ್ದಾರೆಂದು ಮಾಜಿ ಶಾಸಕ ಮಂಜುನಾಥ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ನಮ್ಮ ನಾಯಕ ಬಾಲಕೃಷ್ಣರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಹಣಕಾಸಿನ ವ್ಯವಹಾರವನ್ನೂ ಮಾಡುತ್ತೇವೆ. ಜಿಪಂ ಟಿಕೆಟ್ ಗೆ ಹಣ ಕೊಟ್ಟಿದ್ದೇನೆಂಬುದು ಸುಳ್ಳು. ಮಂಜುನಾಥ್ ಗೆ ಇದು ಶೋಭೆ ತರುವುದಿಲ್ಲ. ಅವರ ಗೌರವ ಅವರೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

- ಅರೇಹಳ್ಳಿ ಗಂಗಾಧರ್ ಗೌಡ, ಸದಸ್ಯರು, ಕೂಟಗಲ್ ಗ್ರಾಪಂ17ಕೆಆರ್ ಎಂಎನ್ 5.ಜೆಪಿಜಿ

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌