ಸಣ್ಣ ಸಮುದಾಯಗಳು ಮುಂದೆ ಬರಬೇಕು

KannadaprabhaNewsNetwork |  
Published : Aug 18, 2026, 02:15 AM IST
ಹ | Kannada Prabha

ಸಾರಾಂಶ

ಸಮಾಜದಲ್ಲಿರುವ ಹಣ ಬಲ, ಜನಬಲ, ರಾಜಕೀಯ ಬಲವಿಲ್ಲದೆ ಸಣ್ಣ ಸಣ್ಣ ಸಮುದಾಯಗಳು ಮುಂದೆ ಬರಬೇಕೆಂದರೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದುವರಿಯಲು ಇರುವ ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಸಾಧ್ಯ ಎಂದು ಕಲಾವಿದ ಹಾಗೂ ರಾಜಕಾರಣಿ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಸಮಾಜದಲ್ಲಿರುವ ಹಣ ಬಲ, ಜನಬಲ, ರಾಜಕೀಯ ಬಲವಿಲ್ಲದೆ ಸಣ್ಣ ಸಣ್ಣ ಸಮುದಾಯಗಳು ಮುಂದೆ ಬರಬೇಕೆಂದರೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದುವರಿಯಲು ಇರುವ ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಸಾಧ್ಯ ಎಂದು ಕಲಾವಿದ ಹಾಗೂ ರಾಜಕಾರಣಿ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಶ್ರೀಮಂಜುನಾಥ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಹಾಗೂ ಸಾದರ ಸಮಾನ ಮನಸ್ಕ ಐಎಎಸ್, ಐಪಿಎಸ್ ತರಬೇತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಾದರು ಅಲ್ಪಸಂಖ್ಯಾತರಲ್ಲಿ ಸ್ವಲ್ಪ ಸಂಖ್ಯಾತರು.ನಮ್ಮಂತಹ ತುಳಿತಕ್ಕೆ ಒಳಗಾದ ಸಮುದಾಯಗಳು ಮೇಲೆ ಬರಲು ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗಲಿವೆ ಎಂದರು.

ಇಂದಿನ ಪೈಪೋಟಿ ಯುಗದಲ್ಲಿ ನಮ್ಮ ಮಕ್ಕಳು ನಮಗಿಂತ ಬೌದ್ಧಿಕವಾಗಿ ಮೇಲಿದ್ದಾರೆ. ತಾಂತ್ರಿಕತೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತಿದ್ದಾರೆ. ಆದರೆ ತಮ್ಮ ಸಾಧನೆಗೆ ಆಸರೆಯಾದವರನ್ನು ಕನಿಷ್ಠ ಸ್ಮರಿಸುವ ಕೆಲಸ ಆಗುತ್ತಿಲ್ಲ. ತಮ್ಮ ಪ್ರಗತಿಯ ಹಿಂದಿರುವ ತಂದೆ, ತಾಯಿಗಳು, ಗುರು, ಹಿರಿಯರು, ಸಮುದಾಯದ ಸಹಕಾರವನ್ನು ನೆನಪಿನಲ್ಲಿಟ್ಟುಕೊಳ್ಳುವ ಗುಣ ಬೆಳೆಸಿ ಕೊಳ್ಳಬೇಕಿದೆ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಶಶಿಧರ್ ಮಾತನಾಡಿದರು. ಕೆಪಿಟಿಸಿಎಲ್‌ನ ಚೀಫ್ ಎಂಜಿನಿಯರ್ ಸುಧಾ ರವಿಶಂಕರ್, ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಪಿ.ಮೂರ್ತಿ ಜಂಟಿ ಕಾರ್ಯದರ್ಶಿ ಬಿ.ಎಚ್.ನಂಜುಂಡಯ್ಯ , ಬಿ.ಆರ್.ರಮೇಶ್, ಡಿವೈಎಸ್ಪಿ ಪ್ರವೀಣ್ ಎಂ, ಉದ್ಯಮಿ ಟಿ,ಜಿ.ಗಿರೀಶ್, ಟ್ರಸ್ಟ್ ನ ತಾಲೂಕು ಅಧ್ಯಕ್ಷ ಅಣ್ಣೇನಹಳ್ಳಿ ಶಿವಕುಮಾರ್,ಕಾರ್ಯದರ್ಶಿ ಪಿ.ನಾಗರಾಜು ಸೇರಿದಂತೆ ಟ್ರಸ್ಟ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶುದ್ಧ ನೀರು ಸೇವನೆಯಿಂದ ಉತ್ತಮ ಆರೋಗ್ಯ
ಕಾಂಗ್ರೆಸ್‌ನಿಂದ ವಂದೇ ಮಾತರಂ ಗೀತೆಗೆ ಅಗೌರವ, ಬಿಜೆಪಿ ಪ್ರತಿಭಟನೆ