ಎಲ್ಲೆಂದರಲ್ಲಿ ಧೂಮಪಾನ, ನಿಯಂತ್ರಣವೇ ಸವಾಲು!

KannadaprabhaNewsNetwork |  
Published : Oct 12, 2026, 03:00 AM IST
ಧೂಮ್ರಪಾನಿಗಳ ಸ್ವಚ್ಛಂದತೆಗಿಲ್ಲ ಮೂಗುದಾರ! | Kannada Prabha

ಸಾರಾಂಶ

ಬೃಹತ್ ಕಟ್ಟಡಗಳು, ಶಾಪಿಂಗ್ ಮಾಲ್, ಪ್ರತಿಷ್ಠಿತ ಕಂಪನಿ, ಹೋಟೆಲ್‌ ಹಾಗೂ ಪ್ರಮುಖ ರಸ್ತೆಗಳು ಅನಧಿಕೃತ ಧೂಮಪಾನ ಕೇಂದ್ರಗಳಾಗುತ್ತಿವೆ. ಇದಕ್ಕೆ ಪೂರಕವಾಗಿ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಸಣ್ಣ-ಪುಟ್ಟ ಹೋಟೆಲ್, ಬೀಡಾ ಅಂಗಡಿ ಸೇರಿ ಸಾರ್ವಜನಿಕ ಸ್ಥಳವೆಂಬುದನ್ನು ಮರೆತ ಧೂಮಪಾನಿಗಳು ಗುಂಪು ಗುಂಪಾಗಿ ರಸ್ತೆ ಮೇಲೆ ನಿಂತು ಹೊಗೆ ಬಿಡುತ್ತಿದ್ದಾರೆ.

ಶಿವಾನಂದ ಮಹಾಬಳಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೃಹತ್ ಕಟ್ಟಡಗಳು, ಶಾಪಿಂಗ್ ಮಾಲ್, ಪ್ರತಿಷ್ಠಿತ ಕಂಪನಿ, ಹೋಟೆಲ್‌ ಹಾಗೂ ಪ್ರಮುಖ ರಸ್ತೆಗಳು ಅನಧಿಕೃತ ಧೂಮಪಾನ ಕೇಂದ್ರಗಳಾಗುತ್ತಿವೆ. ಇದಕ್ಕೆ ಪೂರಕವಾಗಿ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಸಣ್ಣ-ಪುಟ್ಟ ಹೋಟೆಲ್, ಬೀಡಾ ಅಂಗಡಿ ಸೇರಿ ಸಾರ್ವಜನಿಕ ಸ್ಥಳವೆಂಬುದನ್ನು ಮರೆತ ಧೂಮಪಾನಿಗಳು ಗುಂಪು ಗುಂಪಾಗಿ ರಸ್ತೆ ಮೇಲೆ ನಿಂತು ಹೊಗೆ ಬಿಡುತ್ತಿದ್ದಾರೆ. ಇಂತವರ ಸಂಖ್ಯೆ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಧೂಮಪಾನ ನಿಯಂತ್ರಣ ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ.

ಬನಹಟ್ಟಿಯ ಬಸ್ ನಿಲ್ದಾಣ, ಗಾಂಧಿ ವೃತ್ತ, ಮಂಗಳವಾರ ಪೇಟೆ, ಸೋಮವಾರ ಪೇಟೆ, ರಬಕವಿಯ ಮಾರುಕಟ್ಟೆ, ಭಗೀರಥ ವೃತ್ತ ಸೇರಿದಂತೆ ಎಲ್ಲೆಂದರಲ್ಲಿ ರೀತಿ ನಿಯಮಗಳ ಭಯವಿಲ್ಲದೆ ಗುಂಪು ಗುಂಪಾಗಿ ನಿಂತು ಸಿಗರೇಟ್‌ ಸೇದುತ್ತಿದ್ದಾರೆ. ಈ ಪ್ರದೇಶದಲ್ಲಿಯೇ ಕೆಲವೆಡೆ ಸ್ಮೋಕಿಂಗ್ ಸ್ಪಾಟ್ ಹೆಸರಿನಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಚಿಕ್ಕ ಚಿಕ್ಕ ಕೋಣೆಗ ನಿರ್ಮಿಸಿಕೊಂಡಿದ್ದಾರೆ. ಈ ಕೋಣೆಯಲ್ಲಿಯೇ ಹತ್ತಾರು ಜನರು ಒಂದೆಡೆ ಸೇರಿ ರಾಜಾರೋಷವಾಗಿ ಧೂಮಪಾನ ಮಾಡುತ್ತಾರೆ. ಇದರಿಂದ ಅಕ್ಕಪಕ್ಕದ ಪರಿಸರ ಹಾಳಾಗುವುದಲ್ಲದೆ, ವಾಸಿಸುವವರು ಹಿಡಿಶಾಪ ಹಾಕುವಂತಾಗಿದೆ.

ನಾಮ್‌ ಕೆ ವಾಸ್ತೆ ನಿಯಮಗಳು: ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡಿದರೆ ₹ 200 ದಂಡ, ಪ್ರಕರಣ ದಾಖಲು ಹೀಗೆ ಕಾನೂನು ಮತ್ತು ನಿಯಮಗಳಿದ್ದರೂ ಅವು ಫಲಕಗಳಿಗಷ್ಟೇ ಸೀಮಿತಗೊಂಡಿವೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಷ್ಟೊಂದು ರಾಜಾರೋಷವಾಗಿ ಸಿಗರೇಟ್, ಬೀಡಿ ಸೇದುತ್ತಿದ್ದರೂ ಒಮ್ಮೆಯೂ ದಂಡ ಅಥವಾ ಕಾನೂನಿನ ಭಯವಿಲ್ಲದೆ ಗುಂಪು ಗುಂಪಾಗಿ ವಯೋವೃದ್ಧರಾದಿಯಾಗಿ ಧೂಮಪಾನ ಮಾಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಸಿಗರೇಟ್ ಹಾಗೂ ಗುಟ್ಕಾದಿಂದ ೩೦ ರಿಂದ ೪೦ ವರ್ಷದ ಯುವಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ೧ ಸಿಗರೇಟ್ ಮನುಷ್ಯನ ೨೦ ನಿಮಿಷದ ಆಯುಷ್ಯ ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಾವಾ ಸೇವಿಸುವವರ ಸಂಖ್ಯೆಯೂ ಹೇರಳವಾಗಿದ್ದು, ಇವುಗಳ ನಿಯಂತ್ರಣವಾಗಬೇಕು.

- ಡಾ.ಜಿ.ಎಚ್.ಚಿತ್ತರಗಿ, ಹೃದ್ರೋಗ ತಜ್ಞರು, ರಬಕವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳುವುದೇ ಶಕ್ತಿ ಆರಾಧನೆ: ರಂಭಾಪುರಿ ಜಗದ್ಗುರು
ಪಠ್ಯಕ್ರಮದಲ್ಲಿ ಧರ್ಮದ ಕುರಿತ ಪಾಠಗಳು ಅವಶ್ಯ: ಪ್ರಹ್ಲಾದ ಜೋಶಿ