ಸ್ನೇಹ ಸ್ಪೋರ್ಟ್ಸ್ ಕ್ಲಬ್‌ ವಾಲಿಬಾಲ್ ಪಂದ್ಯಾಕೂಟ ಸಂಪನ್ನ

KannadaprabhaNewsNetwork |  
Published : Sep 02, 2026, 04:00 AM IST
31ಸನ್ಮಾನ | Kannada Prabha

ಸಾರಾಂಶ

ಇಲ್ಲಿನ ಹಾವಂಜೆಯ ಸ್ನೇಹ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಹಾವಂಜೆ ಹಾಗೂ ಆಸುಪಾಸಿನ ವಾಲಿಬಾಲ್ ಆಟಗಾರರಿಗೆ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಕೂಟ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಹಾವಂಜೆಯ ಸ್ನೇಹ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಹಾವಂಜೆ ಹಾಗೂ ಆಸುಪಾಸಿನ ವಾಲಿಬಾಲ್ ಆಟಗಾರರಿಗೆ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಕೂಟ ನಡೆಯಿತು.ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗೆ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಆಗಿ ಭಡ್ತಿ ಪಡೆದ ಹಾವಂಜೆಯ ಗುರುಪ್ರಸಾದ್ ಮುಗ್ಗೇರಿ ಹಾಗೂ ಮಂಜುನಾಥ್ ಹಾವಂಜೆ ಅವರನ್ನು ಸನ್ಮಾನಿಸಲಾಯಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಸ್ನೇಹ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಉದಯ ಕೋಟ್ಯಾನ್ ಹಾವಂಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಸಂಘದ ಪ್ರೊತ್ಸಾಹಕರಾದ ಸತ್ಯಧಾಮ ಲೇಔಟ್ ಮಾಲಕ ರಾಮ ಮೂರ್ತಿ ಭಟ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಸಖರಾಮ್ ಗೊಳಿಕಟ್ಟೆ ಅವರನ್ನು ಸನ್ಮಾನಿಸಲಾಯಿತು.ಸ್ಪೋರ್ಟ್ಸ್ ಕ್ಲಬ್ ನ ಉಪಾಧ್ಯಕ್ಷ ರಿಚರ್ಡ್ ಡಿಸೋಜ ಹಾವಂಜೆ, ಪ್ರಧಾನ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ಕೋಶಾಧಿಕಾರಿ ರಾಜೇಂದ್ರ ಪೂಜಾರಿ, ಪದಾಧಿಕಾರಿಗಳಾದ ಜಗದೀಶ್ ಸನಿಲ್, ರವೀಂದ್ರ ಪೂಜಾರಿ, ಪ್ರಭಾಕರ ಮರಕಲ, ಸತೀಶ ಪೂಜಾರಿ, ಶ್ರೀನಿವಾಸ್ ಪೂಜಾರಿ ಉಜಂಗಾರು ಹಾಗೂ ಸಂಘದ ಸದಸ್ಯರು, ಊರ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆ ತುಂಬಿಸಿ ಕುಡಿವ ನೀರಿನ ಸಮಸ್ಯೆ ನೀಗಿಸಿ: ರೈತರ ಆಗ್ರಹ
ಬನಹಟ್ಟಿಯಲ್ಲೇ ಪ್ರಜಾಸೌಧ ನಿರ್ಮಿಸಿ: ಕರಿಗಾರ