ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದ ಇನ್ನರ್ ವೀಲ್ ಕ್ಲಬ್‌ಗೆ ಮಂಗಳವಾರ ಅಧಿಕೃತ ಭೇಟಿ ನೀಡಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವ ಮತ್ತು ಒಳ್ಳೆಯ ಸೇವೆ ಮಾಡುತ್ತಾ ಬಂದಿರುವ ಕಾರಣ ಇನ್ನರ್ ವೀಲ್ ಕ್ಲಬ್ ವಿಶೇಷ ಸ್ಥಾನ ಗಳಿಸಿದೆ ಎಂದರು.
ಯಾವುದೇ ಸೇವೆ ಮಾಡಿದರೂ ಪ್ರತಿಯೊಬ್ಬರೂ ನೆನಪಿಸಿಕೊಳ್ಳುವಂತಿರಬೇಕು. ಸೇವೆಯಿಂದ ನಮಗೆ ಮೊದಲು ಸ್ವಯಂ ಸಂತೃಪ್ತಿ ಸಿಗಬೇಕು. ಇತರರಿಗೂ ಸ್ಪೂರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ನಮ್ಮ ಅವಶ್ಯವಿದ್ದು ಅವುಗಳ ಸಂಕಷ್ಟ ಅರಿತು ಕಾರ್ಯೋನ್ಮುಖರಾಗಬೇಕು ಎಂದರು.ಕುಶಾಲನಗರ ಕ್ಲಬ್ ಅಧ್ಯಕ್ಷೆ ಚಿತ್ರ ರಮೇಶ್ ಮಾತನಾಡಿ, ಸ್ಥಳೀಯ ಸಂಸ್ಥೆ ಮೂಲಕ ನಡೆಸಿದ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.ಅಂತಾರಾಷ್ಟ್ರೀಯ ಬ್ಯಾಂಡಿ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿರುವ ತನುಷ್ಕ ಮತ್ತು ಅಂತಾರಾಷ್ಟ್ರೀಯ ಸೈನ್ಸ್ ಒಲಂಪಿಯಡ್ ನಲ್ಲಿ 617 ರ್‍ಯಾಂಕ್ ಪಡೆದ ಶಾರ್ವರಿ ಅವರನ್ನು ಸನ್ಮಾನಿಸಲಾಯಿತು.