ಶೈಕ್ಷಣಿಕ ಪ್ರಗತಿಯಿಂದ ಸಾಮಾಜಿಕ, ಆರ್ಥಿಕ ಬೆಳವಣಿಗೆ ಸಾಧ್ಯ: ಪರಶುರಾಮ್ ಕನ್ನಮ್ಮನವರ್

KannadaprabhaNewsNetwork |  
Published : May 25, 2024, 12:54 AM IST
24ಎಎನ್‍ಟಿ1ಇಪಿ:ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿರುವ ಗಂಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ಕಲಾಕರ್ ನೃತ್ಯ ಶಾಲೆಯ ಅಧ್ಯಕ್ಷ ಎಸ್‍ .ಎ ಅಮಿತ್‍ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‍ ಗೀಳನ್ನು ಬಿಟ್ಟು, ಹೆಚ್ಚು-ಹೆಚ್ಚು ಪುಸ್ತಕಗಳನ್ನು ಹಾಗೂ ದಿನ ಪತ್ರಿಕೆ, ವಾರ ಪತ್ರಿಕೆ, ಸ್ಪರ್ಧಾ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಾಕ ಪರೀಕ್ಷೆಗಳ ಎದುರಿಸಲು ಸುಲಭವಾಗುತ್ತದೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ಬೇಸ್ತರ ಸಮಾಜ ಸೇರಿ ವಿವಿಧ ಹಿಂದುಳಿದ ವರ್ಗಗಳ ಸಮುದಾಯಗಳು ಅಭಿವೃದ್ಧಿಯಾಗಲು ಪ್ರತಿಯೊಬ್ಬರು ಶಿಕ್ಷಣ ಕಲಿಯಬೇಕು. ಶೈಕ್ಷಣಿಕ ಪ್ರಗತಿ ಸಾಧಿಸಿದರೆ, ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಗತಿ ಸಾಧಿಸಲು ಸಾಧ್ಯ ಎಂದು ಆನವಟ್ಟಿಯ ಬೆಸ್ತರ ಸಮಾಜದ ಅಧ್ಯಕ್ಷ ಪರಶುರಾಮ್ ಕನ್ನಮ್ಮನವರ್ ಅಭಿಪ್ರಾಯಿಸಿದರು.

ತಿಮ್ಮಾಪುರ ಗ್ರಾಮದ ಗಂಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ, ಗಂಗಾಪರಮೇಶ್ವರ ದೇವಸ್ಥಾನ ಸಮಿತಿ, ಬೆಸ್ತರ ಸಮಾಜ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಅತ್ಯುತ್ತಮ ಅಂಕ ಗಳಿಸುವ ಜೊತೆಗೆ, ತನ್ನ ಕುಟುಂಬ ಹಾಗೂ ಗುರು ಹಿರಿಯರ ಗೌರವಿಸುವುದು. ಮತ್ತು ವಿನಯದಿಂದ ನಡೆದುಕೊಳ್ಳುವ ಸದ್ಗುಣಗಳ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಲಾಕರ್ ನೃತ್ಯ ಶಾಲೆಯ ಅಧ್ಯಕ್ಷ ಎಸ್‍ .ಎ ಅಮಿತ್‍ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‍ ಗೀಳನ್ನು ಬಿಟ್ಟು, ಹೆಚ್ಚು-ಹೆಚ್ಚು ಪುಸ್ತಕಗಳನ್ನು ಹಾಗೂ ದಿನ ಪತ್ರಿಕೆ, ವಾರ ಪತ್ರಿಕೆ, ಸ್ಪರ್ಧಾ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಾಕ ಪರೀಕ್ಷೆಗಳ ಎದುರಿಸಲು ಸುಲಭವಾಗುತ್ತದೆ ಎಂದರು.ವಿದ್ಯಾರ್ಥಿಗಳು, ಪೋಷಕರಿಗೆ ಸನ್ಮಾನ: ಎಸ್‍.ಎ ಶ್ರೇಷ್ಠ ಶೇ 98.24, ನಾಗವೇಣಿ ಎಂ. ಕೇಸರಿ ಶೇ 96.96, ಎಸ್‍. ನಂದಿತಾ ಶೇ 96.96,ಎಸ್‍. ಸುಮತೀಂದ್ರ ಶೇ 96.8, ಎಸ್‍.ಕೆ ವರ್ಷ ಶೇ 94.72, ಎಂ. ಜಯಂತಿ ಶೇ 90, ಎನ್‍. ಗಣೇಶ ಶೇ 87.58, ಎನ್‍.ಮೇಘನ ಶೇ 86.24 ಎಸ್ಸೆಸ್ಸೆಲ್ಸಿಯಲ್ಲಿ ಉತ್ಯುತ್ತಮ ಸಾಧನೆ ಮಾಡಿದ ಈ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉತ್ತಮ ಸಾಧನೆ ಮಾಡಿರುವ ಮಕ್ಕಳ ಪೋಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿಯ ಉಪಾಧ್ಯಕ್ಷ ರಾಮಪ್ಪ ಬಡಗಿ, ಕಾರ್ಯದರ್ಶಿ ಮಂಜುನಾಥ, ಖಜಾಂಚಿ ಬಿ. ಪರಮೇಶ್ವರ, ಮುಖಂಡರಾದ ಚಂದ್ರಪ್ಪ ಗಾಳೇರ್, ವಿಶ್ವನಾಥ, ಮಧುಕೇಶ್ವರ್, ಹುಣಸವಳ್ಳಿ ರಾಜಣ್ಣ, ಟಿ.ಆರ್ ಅಶೋಕ, ಮಂಜುನಾಥ್ ಸುಣಗಾರ, ಎಸ್‍.ಪಿ ಆನಂದ್, ಭಾನುಪ್ರಕಾಶ್, ರತ್ನಮ್ಮ ಗಾಳ್‍ಪೂಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ