ಬುದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಬೇಕು : ನಿಂಗಯ್ಯ

KannadaprabhaNewsNetwork |  
Published : May 25, 2024, 12:54 AM IST
ಚಿಕ್ಕಮಗಳೂರಿನ ಹೊರ ವಲಯದಲ್ಲಿರುವ  ತೇಗೂರಿನ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಎಚ್‌.ಎಂ. ರುದ್ರಸ್ವಾಮಿ ಅವರು ಮಾತನಾಡಿದರು. ಬಿ.ಬಿ. ನಿಂಗಯ್ಯ, ಕೆ. ಮಹಮದ್‌, ಎಂ.ಎಲ್‌. ಮೂರ್ತಿ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಭಗವಾನ್ ಬುದ್ಧರ ಜನ್ಮ ದಿನವಾದ ಬುದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಡಾ. ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.

ತೇಗೂರಿನ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಗವಾನ್ ಬುದ್ಧರ ಜನ್ಮ ದಿನವಾದ ಬುದ್ಧ ಪೌರ್ಣಿಮೆಯನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕು ಎಂದು ಡಾ. ಬಿ.ಆರ್‌. ಅಂಬೇಡ್ಕರ್‌ ಅಧ್ಯಯನ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.

ತೇಗೂರಿನ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೌದ್ಧ ಧರ್ಮ ಜಗತ್ತಿನ ಶ್ರೇಷ್ಠ ಧರ್ಮದಲ್ಲಿ ಒಂದಾಗಿದ್ದು ಮಾನವೀಯ ಮೌಲ್ಯ ಸಾರುವ ಬೌದ್ಧ ಧರ್ಮಕ್ಕೆ ಅಂಬೇಡ್ಕರ್‌ ಮತಾಂತರವಾಗುವ ಮೂಲಕ ಶೋಷಿತ ಸಮಾಜಕ್ಕೆ ದಾರಿ ತೋರಿಸಿದ್ದು ಅದರಂತೆ ದಲಿತ ಸಮೂಹ ಸಾಗುತ್ತಿದೆ ಎಂದು ಹೇಳಿದರು.

ತೇಗೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲಿ ಜಿಲ್ಲೆಯ ಜನರ ಸರ್ವ ಜನಾಂಗದ ಏಳಿಗೆಗಾಗಿ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ಸೇರಿದಂತೆ ಎಲ್ಲಾ ಮಹನೀಯರ ಆದರ್ಶಗಳನ್ನು ಪ್ರಸಾರ ಮಾಡುವ ಕೇಂದ್ರವನ್ನಾಗಿ ಮಾಡುವ ಹಲವಾರು ಧ್ಯೇಯೋದ್ದೇಶಗಳನ್ನು ಹೊಂದಿದ್ದು ಈ ಸಂಸ್ಥೆಗೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿದರು.

ಪ್ರಧಾನ ಭಾಷಣ ಮಾಡಿದ ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಎಚ್.ಎಂ. ರುದ್ರಸ್ವಾಮಿ ಮಾತನಾಡಿ, ಜಗತ್ತಿನಾದ್ಯಂತ ಬೌದ್ಧಧರ್ಮ ಅನುಸರಿಸಿ ಬುದ್ಧ ಪೌರ್ಣಿಮೆ ಆಚರಿಸಲಾಗುತ್ತಿದೆ. ವಿವೇಕಾನಂದರಂತಹ ಮಹಾನ್‌ ದಾರ್ಶನಿಕರು ಬುದ್ಧನ ಪ್ರಭಾವಕ್ಕೆ ಒಳಗಾಗಿದ್ದಾರೆಂದು ಹೇಳಿದರು.ಬೌದ್ಧ ಧರ್ಮವೆಂದರೆ ಸರಿಯಾಗಿ ನಡೆಯುವುದು ಎಂದರ್ಥ. ಸಮಾನತೆ ವಿಚಾರಧಾರೆ ಬೌದ್ಧ ಧರ್ಮದಲ್ಲಿದೆ. ನವ್ಯ ಕಾಲದ ಸಾಹಿತಿಗಳಾದ ರಾಷ್ಟ್ರಕವಿ ಕುವೆಂಪು, ಬೇಂದ್ರೆ ಮುಂತಾದವರು ಬೌದ್ಧ ಧರ್ಮದ ಮಹತ್ವವನ್ನು ತಮ್ಮ ಸಾಹಿತ್ಯದಲ್ಲಿ ಪ್ರಸ್ತಾಪಿಸಿದ್ದರು ಎಂದು ವಿವರಿಸಿದರು.ಸುಳ್ಳು ಧರ್ಮದ ಭಾಗವಾಗಿರುವುದು ಪ್ರಸ್ತುತ ಕಾಲದ ದುರಂತವೆಂದ ರುದ್ರಸ್ವಾಮಿ, ನವ ಜೀವನ ಆಂದೋಲನದಲ್ಲಿ ಹೊಸ ಸಂಘರ್ಷ ಮಾಡಬಾರದು. ತಾಳ್ಮೆ, ಬುದ್ಧಿವಂತಿಕೆ, ಮೈತ್ರಿ ಭಾವದಿಂದ ಬಿಡುಗಡೆ ಹೊಂದಬೇಕೆಂದು ಕರೆ ನೀಡಿದರು.ಜಿಲ್ಲಾ ವಚನ ಸಾಹಿತ್ಯ ಪರಿಷತ್‌ ಅಧ್ಯಕ್ಷ ರವೀಶ್‌ ಬಸಪ್ಪ, ದಲಿತ ಹೋರಾಟಗಾರ ಪಿ. ವೇಲಾಯುಧನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ.ಮಹಮದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಪೋಟೋ ಫೈಲ್‌ ನೇಮ್‌ 24 ಕೆಸಿಕೆಎಂ 2ಚಿಕ್ಕಮಗಳೂರಿನ ಹೊರ ವಲಯದ ತೇಗೂರಿನ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಬುದ್ಧ ಪೂರ್ಣಿಮಾ ಕಾರ್ಯಕ್ರಮದಲ್ಲಿ ಎಚ್‌.ಎಂ. ರುದ್ರಸ್ವಾಮಿ ಮಾತನಾಡಿದರು. ಬಿ.ಬಿ. ನಿಂಗಯ್ಯ, ಕೆ. ಮಹಮದ್‌, ಎಂ.ಎಲ್‌. ಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ