ಅನುಷ್ಠಾನದಿಂದಲೇ ಸಮಾಜ ಸುಧಾರಣೆ ಸಾಧ್ಯ: ಸಿ.ವಿ. ಚಂದ್ರಶೇಖರ್

KannadaprabhaNewsNetwork |  
Published : Apr 21, 2026, 02:15 AM IST
ಬಸವ ಜಯಂತಿ ಅಂಗವಾಗಿ ಕೊಪ್ಪಳದಲ್ಲಿ ಮಂಗಳವಾರ ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿದರು. | Kannada Prabha

ಸಾರಾಂಶ

ಆಚರಣೆಗಿಂತ ಅನುಷ್ಠಾನಕ್ಕೆ ಮಹತ್ವ ಕೊಡುವ ತನಕ ಸಮಾಜ ಸುಧಾರಣೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.

ಕೊಪ್ಪಳ: ಆಚರಣೆಗಿಂತ ಅನುಷ್ಠಾನಕ್ಕೆ ಮಹತ್ವ ಕೊಡುವ ತನಕ ಸಮಾಜ ಸುಧಾರಣೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.

ಬಸವ ಜಯಂತಿ ಉತ್ಸವ ಸಮಿತಿ ಮತ್ತು ಬಸವಾನುಯಾಯಿ ಸಂಘ, ಸಂಸ್ಥೆಗಳು, ಕೊಪ್ಪಳ, ಜಂಟಿಯಾಗಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

"ಶತಮಾನಗಳಿಂದಲೂ ಬಸವಣ್ಣನವರ ತತ್ವಗಳ ಕುರಿತು ಮಾತನಾಡುತ್ತಲೇ ಬಂದಿದ್ದೇವೆ. ಆದರೆ, ಅವುಗಳ ಅನುಷ್ಠಾನಕ್ಕೆ ಅತ್ಯಂತ ಕಡಿಮೆ ಮಹತ್ವ ನೀಡಿದ್ದೇವೆ. ಆದ್ದರಿಂದ 12ನೇ ಶತಮಾನದಲ್ಲಿ ಕಂಡು ಬಂದ ಸಾಮಾಜಿಕ ದೋಷಗಳು 21ನೇ ಶತಮಾನದ ಸಮಾಜದಲ್ಲಿಯೂ ಮುಂದುವರೆದಿವೆ. ಬಸವಣ್ಣ ಪ್ರತಿಪಾದಿಸಿದ ಆಶಯಗಳ ಅನುಷ್ಠಾನದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ, " ಎಂದು ಹೇಳಿದರು.

ಸರಕಾರಗಳು ಬಸವಣ್ಣನ ಆಶಯಗಳನ್ನು ಜಯಂತಿಗೆ ಸೀಮಿತಗೊಳಿಸಿವೆ. ಆತನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಸರಕಾರಗಳೇ ಜಾತಿ ತಾರತಮ್ಯಗಳಲ್ಲಿ ತೊಡಗಿದ್ದು ಬಸವ ಸಂಸ್ಕೃತಿಗೆ ಮಾಡಿದ ಅವಮಾನ. ಆದ್ದರಿಂದ ನಾವೆಲ್ಲ ಬಸವಣ್ಣನ ತತ್ವದ ಕುರಿತು ಮಾತನಾಡದೆ ಅನುಷ್ಠಾನಕ್ಕೆ ಮಹತ್ವ ನೀಡಬೇಕು ಎಂದರು.

ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಕಾಯಕ, ದಾಸೋಹ ಕಲ್ಪನೆಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅನುಷ್ಠಾನವಾಗುವ ಶತಮಾನಗಳ ಮೊದಲೇ ಬಸವಣ್ಣನ ನೇತೃತ್ವದಲ್ಲಿ ಕನ್ನಡ ನಾಡಿನಲ್ಲಿ ಅವು ಅನುಷ್ಠಾನಗೊಂಡಿದ್ದವು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಸತ್ತಿನ ಪರಿಕಲ್ಪನೆ ಆರಂಭವಾಗುವ ಮೊದಲೇ 12ನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪದ ಮೂಲಕ ಆ ಕಲ್ಪನೆಯನ್ನು ಅನುಷ್ಠಾನಗೊಳಿಸಿದ್ದ. ಈ ಅಂಶಗಳೇ ಬಸವಣ್ಣ ಜಾಗತಿಕ ನಾಯಕ ಹಾಗೂ ವಿಶ್ವಗುರು ಎಂಬುದನ್ನು ಸ್ಪಷ್ಟಪಡಿಸುತ್ತವೆ ಎಂದು ಹೇಳಿದರು.

ವಿಘಟನೆಗೊಂಡ ಈ ಕಾಲಘಟ್ಟದಲ್ಲಿ ಬಸವಣ್ಣನ ನೇತೃತ್ವದಲ್ಲಿ ಐಕ್ಯತೆಯಿಂದ ಬದುಕಿದ್ದ ಸುಮಾರು 99 ಪಂಗಡಗಳು ಮತ್ತೆ ಐಕ್ಯತೆಯಿಂದ ಬದುಕುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಸಂಸ್ಕೃತಿ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ ಸೊರಟೂರ್, ಜಿಲ್ಲಾ ಎಸ್‌ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ, ತಾಲೂಕು ಅಧ್ಯಕ್ಷ ವೀರೇಶಗೌಡ್ರ ದಳಪತಿ, ನಗರ ಘಟಕ ಅಧ್ಯಕ್ಷ ಸೋಮನಗೌಡ ಹೊಗರನಾಳ, ನಗರ ಘಟಕ ಮಹಿಳಾಧ್ಯಕ್ಷೆ ನಿರ್ಮಾಲಾ ಮೇದಾರ, ನಗರ ಘಟಕ ಮಹಿಳಾ ಗೌರವಾಧ್ಯಕ್ಷೆ ರತ್ನಮ್ಮ ಹಿರೇಮಠ, ನಗರ ಘಟಕ ಮಹಿಳಾ ಉಪಾಧ್ಯಕ್ಷೆ ಶರಣಮ್ಮ, ಮಹಿಳಾ ವಿದ್ಯಾರ್ಥಿ ಘಟಕ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ವಿಜಯಲಕ್ಷ್ಮೀ ನಗರ ಘಟಕ ಉಪಾಧ್ಯಕ್ಷ ಗಂಗಾಧರ ವಸ್ತ್ರದ, ತಾಲೂಕು ಎಸ್ ಟಿ ಘಟಕ ಅಧ್ಯಕ್ಷ ಸುರೇಶ ದದಗಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.ಕುಕನೂರಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ

ಕುಕುನೂರು: ಪಟ್ಟಣದಲ್ಲಿ ಬಣಜಿಗ ಸಮಾಜದ ನಗರ ಘಟಕ ವತಿಯಿಂದ ವಿಶ್ವಗುರು ಬಸವೇಶ್ವರ ಜಯಂತಿ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ಬಸವೇಶ್ವರ ಮೂರ್ತಿ ಮೆರವಣಿಗೆ ಜರುಗಿತು. ಬಣಜಿಗ ಸಮಾಜದ ನಗರ ಘಟಕದ ಅಧ್ಯಕ್ಷ ರವಿ ನಾಲ್ವಾಡ, ಪ್ರಮುಖರಾದ ಸಂಗಮೇಶ ಗುತ್ತಿ, ಬಸವರಾಜ ಮಂಡಲಗಿರಿ, ನಂದೀಶ ಗುತ್ತಿ, ಶರಣಪ್ಪ ಗುತ್ತಿ, ಮಲ್ಲಪ್ಪ ಗುತ್ತಿ, ಶರಣಪ್ಪ ಅರಿಕೇರಿ, ಶರಣಪ್ಪ ಚಂಡೂರು, ಕಳಕಪ್ಪ ಬೋರಣ್ಣವರ, ಶೇಖಪ್ಪ ಕಂಬಳಿ, ಮಹೇಶ ಯಕ್ಲಾಸಪೂರ, ಮಲ್ಲಪ್ಪ ಯಕ್ಲಾಸಪೂರ, ಪಂಚಾಕ್ಷರಿ ಯಕ್ಲಾಸಪೂರ, ಮಂಜು ಗದಗ, ರವಿ ಗದಗ, ಮಹಾಂತೇಶ ಜೋಳದ, ಪ್ರಕಾಶ ಜೋಳದ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ ಕಿಡಿಗೇಡಿಗಳಿಂದ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಧ್ವಂಸ
ವಚನಗಳು ಸರ್ವಕಾಲಕ್ಕೂ ಶ್ರೇಷ್ಠ: ಅಪರ ಜಿಲ್ಲಾಧಿಕಾರಿ