ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಕೋಟಿಪುರ ಗ್ರಾಮದ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಆವರಣದಲ್ಲಿ ತಾಲೂಕು ಯುವಜನ ಸಂಘದ 30ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಪರಿಸರ ಜಾಗೃತಿ ಪರಿಕಲ್ಪನೆ ಹೊಂದಿ ಸಸಿಗಳ ವಿತರಣೆಯಾಗಿದೆ. ಅರಣ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ರೋಟರಿ ಸಿಟಿ ಸೆಂಟರ್ ಬೆಂಗಳೂರಿನಿಂದಲೂ ಸಹ ಯುವಜನ ಸಂಘದ ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡಿದ್ದೇವೆ. ಮುಂದೆಯೂ ಇದೇ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿಯ ನಾಯಕ ನಟ ತಾಂಡವ್ ಸುದರ್ಶನ್ ಮಾತನಾಡಿ, ಕರ್ನಾಟಕದ ಹಲವಾರು ಭಾಗಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕು ಯುವಜನ ಸಂಘ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಕಂಪ್ಯೂಟರ್ ವಿತರಣೆ, ಆಂಬ್ಯುಲೆನ್ಸ್ ಸರ್ವಿಸ್, ವಿದ್ಯಾರ್ಥಿ ಪುರಸ್ಕಾರ, ಉಚಿತ ಸಸ್ಯಗಳ ವಿತರಣೆ, ನೋಟ್ ಪುಸ್ತಕಗಳ ವಿತರಣೆ, ಕುಡಿಯುವ ನೀರಿಗೆ ಅಳವಡಿಕೆ, ಟೈಲರಿಂಗ್ ಮಿಷನ್‌ಗಳ ಉಚಿತ ವಿತರಣೆ, ತೋಟಗಾರಿಕಾ ಸಸ್ಯಗಳ ವಿತರಣೆ ಈ ರೀತಿ ಹಲವಾರು ಕಾರ್ಯಕ್ರಮಗಳನ್ನು ಯುವಜನ ಸಂಘ ಮಾಡಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಚ್.ಸಿ. ಸಂಪತ್‌ಕುಮಾರ್ ಮಾತನಾಡಿದರು. ಹಿರಿಯ ಸದಸ್ಯ ಬಸವನಗೌಡ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟಿ ಸಂಗೀತ ಭಟ್, ತಾಪಂ ಇಒ ಪ್ರದೀಪ್‌ಕುಮಾರ್, ಮಲ್ಲಿಕಾರ್ಜುನ್ ದ್ವಾರಳ್ಳಿ, ಜನಪದ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಖಲಂದರ ಸಾಬ್, ರುದ್ರಗೌಡ ಸಿ. ಪಾಟೀಲ್, ಶಂಕರ್ ಶೇಟ್, ನಾಗರಾಜ್ ಗುತ್ತಿ, ಶಶಿಧರ್ ಸಕ್ರಿ, ಚರಿತ ಕಾರ್ತಿಕ್, ಸುಷ್ಮ ವಿಜಯಪುರ, ಉಮೇಶ್ ಉಡುಗಣಿ, ರಾಮಚಂದ್ರ, ಮಂಜುನಾಥ್, ರಾಮ ನಾಯಕ್, ಪ್ರಕಾಶ್ ಕೋಟಿಪುರ, ಕೇಶವ ನಾಯಕ್, ರಮೇಶ್ ಆಗಸನಹಳ್ಳಿ, ಮಹಾಂತೇಶ್ ಕಳ್ಳಿಕೋನಿ ಮೊದಲಾದವರು ಉಪಸ್ಥಿತರಿದ್ದರು.
ಕೋಟಿಪುರದಲ್ಲಿ ಯುವ ಸಂಭ್ರಮ ಕಾರ್ಯಕ್ರಮವನ್ನು ನಟ ನಾಗೇಶ್ವರ ವಿಜಯಪುರ ಉದ್ಘಾಟಿಸಿದರು.