ಕನ್ನಡಪ್ರಭ ವಾರ್ತೆ, ಅಜ್ಜಂಪುರ
ಪಟ್ಟಣದಲ್ಲಿ ಲಯನ್ಸ್ ಕ್ಲಬ್ ನಿಂದ ನಡೆದ ಅಜ್ಜಂಪುರ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರು. ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಕಳೆದ ಒಂದು ವರ್ಷದಿಂದ ವನಮಹೋತ್ಸವ. ಬಡವ ರಿಗೆ ಆಹಾರ ಕಿಟ್ ವಿತರಣೆ. ವಿವಿಧ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ. ರಕ್ತದಾನ ಶಿಬಿರ. ನೇತ್ರ ತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮ ನಡೆಸಿದ್ದೇವೆ ಎಂದರು.
ಈ ಎಲ್ಲಾ ಸೇವಾ ಚಟುವಟಿಕೆ ನಿಭಾಯಿಸಲು ಹಾಗೂ ಪ್ರತಿ ತಿಂಗಳ ಸಭೆ ಕರೆಯಲು ಸಾಕಷ್ಟು ಕಾರ್ಯಕ್ರಮ ಆಯೋಜಿಸಲು ಒಂದು ನಿಗದಿತ ನಿವೇಶನದ ಅಭದ್ರತೆ ನಮ್ಮ ಕ್ಲಬ್ಬಿಗೆ ಇದೆ. ಈ ಹಿನ್ನೆಲೆಯಲ್ಲಿ ತಾವೆಲ್ಲರೂ ಸೇರಿ ಒಂದು ಸಿ.ಎ ಜಾಗ ನೀಡಬೇಕೆಂದು ಸಮಾಜಪರ ಚಟುವಟಿಕೆಗೆ ಕೈ ಜೋಡಿಸಬೇಕೆಂದು ಜಿಎಂ ಪ್ರಕಾಶ್ ಮನವಿ ಸಲ್ಲಿಸಿದರು.ಅಜ್ಜಂಪುರ ಪಟ್ಟಣ ಪಂಚಾಯತಿ ಅಧ್ಯಕ್ಷ ರೇವಣ್ಣ ಮಾತನಾಡಿ ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ ಇಂತಹ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಸಹಕಾರವಿದೆ ಎಂದರು. ಸದಸ್ಯ ಅಣ್ಣಪ್ಪ ಮಾತನಾಡಿ ಯುವ ಪೀಳಿಗೆಗೆ ಸಮಾಜದ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರದು ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಜೊತೆಗೆ ನಾವೆಲ್ಲರೂ ಸೇರಿ ಉತ್ತಮ ಕಾರ್ಯಕ್ರಮ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕವಿತಾ ಕೇಶವ್ .ರಂಗಸ್ವಾಮಿ, ಅತ್ತತ್ತಿ ಮಧುಸೂದನ್, ನಿಸಾರ್, ತೀರ್ಥ ಪ್ರಸಾದ್, ಜೋಗಿ ಪ್ರಕಾಶ್, ಸುಮಲತಾ, ಬಿಂದು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ ಕೃಷ್ಣಮೂರ್ತಿ ಲಯನ್ಸ್ ಕ್ಲಬ್ ಸದಸ್ಯರಾದ ಸತೀಶ್, ಮಾಲತಿ, ಸಿದ್ದೇಗೌಡ, ಮಂಜು ಎಂ. ಹೊಸಳ್ಳಿ, ಕವಿತಾ, ಇಂದ್ರಮ್ಮ, ಶಿವಮೂರ್ತಿ ಇತರರು ಇದ್ದರು.