ರೋಟರಿ ಸಂಸ್ಥೆಯ ಸಾಮಾಜಮುಖಿ ಸೇವೆಗಳು ಅನನ್ಯ: ಅಭಿನಂದನ ಶೆಟ್ಟಿ

KannadaprabhaNewsNetwork |  
Published : Jul 22, 2024, 01:19 AM IST
 ಅಥಣಿ ರೋಟರಿ ಸಂಸ್ಥೆಯ  ನೂತನ ಪದಾಧಿಕಾರಿಗಳಿಗೆ  ಮಾಜಿ ಜಿಲ್ಲಾ ಪ್ರಾಂತಪಾಲ  ಅಭಿನಂದನ ಶೆಟ್ಟಿ  ಪದಗ್ರಹಣ ನೆರವೇರಿಸಿಕೊಟ್ಟರು. | Kannada Prabha

ಸಾರಾಂಶ

ಮಾಜಮುಖಿ ಸೇವೆಗಳೇ ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ವಿಶ್ವದಲ್ಲಿ ಮಾಡುತ್ತಿರುವ ಸಮಾಜಮುಖಿ ಸೇವೆಗಳು ನಿತ್ಯ ಮತ್ತು ನಿರಂತರವಾಗಿವೆ ಎಂದು 3182ರ ರೋಟರಿ ಜಿಲ್ಲಾ ಮಾಜಿ ಪ್ರಾಂತಪಾಲ ಅಭಿನಂದನ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಮಾಜಮುಖಿ ಸೇವೆಗಳೇ ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ರೋಟರಿ ಸಂಸ್ಥೆಯು ವಿಶ್ವದಲ್ಲಿ ಮಾಡುತ್ತಿರುವ ಸಮಾಜಮುಖಿ ಸೇವೆಗಳು ನಿತ್ಯ ಮತ್ತು ನಿರಂತರವಾಗಿವೆ ಎಂದು 3182ರ ರೋಟರಿ ಜಿಲ್ಲಾ ಮಾಜಿ ಪ್ರಾಂತಪಾಲ ಅಭಿನಂದನ ಶೆಟ್ಟಿ ಹೇಳಿದರು.

ಪಟ್ಟಣದ ಎಸ್.ಎಸ್.ಎಂ.ಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಅಥಣಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನ ರೋಟರಿ ಸಂಸ್ಥೆಯ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು. ಸ್ನೇಹ ಮತ್ತು ಸಹಬಾಳ್ವೆಯ ಮೂಲಕ ಆರಂಭವಾದ ರೋಟರಿ ಕ್ಲಬ್ ಶತಮಾನಗಳ ಇತಿಹಾಸ ಹೊಂದಿದೆ. ಈ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಪಕ್ಷ, ಪಂಗಡ ಮತ್ತು ಧರ್ಮಕ್ಕೆ ಸೀಮಿತವಾಗದೆ ಮಾನವ ಧರ್ಮ ಹಾಗೂ ಮಾನವೀಯತೆಯ ಆಧಾರದ ಮೇಲೆ ಅನೇಕ ಸಮಾಜಮುಖಿ ಸೇವೆ ಮಾಡುತ್ತಿದೆ. ಜಗತ್ತಿನಲ್ಲಿ ಪೋಲಿಯೋ ನಿರ್ಮೂಲನೆಗಾಗಿ ಶ್ರಮಿಸಿದ ಈ ರೋಟರಿ ಸಂಸ್ಥೆಯ ಕಾರ್ಯ ಅನನ್ಯ ಎಂದರು.

ಅಥಣಿ ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ಅಥಣಿ ರೋಟರಿ ಸಂಸ್ಥೆ ಸ್ಥಾಪನೆಯಾಗಿ 25 ವರ್ಷ ಪೂರೈಸಿದೆ. ಈ ಸಂಸ್ಥೆಯ ಮೂಲಕ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಿದೆ. ನೂತನ ಪದಾಧಿಕಾರಿಗಳು ಸಹ ಇಂತಹ ಕಾರ್ಯ ಮಾಡಲು ಮುಂದಾಗಬೇಕು. ತಮ್ಮ ರಚನಾತ್ಮಕ ಕಾರ್ಯಕ್ರಮಗಳಿಗೆ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ಹೇಳಿದರು.ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಅರುಣ ಸೌದಾಗರ ಮಾತನಾಡಿದರು.

ಇದೇ ಸಂದರ್ಭದಲ್ಲಿ ಅಥಣಿ ರೋಟರಿ ಸಂಸ್ಥೆಯ ಕಾರ್ಯದರ್ಶಿಯಾಗಿ ಸಚೀನ ದೇಸಾಯಿ, ಖಜಾಂಚಿಯಾಗಿ ಶೇಖರ ಕೋಲಾರ, ರೋಟರಿ ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷರಾಗಿ ತೃಪ್ತಿ ಕುಲಕರ್ಣಿ, ಕಾರ್ಯದರ್ಶಿಯಾಗಿ ಲಲಿತಾ ಮೇಕನಮರಡಿ, ಖಜಂಚಿಯಾಗಿ ಸುನೀತಾ ದೇಸಾಯಿ ಪದಗ್ರಹಣ ಸ್ವೀಕರಿಸಿದರು.

ಸಹಾಯಕ ಪ್ರಾಂತಪಾಲ ಅನಂತ ನಾಡಗೌಡ, ಮಾಜಿ ಸಹಾಯಕ ಪ್ರಾಂತಪಾಲ ಮಕರಂದ ಕುಲಕರ್ಣಿ ರೋಟರಿ ಸಂಸ್ಥೆಯ ಕಾರ್ಯ ವೈಖರಿಯ ಕುರಿತು ತಿಳಿಸಿದರು.

ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಅನಿಲ ದೇಶಪಾಂಡೆ, ಮಾಜಿ ಖಜಾಂಚಿ ಪ್ರಪುಲ್‌ ಪಡನಾಡ, ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ, ಇನ್ನರ್ ವಿಲ್ ಪದಗ್ರಹಣ ಅಧಿಕಾರಿ ವೇದಾ ಮಿರಜ್‌ ಸೇರಿದಂತೆ ಇನ್ನಿತರರು ಇದ್ದರು. ಅನಿಲ ದೇಶಪಾಂಡೆ ಸ್ವಾಗತಿಸಿದರು. ಶ್ರೀಕಾಂತ ಅಥಣಿ ನಿರೂಪಿಸಿದರು. ಸಚಿನ ದೇಸಾಯಿ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ