ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ: ಸಿ.ಮಂಜುನಾಥ ಪ್ರಸನ್ನ

KannadaprabhaNewsNetwork |  
Published : Dec 17, 2024, 12:45 AM IST
ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ: ಸಿ.ಮಂಜುನಾಥಪ್ರಸನ್ನ | Kannada Prabha

ಸಾರಾಂಶ

ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು. ಚಾಮರಾಜನಗರದಲ್ಲಿ ದಕ್ಷಯಜ್ಞ ಪೌರಾಣಿಕ ನಾಟಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಪಿ.ರಾಜುಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾಟಕದಿಂದ ಸಮಾಜ ಪರಿವರ್ತನೆ ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು.

ನಗರದ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಚೇತನ ಕಲಾವಾಹಿನಿ ಬೆಳ್ಳಿ ಮಹೋತ್ಸವದ ಅಂಗವಾಗಿ ಎಂ.ಪಿ.ರಾಜು ಅಭಿಮಾನಿ ಬಳಗದ ವತಿಯಿಂದ ನಡೆದ ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಪಿ.ರಾಜು ಅವರಿಗೆ ಅಭಿನಂದನೆ ಹಾಗೂ ದಕ್ಷಯಜ್ಞ ಪೌರಾಣಿಕ ನಾಟಕ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಧುನಿಕ ಭರಾಟೆಯಿಂದ ನಮ್ಮ ಸಂಸ್ಕೃತಿ ಪರಂಪರೆ ನಶಿಸಿ ಹೋಗುತ್ತಿದೆ. ರಂಗಭೂಮಿ ಕಲೆ ಉಳಿಸಿ-ಬೆಳೆಸುವ ಜವಾಬ್ದಾರಿ ಕಲಾಪ್ರೇಕ್ಷಕರ ಮೇಲಿದೆ. ಜಿಲ್ಲೆಯಲ್ಲಿ ರಂಗಭೂಮಿ ಕಲೆಯನ್ನು ಜೀವಂತ ಉಳಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಜಿಲ್ಲೆಯು ಜಾನಪದ ಕಲೆಯ ತವರೂರಾಗಿದ್ದು, ರಂಗಕಲೆಗೆ ಹೆಚ್ಚು ಒತ್ತು ನೀಡಿದೆ. ಹೆಚ್ಚಿನ ಮಟ್ಟದಲ್ಲಿ ಡಾ.ರಾಜಕುಮಾ‌ರ್ ರಂಗಮಂದಿರದಲ್ಲಿ ನಾಟಕಗಳು ಪ್ರದರ್ಶನವಾಗುತ್ತಿವೆ ಎಂದರು.

ಜಿಲ್ಲೆಗೆ ಸಂದ ಗೌರವ:

ಎಂ.ಪಿ.ರಾಜು ಅವರ ನಾಟಕ ಸೇವೆಯನ್ನು ಸರ್ಕಾರ ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಜಿಲ್ಲೆಯ ರಂಗಭೂಮಿಗೆ ದೊರೆತ ದೊಡ್ಡ ಗೌರವ ಹಾಗೂ ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು. ಅವರ ನಾಟಕ ಸೇವೆಗೆ ಮತ್ತಷ್ಟು ಪ್ರಶಸ್ತಿ ಲಭಿಸಲಿ ಎಂದು ಆಶಿಸಿದರು. ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠದ ಮಠಾಧ್ಯಕ್ಷ ಚೆನ್ನಬಸವಸ್ವಾಮೀಜಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾಡಿನಾಡಿ, ಸುವರ್ಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಪಿ.ರಾಜು ಅವರು ರಂಗಭೂಮಿಯಲ್ಲಿ ಮತ್ತಷ್ಟು ಸೇವೆ ಮಾಡಲಿ ಬಸವಾದಿಶರಣರ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಆಶಿಸಿದರು.

ಎಂ.ಪಿ.ರಾಜು ಅವರನ್ನು ಅಭಿನಂದಿಸಲಾಯಿತು. ಚುಡಾಧ್ಯಕ್ಷ ಮಹಮ್ಮದ್‌ ಅಸ್ಗರ್ ಮುನ್ನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ಡಿ.ಪಿ.ಪ್ರಕಾಶ್, ರಂಗಭೂಮಿ ಕಲಾವಿದ ಸಿದ್ದಪ್ಪ, ಮುಖಂಡರಾದ ಆಲೂರುಮಲ್ಲು, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎನ್‌ರಿಚ್ ಮಹದೇವಸ್ವಾಮಿ, ಜಿಲ್ಲಾ ವೀರಶೈವ ಮಹಾಸಭಾದ ಸದಸ್ಯ ಸ್ಟೈಲ್ ಮಂಜು, ಬಸವನಪುರ ರಾಜಶೇಖರ್, ಶಿವಕುಮಾರಸ್ವಾಮಿ, ಎಂ.ಎನ್.ರಮೇಶ್, ಆರ್.ಮೂರ್ತಿ, ಎಂ.ಪಿ.ಮಾದಪ್ಪ, ಗುರುಕಾವುದವಾಡಿ, ಸುಬ್ಬೇಗೌಡ, ನಾಟಕ ವ್ಯವಸ್ಥಾಪಕ ಎಂ.ಎನ್.ಮಹದೇವ, ಕೆ.ಎಂ.ಬಸವರಾಜು, ಮಹದೇವಸ್ವಾಮಿ, ಜಿ.ಎಂ.ಶಂಕರ್, ಆ‌ರ್.ನಾಗರಾಜು, ಚೇತನ ಕಲಾವಾಹಿನಿ ಸಂಸ್ಥೆ ಅಧ್ಯಕ್ಷ ಜಿ.ರಾಜಪ್ಪ, ಡ್ರಾಮಾ ಮಾಸ್ಟರ್ ಆರ್.ಶಿವಣ್ಣ ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...