ಸಮಾಜಮುಖಿ ಸಾಹಿತ್ಯ ಅಗತ್ಯ: ದಾಕ್ಷಾಯಣಿ ಅಪ್ಪಾ

KannadaprabhaNewsNetwork |  
Published : Feb 13, 2024, 12:48 AM IST
ಫೋಟೋ- 12ಜಿಬಿ11 | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಜವಳಿ ಕುಟುಂಬದ ಸೇವೆ ಸದಾ ಸ್ಮರಣೀಯವಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಸಂಸಾರದಲ್ಲಿ ನೋವು ನಲಿವು ಒಂದಾಗಿಸಿಕೊಂಡು ಮುನ್ನಡೆಯುವ ಪರಂಪರೆ ಜವಳಿ ಕುಟುಂಬದಲ್ಲಿ ಕಾಣಬಹುದು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಸೇರಲಿ. ಸಮಾಜ ನಿರೀಕ್ಷಿಸುವ ಸಾಹಿತ್ಯ ಹಾಗೂ ಜನರ ಮನ ತಿದ್ದುವ ಸಾಹಿತ್ಯ ಇಂದು ಅಗತ್ಯವಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಣಿ ಎಸ್ ಅಪ್ಪಾ ನುಡಿದರು.

ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರ ವಿರಚಿತ ಬೆಳಕು ತುಂಬಿದ ಭಾವ ಮತ್ತು ಅನುಭವಾಮೃತ ಎಂಬ ಎರಡು ಕೃತಿಗಳನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದ ಅವರು, ಸಾಹಿತ್ಯ ಮತ್ತು ಸಮಾಜ ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತವೆ. ಅಂಥ ಬದುಕು ಕವಯತ್ರಿ ಶಕುಂತಲಾ ಪಾಟೀಲ ಜಾವಳಿಯವರದ್ದಾಗಿದೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಜವಳಿ ಕುಟುಂಬದ ಸೇವೆ ಸದಾ ಸ್ಮರಣೀಯವಾಗಿದೆ. ಮಾನವೀಯ ಮೌಲ್ಯಗಳು ಕಳಚುತ್ತಿರುವ ಈ ಸಮಾಜದಲ್ಲಿ ಮಾನವೀಯ ನೆಲೆಯಲ್ಲಿ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಹೋಗಬೇಕಾಗಿದೆ ಎಂದರು.

ಮಾದನ ಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಪುಸ್ತಕ ಓದುವ ಸಂಸ್ಕøತಿ ಕಡಿಮೆಯಾಗುತ್ತಿದೆ. ಇದಕ್ಕೆ ಮೊಬೈಲ್ ಸಂಸ್ಕೃತಿಯೇ ಕಾರಣವಾಗಿದೆ. ಒತ್ತಡದ ಜೀವನದಲ್ಲಿ ನಾವೆಲ್ಲ ಸಾಗುತ್ತಿದ್ದೇವೆ. ನಡುವೆ ಸಮಭಾವದ ಮನಸ್ಸಿನ ಸಾಹಿತ್ಯ ಜನಮಾನಸಕ್ಕೆ ತಟ್ಟುತ್ತದೆ. ಓದುವದರಲ್ಲಿ ಸಮಯ ಮೀಸಲಿಡಬೇಕು. ಇಂದು ಖರೀದಿಸುವ ಮನೋಭಾವ ಎಲ್ಲರಲ್ಲಿ ಮೂಡಿದಾಗ ಲೇಖಕರಿಗೆ ಪ್ರೋತ್ಸಾಹಿಸಿದಂತಾಗುವುದು. ಈ ಸಂಸ್ಕಾರ ಸಮಾಜದಲ್ಲಿ ಬೆಳೆಯಲಿ ಎಂದು ಆಶಿಸಿದರು.

ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಯಶ್ವಂತರಾವ ಪಾಟೀಲ ಗರಡಶೆಟ್ಟಿ, ಡಾ. ಕೆ ಗಿರಿಮಲ್ಲ ಮಾತನಾಡಿದರು. ಬೆಳಕು ತುಂಬಿದ ಭಾವ ಕೃತಿ ಕುರಿತು ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಹಾಗೂ ಅನುಭವಾಮೃತ ಕೃತಿ ಕುರಿತು ಡಾ. ಇಂದುಮತಿ ಪಿ ಪಾಟೀಲ ಅವರು ಪರಿಚಯ ಮಾಡಿದರು.

ಪ್ರಮುಖರಾದ ಏ ಕೆ ರಾಮೇಶ್ವರ, ಡಾ. ಬಿ.ಎ. ಪಾಟೀಲ ಮಹಾಗಾಂವ, ಧರ್ಮಣ್ಣಾ ಹೆಚ್ ಧನ್ನಿ, ಡಾ. ವಿಜಯಲಕ್ಷ್ಮೀ ಕೋಸಗಿ, ಶಾಂತಾ ಪಸ್ತಾಪುರ, ಜ್ಯೋತಿ ಕೋಟನೂರ, ವಿನೋದ ಜೇನವೇರಿ, ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಮಲ್ಲಿನಾಥ ದೇಶಮುಖ, ರೇವಣಸಿದ್ದಪ್ಪ ಜೀವಣಗಿ, ಶಿವಲಿಂಗಪ್ಪ ಅಷ್ಟಗಿ, ಲಕ್ಷ್ಮಣರಾವ ಕಡಬೂರ, ನಾಗಪ್ಪ ಸಜ್ಜನ್, ಸಂತೋಷ ಕುಡಳ್ಳಿ, ಕಲ್ಯಾಣಕುಮಾರ ಶೀಲವಂತ, ಪ್ರಭುಲಿಂಗ ಮೂಲಗೆ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೊಟ್ನಳ್ಳಿ, ಎಸ್ ಎಂ ಪಟ್ಟಣಕರ್, ಹೆಚ್ ಎಸ್ ಬರಗಾಲಿ, ಮಂಜುಳಾ ಸುತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟಿಯುನಿಂದ ಗುಣಮಟ್ಟದ ಎಂಜಿನಿಯರುಗಳ ನೀಡುವ ಭರವಸೆ
ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಿ