ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಮಂಡ್ಯ ಒಡನಾಡಿ ಮತ್ತು ನಾಲ್ವಡಿ ಲಯನ್ ಸಂಸ್ಥೆಗಳ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಲಯನ್ ಸಂಸ್ಥೆಗಳು ಕ್ರಿಯಾಶೀಲವಾಗಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುವ ಮೂಲಕ ಬೇರೆ ಜಿಲ್ಲೆಗಳಿಗೆ ಮಾದರಿಯಾಗಿವೆ ಎಂದು ಬಣ್ಣಿಸಿದರು.
ಅಕ್ಷರ, ಅನ್ನ, ಆರೋಗ್ಯ ಕ್ಷೇತ್ರಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜದ ನೊಂದವರ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಕೃಷಿ, ಉದ್ಯಮಶೀಲತೆ, ರಂಗಭೂಮಿ ಮತ್ತು ಜಾನಪದ ಕ್ಷೇತ್ರಗಳಲ್ಲೂ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.ನೂತನ ಪದಾಧಿಕಾರಿಗಳಿಗೆ ಲಯನ್ಸ್ ಸಂಸ್ಥೆ ಮಾಜಿ ಜಿಲ್ಲಾ ರಾಜ್ಯಪಾಲ ಡಾ.ಜಿ.ಎ.ರಮೇಶ್ ಪ್ರತಿಜ್ಞಾವಿಧಿ ಭೋಧಿಸಿದರು. ನೂತನ ಪದಾಧಿಕಾರಿಗಳು ತಮ್ಮ ದುಡಿಮೆಯ ಆದಾಯದಲ್ಲಿ ಇಂತಿಷ್ಟು ಹಣವನ್ನು ಸಮುದಾಯದ ಸೇವೆಗಳಿಗಾಗಿ ಮೀಸಲಿಟ್ಟು, ಆರೋಗ್ಯ, ಪರಿಸರ ಹಾಗೂ ಗ್ರಾಮ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರತಿ ತಿಂಗಳು ಹಮ್ಮಿಕೊಳ್ಳುವ ಮೂಲಕ ತಮಗೆ ನೀಡಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಸೇವಾ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಒಡನಾಡಿ ಸಂಸ್ಥೆಯ ಅಧ್ಯಕ್ಷರಾಗಿ ಕಾರಸವಾಡಿ ಮಹದೇವ, ನಾಲ್ವಡಿ ಸಂಸ್ಥೆಯ ಅಧ್ಯಕ್ಷರಾಗಿ ರವೀಲಾ ಅಧಿಕಾರ ಸ್ವೀಕರಿಸಿದರು. ಮುಖ್ಯ ಅತಿಥಿಗಳಾಗಿ ಪ್ರಾಂತಿಯ ಅಧ್ಯಕ್ಷೆ ಪ್ರತಿಮಾ ರಮೇಶ್, ಚಂದ್ರಲಿಂಗು, ವಲಯ ಅಧ್ಯಕ್ಷ ಚಂದ್ರಹಾಸ, ಕಾವ್ಯ ನಿತ್ಯಾನಂದ, ನಾಲ್ವಡಿ ಲಯನ್ ಸಂಸ್ಥೆ ಸಂಸ್ಥಾಪಕ ಹನುಮಂತಯ್ಯ ಒಡನಾಡಿ ಲಯನ್ಸ್ ಸಂಸ್ಥೆ ಸಂಸ್ಥಾಪಕ ಚಿಕ್ಕ ಸ್ವಾಮಿ ಉಪಸ್ಥಿತರಿದ್ದರು.