ಸೊಸೈಟಿ ಚುನಾವಣೆಯಲ್ಲಿ ಅಕ್ರಮ: ಆರೋಪ

KannadaprabhaNewsNetwork |  
Published : Mar 17, 2026, 01:15 AM IST
 ಫೋಟೋ ಇದೆ  :-  16 ಕೆಜಿಎಲ್ 1 : ಜೆ ಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ    | Kannada Prabha

ಸಾರಾಂಶ

ತಾಲೂಕಿನ ಸಂತೆ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಸಮಯದಲ್ಲಿ ಚುನಾವಣಾಧಿಕಾರಿ ಕಾಂಗ್ರೆಸ್ ಪರವಾಗಿ ಮತಪತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಕುರಿತು ಸೋಮವಾರ ಪರ ವಿರೋಧ ಸುದ್ದಿಗೋಷ್ಠಿಗಳು ನಡೆದಿವೆ.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಸಂತೆ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಸಮಯದಲ್ಲಿ ಚುನಾವಣಾಧಿಕಾರಿ ಕಾಂಗ್ರೆಸ್ ಪರವಾಗಿ ಮತಪತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಕುರಿತು ಸೋಮವಾರ ಪರ ವಿರೋಧ ಸುದ್ದಿಗೋಷ್ಠಿಗಳು ನಡೆದಿವೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ತಾಲೂಕು ಜೆಡಿಎಸ್ ಅಧ್ಯಕ್ಷ ಬಿ ಎನ್ ಜಗದೀಶ್, ಚುನಾವಣಾ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ತಮ್ಮ ಬಳಿ ಅಕ್ರಮವಾಗಿ ಚುನಾವಣಾ ಮತಪತ್ರಗಳನ್ನು ಇಟ್ಟು ಕಾಂಗ್ರೆಸ್ ಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜೆಡಿಎಸ್ ಮೈತ್ರಿಕೂಟದ ಕೆಲವು ಕಾರ್ಯಕರ್ತರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇವಿಎಂ ಮಿಷನ್ ಬೇಡ ಎಂದು ಹೇಳುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೇವಲ ತಮಗೆ ಇಷ್ಟ ಬಂದ ರೀತಿ ಜನರು ಮತದಾನ ಮಾಡಬೇಕು ಎಂಬ ಆಸೆಯಿಂದ ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷ ಇವಿಎಂ ಬೇಡ ಎಂದು ಆರೋಪ ಮಾಡುತ್ತಿದ್ದಾರೆ. ಕುಣಿಗಲ್ ಪಟ್ಟಣದ ವಿಎಸ್ಎಸ್ ಎನ್ ಚುನಾವಣೆಯಲ್ಲಿ ಅದೇ ಕೃತ್ಯವನ್ನು ಮಾಡಿದ್ದಾರೆ. ಇದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸೋದರ ಸಂಬಂಧಿ ಡಾ. ರಂಗನಾಥ್ ಶಾಸಕರು ಇದಕ್ಕೆ ಸಂಪೂರ್ಣ ಸಹಕಾರ ಇದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮದ ಮುಂದೆ ಇಟ್ಟಿರುವುದಾಗಿ ತಿಳಿಸಿದ ಅವರು, ಈ ಸಂಬಂಧ ಮುಂದಿನ ದಿನಗಳಲ್ಲಿ ನ್ಯಾಯಾಂಗದ ಮೊರೆ ಹೋಗುವುದಾಗಿ ತಿಳಿಸಿದರು ಇತ್ತ ಜೆಡಿಎಸ್ ಪತ್ರಿಕಾಗೋಷ್ಠಿ ನಡೆಸುತ್ತಿದ್ದಂತೆ ಅತ್ತ ಕಾಂಗ್ರೆಸ್ ತಾಲೂಕು ಅಧ್ಯಕ್ಷ ರಂಗಣ್ಣಗೌಡ ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್ ನವರು ಹಲವಾರು ವರ್ಷಗಳಿಂದ ಸಹಕಾರ ಸಂಘವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿತ್ತು. ಇತ್ತೀಚಿಗೆ ಕುಣಿಗಲ್ ಶಾಸಕ ಡಾ. ರಂಗನಾಥ್ ಎಲ್ಲಾ ಕ್ಷೇತ್ರದಲ್ಲೂ ನ್ಯಾಯಯುತವಾಗಿ ಹಾಗೂ ಮುಕ್ತವಾಗಿ ಮತದಾನ ನಡೆಯಬೇಕೆಂಬ ಉದ್ದೇಶದಿಂದ ಅಚ್ಚುಕಟ್ಟಾಗಿ ಮತದಾನವನ್ನು ಮಾಡಿಸುವ ಪ್ರಯತ್ನ ಮಾಡಿದ್ದರು. ಆದರೆ ಮೈತ್ರಿಕೂಟದ ನಾಯಕರು ಶಾಸಕರ ಮೇಲೆ ವಿರುದ್ಧವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಆರೋಪವನ್ನು ತಳ್ಳಿ ಹಾಕುವ ಪ್ರಯತ್ನ ಮಾಡಿದರು.

ಒಟ್ಟಿನಲ್ಲಿ ಈ ಪ್ರಕರಣ ದೇಶಾದ್ಯಂತ ಕಾಂಗ್ರೆಸ್‌ ಓಟ್‌ ಚೋರಿ ಅಭಿಯಾನ ಹಾಗೂ ರಾಜ್ಯದಲ್ಲಿ ಇವಿಎಂ ಬೇಡ ಎನ್ನುವ ಕಾಂಗ್ರೆಸ್ ನಿಲುವಿಗೆ ಸಾಕಷ್ಟು ಹಿನ್ನೆಡೆ ಹಾಗೂ ಮುಜುಗರ ತರುವ ಸಾಧ್ಯತೆಯಂತೂ ಇದೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೌದೆ ಒಲೆ ಮೊರೆ ಹೋದ ಹೋಟೆಲ್ ಮಾಲೀಕರು
ಸಿಲಿಂಡರ್ ದರ ಹೆಚ್ಚಳ: ಮಹಿಳಾ ಕಾಂಗ್ರೆಸ್ ಪ್ರತಿಭಟನೆ