ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಯಗಚಗುಪ್ಪೆ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಗಂಜೀಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಒಗ್ಗೂಡಿ ಮಲೆ ಮಹದೇಶ್ವರಸ್ವಾಮಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ನೇರವೇರಿಸಿ ಮಾತನಾಡಿದರು.
ಕ್ಷೇತ್ರದ ಶಾಸಕನಾಗಿ ನಾನು ಯಾವುದೇ ಸಹಕಾರ ಸಂಘಗಳಿಗೂ ಚುನಾವಣೆ ವೇಳೆ ಡಿ.ಆರ್ ವ್ಯಾನ್ ಹಾಕಿಸಲಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಎನ್.ಚಲುವರಾಯಸ್ವಾಮಿ ನನ್ನ ಸ್ವಗ್ರಾಮ ಹರಳಹಳ್ಳಿಯ ಸೊಸೈಟಿ ಚುನಾವಣೆಗೆ 3 ಡಿ.ಆರ್. ವ್ಯಾನ್ ಪೊಲೀಸ್ ಪಡೆ, ಇಬ್ಬರು ಪೊಲೀಸ್ ನಿರೀಕ್ಷಕರನ್ನು ಹಾಕಿಸಿದ್ದರು. ಆದರೂ ನಮ್ಮವರ ಗೆಲುವಿಗೆ ತೊಂದರೆಯಾಗಲಿಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವರ ನಡೆಗೆ ನನ್ನ ಅಭ್ಯಂತರವಿಲ್ಲ. ಅವರ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕೆಲಸವನ್ನು ಮಾಡಿದ್ದಾರೆ. ಅದೇ ರೀತಿ ನನಗೂ ನನ್ನ ಕಾರ್ಯಕರ್ತರಿಗೆ ಅಗತ್ಯ ರಕ್ಷಣೆ ಮತ್ತು ಉತ್ಸಾಹ ತುಂಬುವ ಹಕ್ಕಿದೆ ಎಂದು ಹೇಳಿದರು.
ಈ ಹಿಂದೆ ಕೆ.ಸಿ.ನಾರಾಯಣಗೌಡ ಜೆಡಿಎಸ್ ಶಾಸಕರಾಗಿದ್ದಾಗ ನಾನು ನನ್ನ ಶೀಳನೆರೆ ಹೋಬಳಿ ಜವಾಬ್ದಾರಿ ತೆಗೆದುಕೊಂಡಿದ್ದೆ. ಆ ವೇಳೆ ನಮಗೆ ಕಾಂಗ್ರೆಸ್ ಪಕ್ಷ ಎದುರಾಳಿ. ಜನರ ಒತ್ತಾಸೆ ಮೇರೆಗೆ ನಾನು ಹರಳಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸ್ಪರ್ಧಿಸಬೇಕಾಯಿತು ಎಂದರು.
ನಾನು ನಮ್ಮೂರಿನ ಸೊಸೈಟಿಗೆ ಪ್ರವೇಶಿದಾಗ ರೈತರಿಗೆ 67 ಲಕ್ಷ ರು ಮಾತ್ರ ಸಾಲ ನೀಡಲಾಗುತಿತ್ತು. ನನ್ನ ಅವಧಿಯಲ್ಲಿ ಇದು 4.80 ಕೋಟಿಗೆ ಏರಿಕೆಯಾಯಿತು. ನಮ್ಮ ವ್ಯಾಪ್ತಿಯ 83 ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ನೀಡಿದ್ದಲ್ಲದೆ ನಮ್ಮ ವ್ಯಾಪ್ತಿಗೆ ಸೇರದಿದ್ದರೂ ನಮ್ಮ ಅಕ್ಕಪಕ್ಕದ ಬೇಲದಕೆರೆ, ಚನ್ನಾಪುರ, ಹೊಸೂರು ಗ್ರಾಮಗಳ ರೈತರಿಗೆ ಸಾಲ ನೀಡಲಾಯಿತು ಎಂದು ಹೇಳಿದರು.
ಈ ವೇಳೆ ಮುಖಂಡರುಗಳಾದ ರಾಜಶೇಖರ್, ಹರೀಶ್, ಶಿವಪ್ಪ, ಕುಮಾರ್, ಚಂದ್ರಶೇಖರ್ ಸೇರಿದಂತೆ ಹಲವರಿದ್ದರು.