ಸಾಮಾಜಿಕ, ಆರ್ಥಿಕ ಸಮೀಕ್ಷೆ: ಬ್ರಾಹ್ಮಣರು ಇತರೆ ಕಾಲಂನಲ್ಲೇಕೆ?

KannadaprabhaNewsNetwork |  
Published : Oct 07, 2025, 01:03 AM IST
6ಡಿಡಬ್ಲೂಡಿ1ಧಾರವಾಡ ತಾಲೂಕು ಹೆಬ್ಬಳ್ಳಿಯ ಗ್ರಾಪಂ ಮಾಜಿ ಸದಸ್ಯ ಮಹೇಶ ಜೋಶಿ ಅವರ ಮನೆಯಲ್ಲಿ ನಡೆಯುತ್ತಿರುವ ಗಣತಿ.  | Kannada Prabha

ಸಾರಾಂಶ

ಸಾಮಾನ್ಯ ಬ್ರಾಹ್ಮಣ ಎಂದು ಕಂದಾಯ ಇಲಾಖೆಯಿಂದ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಗಣತಿಯಲ್ಲಿ ಬ್ರಾಹ್ಮಣ ಆಯ್ಕೆಯೇ ಇಲ್ಲ. ಇತರೆ ಕಾಲಂನಲ್ಲಿ ಬ್ರಾಹ್ಮಣ ಎಂದು ನಾವೇಕೆ ಬರೆಯಿಸಬೇಕು ಎಂದು ತಾಲೂಕಿನ ಹೆಬ್ಬಳ್ಳಿಯಲ್ಲಿ ವಿರೋಧ ವ್ಯಕ್ತವಾಗಿದೆ.

ಧಾರವಾಡ:

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಜಾತಿ ಕಾಲಂನಲ್ಲಿ ಸಾಮಾನ್ಯ ಬ್ರಾಹ್ಮಣ ಆಯ್ಕೆ ಇಲ್ಲದ್ದಕ್ಕೆ ಇದೀಗ ಕೆಲವು ಬ್ರಾಹ್ಮಣರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಸಾಮಾನ್ಯ ಬ್ರಾಹ್ಮಣ ಎಂದು ಕಂದಾಯ ಇಲಾಖೆಯಿಂದ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಗಣತಿಯಲ್ಲಿ ಬ್ರಾಹ್ಮಣ ಆಯ್ಕೆಯೇ ಇಲ್ಲ. ಇತರೆ ಕಾಲಂನಲ್ಲಿ ಬ್ರಾಹ್ಮಣ ಎಂದು ನಾವೇಕೆ ಬರೆಯಿಸಬೇಕು ಎಂದು ತಾಲೂಕಿನ ಹೆಬ್ಬಳ್ಳಿಯಲ್ಲಿ ವಿರೋಧ ವ್ಯಕ್ತವಾಗಿದೆ.

ಗ್ರಾಪಂ ಮಾಜಿ ಅಧ್ಯಕ್ಷರಾಗಿರುವ ಮಹೇಶ ಜೋಶಿ ಎಂಬುವರು, ಗಣತಿದಾರರು ಬಂದಾಗ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಜಾತಿ ಕಾಲಂನಲ್ಲಿ ಬ್ರಾಹ್ಮಣ ಇಲ್ಲ, ಬದಲಾಗಿ ಇತರೆ ಎಂಬುದರಲ್ಲಿ ತಮ್ಮ ಜಾತಿ ಏತಕ್ಕೆ ನಮೂದಿಸಬೇಕೆಂದು ತಕರಾರು ತಗೆದಿದ್ದಾರೆ.

ಬ್ರಾಹ್ಮಣ ಸಮುದಾಯ ಇತರೆ ಕಾಲಂನಲ್ಲಿ ಸೇರಿದ್ದಾದರೆ, ಕಂದಾಯ ಇಲಾಖೆಯ ಜಾತಿ ಪ್ರಮಾಣದಲ್ಲಿ ಸಾಮಾನ್ಯ ಬ್ರಾಹ್ಮಣ ಎಂದು ಏತಕ್ಕೆ ಪ್ರಮಾಣ ಪತ್ರ ಕೊಡಬೇಕಿತ್ತು. ಜಾತಿ ಪ್ರಮಾಣದಲ್ಲೂ ಇತರೆ ಎಂದೇ ಇರಬೇಕಿತ್ತಲ್ಲವೇ? ಸಮೀಕ್ಷೆಯಲ್ಲಿ ಈ ರೀತಿ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಬ್ರಾಹ್ಮಣರು ಯಾವತ್ತೂ ಯಾವುದೇ ಕೆಟಗರಿ ಸೇರಿಸಿ ಅಂದಿಲ್ಲ, ಯಾವುದೇ ಸೌಲಭ್ಯಗಳೂ ಇಲ್ಲ. ನಾವು ಕೇಳುತ್ತಲೂ ಇಲ್ಲ. ಸೌಲಭ್ಯ ಕೇಳಿದವರನ್ನು ಸೇರಿಸಿ, ಅಭ್ಯಂತರವೇನಿಲ್ಲ. ಆದರೆ, ನಮ್ಮನ್ನು ಇತರೆ ಎಂದು ನಮೂದಿಸುತ್ತಿರುವುದಕ್ಕೆ ತೀವ್ರ ಬೇಸರ ತಂದಿದೆ. ಈ ಬಗ್ಗೆ ಮೂರು ದಿನಗಳಿಂದ ಗಣತಿದಾರರನ್ನು ಹಾಗೂ ತಹಸೀಲ್ದಾರ್‌ ಅವರನ್ನು ಸಹ ಪ್ರಶ್ನಿಸಿದ್ದು ಯಾರಿಂದಲೂ ಸರಿಯಾಗಿ ಉತ್ತರ ಬಂದಿಲ್ಲ. ಹೀಗಾಗಿ ಗಣತಿಯೇ ಬೇಡ ಎಂದು ತೀರ್ಮಾನಿಸಿದ್ದೇನೆ ಎಂದು ಮಹೇಶ ಜೋಶಿ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ಮಹೇಶ ಜೋಶಿ ಅವರ ಮನೆಯ ಗಣತಿ ಮಾಡುವ ರೂಪಾ ಕುಬಸದ ಎಂಬುವರು ಈ ರೀತಿ ಸಮಸ್ಯೆಯಿಂದಾಗಿ ಪತ್ರ ಬರೆದು ಮಹೇಶ ಜೋಶಿ ಅವರಿಂದ ಅದಕ್ಕೆ ಸಹಿ ಪಡೆದು ಸದ್ಯಕ್ಕೆ ಈ ಮನೆಯ ಗಣತಿ ಸ್ಥಗಿತಗೊಳಿಸಿದ್ದಾರೆ.

PREV

Recommended Stories

ಸಮೀಕ್ಷೆ ವೇಳೆ ಬೀದಿ ನಾಯಿ ದಾಳಿಯಿಂದ ಶಿಕ್ಷಕಿ ಗಂಭೀರ
ಸೆಂಟ್ ಸ್ಪ್ರೇ ಮಾಡಿ ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿದ ಬಾಲಕ