ಸಚಿವೆ ಶೋಭಾ ಬಗ್ಗೆ ಹಗುರ ಮಾತು: ಭೈರತಿಗೆ ರೇಣುಕಾಚಾರ್ಯ ಎಚ್ಚರಿಕೆ

KannadaprabhaNewsNetwork | Published : Oct 22, 2024 1:20 AM

ಸಾರಾಂಶ

ನಿನ್ನ ಕೆಲಸ ನೀನು ಮಾಡಪ್ಪಾ ಅಂದ್ರೆ ಮುಖ್ಯಮಂತ್ರಿ ಹಿಂದೆ, ಮುಂದೆಯೇ ಸುತ್ತಾಡುತ್ತ ಲೂಟಿ ಮಾಡುತ್ತಿರುವೆ. ವಿಶೇಷ ವಿಮಾನದಲ್ಲಿ ಹೋಗಿ ಮುಡಾ ಕಡತಗಳನ್ನು ತಂದು, ಸುಟ್ಟು ಹಾಕಿದ ನಿನ್ನ ಬಗ್ಗೆ ಮಾತನಾಡಲು ನಮಗೂ ಬರುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.

- ಜಾಮೀನಿನ ಮೇಲೆ ಸತೀಶ ಪೂಜಾರಿ ಬಿಡುಗಡೆ ಹಿನ್ನೆಲೆ ನಿವಾಸಕ್ಕೆ ಭೇಟಿ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಿನ್ನ ಕೆಲಸ ನೀನು ಮಾಡಪ್ಪಾ ಅಂದ್ರೆ ಮುಖ್ಯಮಂತ್ರಿ ಹಿಂದೆ, ಮುಂದೆಯೇ ಸುತ್ತಾಡುತ್ತ ಲೂಟಿ ಮಾಡುತ್ತಿರುವೆ. ವಿಶೇಷ ವಿಮಾನದಲ್ಲಿ ಹೋಗಿ ಮುಡಾ ಕಡತಗಳನ್ನು ತಂದು, ಸುಟ್ಟು ಹಾಕಿದ ನಿನ್ನ ಬಗ್ಗೆ ಮಾತನಾಡಲು ನಮಗೂ ಬರುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್‌ಗೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದರು.

ನಗರದ ಕೆಟಿಜೆ ನಗರದಲ್ಲಿ ಹಿಂದು ಜಾಗರಣಾ ವೇದಿಕೆ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಹಿನ್ನೆಲೆ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಹೋದರಿ ಶೋಭಾ ರಾಜಕಾರಣಕ್ಕೆ ಬಂದಾಗ ನೀವು (ಭೈರತಿ ಸುರೇಶ) ರಾಜಕಾರಣಕ್ಕೆ ಬಂದಿರಲಿಲ್ಲ. ರಾಜಕಾರಣದಲ್ಲಿ ನೀವಿನ್ನೂ ಬಚ್ಚಾ. ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಉತ್ತರ ಸಂಸದರಾಗಿ ಆಯ್ಕೆಯಾದವರು. ಮೂರನೇ ಸಲ ಸಂಸದರಾಗಿದ್ದಾರೆ. 2ನೇ ಸಲ ಈಗ ಕೇಂದ್ರ ಸಚಿವೆ ಆಗಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಇಂಧನ ಸಚಿವೆ ಆಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ, ಘೇರಾವ್ ಮಾಡುತ್ತೇವೆ ಎಂದು ಎಚ್ಚರಿಸಿದರು.

ಹಿಂದು ಜಾಗರಣಾ ವೇದಿಕೆ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ, ತಂದೆ ಗೋಪಾಲ ಪೂಜಾರಿ, ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ, ಎನ್.ಎಚ್.ಹಾಲೇಶ, ವಾಟರ್ ಮಂಜು, ಪ್ರವೀಣ ಜಾಧವ್, ಪಂಜು ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

- - -

ಟಾಪ್‌ ಕೋಟ್‌ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ ಉತ್ತಮವಾಗಿ ಕೆಲಸ ಮಾಡಿದ್ದು, ಅಲ್ಲಿ ಒಳ್ಳೆಯ ಹೆಸರು ಇದೆ. ಯೋಗೇಶ್ವರ ಬಿಜೆಪಿಯಲ್ಲೇ ಇರುತ್ತಾರೆ. ಮೂರು ಉಪ ಚುನಾವಣೆಯಲ್ಲಿ ಗೆಲುವೇ ಬಿಜೆಪಿ ಗುರಿಯಾಗಿದೆ. ಚನ್ನಪಟ್ಟಣದ ಟಿಕೆಟ್ ವಿಚಾರ ನನ್ನ ಕೈಯಲ್ಲಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರು. ಇನ್ನೂ ಟಿಕೆಟ್ ಅಂತಿಮವಾಗಿಲ್ಲ. ರಾಷ್ಟ್ರೀಯ, ರಾಜ್ಯ ನಾಯಕರು ಒಟ್ಟಾಗಿ ಈ ಬಗ್ಗೆ ತೀರ್ಮಾನಿಸುತ್ತಾರೆ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ - - - -21ಕೆಡಿವಿಜಿ19, 20:

ದಾವಣಗೆರೆ ಕೆಟಿಜೆ ನಗರದಲ್ಲಿ ಹಿಂಜಾವೇ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ನಿವಾಸಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ ಇತರರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು.

Share this article