ಕನ್ನಡಪ್ರಭ ವಾರ್ತೆ ರಿಪ್ಪನ್‌ಪೇಟೆ
ವಾಣಿಜ್ಯ ಬೆಳೆಗಳಾದ ಅಡಕೆ ಮತ್ತು ಶುಂಠಿಯನ್ನು ಬೆಳೆಯಲಾಗುತ್ತಿರುವ ಮಲೆನಾಡಿನಲ್ಲಿ ಭತ್ತದ ಬೆಳೆ ನಂತರ ಭೂಮಿಯ ತೇವಾಂಶವನ್ನು ನೋಡಿ, ಸಿರಿಧಾನ್ಯವನ್ನು ಬೆಳೆಯಬೇಕು. ಇದರಿಂದ ಭೂಮಿ ಫಲವತ್ತತೆ ಮತ್ತು ಸಿರಿಧಾನ್ಯ ಆಹಾರ ಬಳಸುವುದರಿಂದ ದೇಹದಲ್ಲಿ ಪೌಷ್ಟಿಕಾಂಶ ಕೊರತೆ ಕಡಿಮೆಯಾಗಿ, ಸದೃಢರಾಗಲು ಸಾಧ್ಯ ಎಂದು ಕೆಳದಿ ಶಿವಪ್ಪ ನಾಯಕ ತೋಟಗಾರಿಕಾ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಹೇಮ್ಲಾ ನಾಯಕ್ ಹೇಳಿದರು.ರಿಪ್ಪನ್‍ಪೇಟೆ ಸಮೀಪದ ಕೋಡೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಹೈದರಾಬಾದ್ ಮತ್ತು ಹೊಸನಗರ ಕೃಷಿ ಇಲಾಖೆ ಹಾಗೂ ಕೋಡೂರು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಲಾದ `ಸಿರಿಧಾನ್ಯ ಜಾಗೃತಿ ಮತ್ತು ಮಹತ್ವ’ ಕುರಿತ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳ ಆಹಾರ ಸೇವನೆಯಿಂದಾಗಿ ರೋಗಬಾಧೆ ಕಾಣಿಸಿಕೊಳ್ಳುವಂತಾಗಿದೆ. ಅದೇ ಸ್ವದೇಶಿ ಆಹಾರ ಸೇವನೆಯಿಂದಾಗಿ ಮಕ್ಕಳು ಸದೃಢ ಆಗುವುದರೊಂದಿಗೆ ಹೆಚ್ಚು ಜ್ಞಾನವಂತರಾಗುವರು. ಇದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯು ಸಿರಿಧಾನ್ಯ ಕ್ರಾಂತಿಯನ್ನಾಗಿಸುವ ನಿರ್ಧಾರ ರೈತರದಾಗಬೇಕು. ಪ್ರಸ್ತುತ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳಿಗೆ ಬೇಡಿಕೆ ಸಹ ಹೆಚ್ಚಾಗಿದೆ. ರೈತರು ಇಂತಹ ಬೆಳೆಗಳನ್ನು ಬೆಳೆದು, ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದರಿಂದ ಸ್ವಾವಲಂಬಿ ಬದುಕು ಹೊಂದಬಹುದು ಎಂದರು.ಸಿರಿಧಾನ್ಯ ಜಾಗೃತಿ ಮತ್ತು ಮಹತ್ವ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕೋಡೂರು ಗ್ರಾಪಂ ಅಧ್ಯಕ್ಷ ಕೆ.ಎಸ್.ಉಮೇಶ್ ವಹಿಸಿದ್ದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಸಚಿವ ಮತ್ತು ವಿಶೇಷಾಧಿಕಾರಿ ಡಾ. ಕೆ.ಸಿ. ಶಶಿಧರ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಸಂಶೋಧನಾ ನಿರ್ದೇಶಕ ಡಾ. ಬಿ.ಎಂ. ದುಶ್ಯಂತ ಕುಮಾರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಡೀನ್ (ಸ್ನಾತಕೋತ್ತರ) ಡಾ.ದಿನೇಶ್‍ಕುಮಾರ್, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ನಿರ್ದೇಶಕರು (ವಿದ್ಯಾರ್ಥಿ ಕಲ್ಯಾಣ) ಡಾ.ಶಿವಶಂಕರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಬಿ.ಸಿ. ಗಿರಿಜೇಶ್ ಜಿ.ಕೆ., ಹೈದರಾಬಾದ್ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ ಕೃಷಿ ವಿಜ್ಞಾನಿ (ಕೃಷಿ ವಿಸ್ತರಣೆ) ಡಾ.ಸಂಗಪ್ಪ, ಹೊಸನಗರ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಚಿನ್ ಹೆಗಡೆ, ಕೃಷಿ ಅಧಿಕಾರಿ ಮಾರುತಿ, ಪ್ರತಿಮಾ, ಗ್ರಾಪಂ ಸದಸ್ಯರು ಪಾಲ್ಗೊಂಡಿದರು.
ಅಂತಿಮವರ್ಷದ ವಿದ್ಯಾರ್ಥಿನಿ ಮಹಾಲಕ್ಷ್ಮೀ ಸ್ವಾಗತಿಸಿದರು. ಕೃಷಿ ವಿ.ವಿ.ಯ ಅರುಣ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕೋಡೂರು ಗ್ರಾಪಂ ಸಹಕಾರದಲ್ಲಿ ಸಿರಿಧಾನ್ಯ ಜಾಗೃತಿ- ಮಹತ್ವದ ಕುರಿತು ಜಾಥಾ ನಡೆಯಿತು.- - - ಕೋಟ್ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಪೌಷ್ಟಿಕಾಂಶ ಕೊರತೆ ಕಾಣಿಸಿದರೆ ವೈದ್ಯಾಧಿಕಾರಿಗಳು ಹೆಚ್ಚು ಪೌಷ್ಟಿಕಾಂಶದ ಮಾತ್ರೆಗಳ ಸೇವನೆಗೆ ಚೀಟಿ ಬರೆಯುತ್ತಾರೆ. ಅದೇ ನಮ್ಮ ರೈತರು ಪೌಷ್ಟಿಕಾಂಶದ ಸಿರಿಧಾನ್ಯಗಳ ಬಳಸುವ ಮೂಲಕ ರಕ್ತಹೀನತೆ ದೂರ ಮಾಡುವುದರೊಂದಿಗೆ ದೃಢಕಾಯರಾಗಲು ಸಾಧ್ಯ ಎಂದು ಹೇಳಿ, ರಾಗಿಮುದ್ದೆ, ರೊಟ್ಟಿಗಳ ತಿಂದು ಗಟ್ಟಿಯಾಗಿರಬೇಕು
- ಡಾ. ಹೇಮ್ಲಾ ನಾಯಕ್, ಶಿಕ್ಷಣ ನಿರ್ದೇಶಕ- - - -26ಆರ್‌ಪಿಟಿ3ಪಿ:
ಕಾರ್ಯಕ್ರಮದಲ್ಲಿ ವಿವಿ ಶಿಕ್ಷಣ ನಿರ್ದೇಶಕ ಡಾ.ಹೇಮ್ಲಾ ನಾಯಕ್ ಮಾತನಾಡಿದರು.