ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದಿಗ್ವಿಜಯ ಯಾತ್ರೆ ಅಂಗವಾಗಿ ನಗರದ ಸೀತಾರಾಮ ಮಂಗಲ ಭವನದಲ್ಲಿ ಚಂದ್ರಮೌಳೇಶ್ವರ ದೇವರಿಗೆ ಮಹಾಪೂಜೆ ಸಲ್ಲಿಸಿದ ಬಳಿಕ ಅನುಗ್ರಹ ಸಂದೇಶ ನೀಡಿದ ಅವರು, ಇಂದು ನಮ್ಮತನ ಬಿಟ್ಟು ದೂರಾಗುತ್ತಿರುವ ಕಾರಣಕ್ಕೆ ಮನಸ್ಸು ಸಂತೋಷದಿಂದ ಇಲ್ಲ. ಬದುಕು ನೆಮ್ಮದಿಯಾಗಿಲ್ಲ. ಭಾರತದ ಶಕ್ತಿಯೇ ಆಧ್ಯಾತ್ಮ. ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಾಡಿಗೆ ಹಾಗೂ ಭೂ ಮಂಡಲಕ್ಕೆ ಮನುಕುಲದ ಏಳಿಗೆಗಾಗಿ ಶಂಕರ ಭಗವತ್ಪಾದರು ಶಕ್ತಿಯುತ ಬೀಜಾಕ್ಷರಗಳ ಮೂಲಕ ಮಂತ್ರ, ಸ್ತೋತ್ರ ರಚನೆ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಅವುಗಳ ಪಾಠ, ಬೋಧನೆ ಮಾಡಬೇಕು. ನಿತ್ಯವು ಅವುಗಳ ಪಠಣೆ ಮಾಡುವುದರಿಂದ ಶಾಂತಿ, ನೆಮ್ಮದಿ, ಅಂತರ ಶಕ್ತಿ ಹೆಚ್ಚುತ್ತದೆ. ಎಲ್ಲ ವೇದಗಳಲ್ಲಿ ಶಂಕರ ಭಗವತ್ಪಾದರು ನೀಡಿದ ಮಂತ್ರ, ಸ್ತೋತ್ರಗಳು ಮನುಕುಲದ ಏಳಿಗೆ ಅಡಗಿದೆ ಹಾಗೂ ಮಂಗಳವಾಗುತ್ತದೆ ಎಂದರು.ದಿಗ್ವಿಜಯ ಯಾತ್ರೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನಗರಕ್ಕೆ ಆಗಮಿಸಿದ್ದ ಶ್ರೀಗಳಿಗೆ ಗುರುವಾರ ಸಂಜೆ ಪೂರ್ಣಕುಂಭ ಸ್ವಾಗತ, ವಾದ್ಯ, ವೇದಘೋಷಗಳ ಪಠಣಗಳೊಂದಿಗೆ ಸ್ವಾಗತಿಸಲಾಯಿತು. ಶುಕ್ರವಾರ ಆರಾಧ್ಯ ದೇವರು ಚಂದ್ರಮೌಳೇಶ್ವರ ಸಂಸ್ಥಾನ ಪೂಜೆ ನೆರವೇರಿಸಿದರು. ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಬ್ರಾಹ್ಮಣದ ತರುಣ ಸಂಘದ ಪದಾಧಿಕಾರಿಗಳಾದ ಡಿ.ಬಿ. ಕುಲಕರ್ಣಿ, ವಿನಾಯಕ ದೇಸಾಯಿ, ಅನಂತ ಮಳಗಿ, ಶಶಿ ದೇಶಪಾಂಡೆ ಶ್ರೀಗಳಿಗೆ ಗೌರವ ಪೂರ್ವಕ ಪುಷ್ಪ ಸಲ್ಲಿಸಿದರು.
ಫೋಟೋ 3ಬಿಕೆಟಿ7