ಬೆಳೆ ರಕ್ಷಣೆಗೂ ಬಂತು ಸೋಲಾರ್ ಸಿಸಿ ಕ್ಯಾಮೆರಾ

KannadaprabhaNewsNetwork |  
Published : Feb 08, 2024, 01:30 AM IST
ಕೂಡ್ಲಿಗಿ ತಾಲೂಕು ಜಂಗಮಸೋವೆನಹಳ್ಳಿಯ ಗೌಡ್ರ ನಾಗರಾಜ ಎನ್ನುವ ಯುವರೈತ ಸಂಶೋಧಿಸಿದ ಜಮೀನನ ಚಲನವಲನ ವೀಕ್ಷಿಸಲು ಕಡಿಮೆ ಖರ್ಚಿನಲ್ಲಿ ವಿದ್ಯುತ್ ಇಲ್ಲದೇ ಸೋಲಾರ ಸಿಸಿ ಕ್ಯಾಮರಾ ಅಳವಡಿಕೆಗೆ ಈಗ ರಾಜ್ಯಾದ್ಯಾಂತ ರೈತರ ಗಮನಸೆಳೆದಿದೆ. | Kannada Prabha

ಸಾರಾಂಶ

ದೇಶ- ವಿದೇಶಗಳಲ್ಲಿಯೂ ಕುಳಿತು ಮೊಬೈಲ್‌ನಿಂದ ಟ್ರೂ ಕ್ಲೌಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಜಮೀನಿನಲ್ಲಿ ನಡೆಯುವ ಚಲನವಲನ ಬಗ್ಗೆ ಅರಿತುಕೊಳ್ಳಬಹುದು.

ಭೀಮಣ್ಣ ಗಜಾಪುರಕೂಡ್ಲಿಗಿ: ತಾಲೂಕಿನ ಶಿವಪುರ ಸಮೀಪದ ಜಂಗಮಸೋವೆನಹಳ್ಳಿಯ ಯುವ ರೈತ ಗೌಡ್ರ ನಾಗರಾಜ ಎಂಬವರು ಕೃಷಿಸ್ನೇಹಿ ಸೋಲಾರ್‌ ಸಿಸಿ ಕ್ಯಾಮೆರಾ ಶೋಧಿಸಿ ಗಮನ ಸೆಳೆದಿದ್ದಾರೆ.

ಕೃಷಿ ಪರಿಕರ, ಫಸಲು ರಕ್ಷಣೆಗಾಗಿ ಸೌರ ಸ್ವಯಂಚಾಲಿತ ಸಿಸಿ ಕ್ಯಾಮೆರಾ ಇದಾಗಿದೆ. ದೇಶ- ವಿದೇಶಗಳಲ್ಲಿಯೂ ಕುಳಿತು ಮೊಬೈಲ್‌ನಿಂದ ಟ್ರೂ ಕ್ಲೌಡ್ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಜಮೀನಿನಲ್ಲಿ ನಡೆಯುವ ಚಲನವಲನ ಬಗ್ಗೆ ಅರಿತುಕೊಳ್ಳಬಹುದು.ಸಿಸಿ ಕ್ಯಾಮೆರಾದಲ್ಲಿ ಏನರುತ್ತೆ?: ಸೋಲಾರ್ ಸಿಸಿ ಕ್ಯಾಮೆರಾದಲ್ಲಿ 256 ಜಿಬಿ ವರೆಗೂ ಮೆಮೊರಿ ಕಾರ್ಡ್ ಅಳವಡಿಸಬಹುದು. 1 ತಿಂಗಳವರೆಗೂ ವಿಡಿಯೋ ರೆಕಾರ್ಡ್ ಆಗಿರುತ್ತದೆ. 30 ದಿನ ರೆಕಾರ್ಡ್ ಆದ ನಂತರ ಮೊದಲ ದಿನದ ವಿಡಿಯೋ ಸ್ವಯಂ ಅಳಿಸಿಕೊಳ್ಳುತ್ತದೆ. ಸೋಲಾರ್ ಪ್ಯಾನಲ್‌ನಿಂದ ವಿದ್ಯುತ್‌ ಉತ್ಪಾದನೆಯಾಗಿ ಬ್ಯಾಟರಿಯಲ್ಲಿ ಸ್ಟೋರೇಜ್‌ ಆಗುತ್ತದೆ. ಬ್ಯಾಟರಿ 1ರಿಂದ 2 ದಿನ ಬ್ಯಾಕಪ್‌ ಇರುತ್ತದೆ. 4 ಎಂಪಿ ಡ್ಯೂಯಲ್ ಲೆನ್ಸ್ ಕ್ಯಾಮೆರಾ ಅಳವಡಿಸಲಾಗಿದೆ. ಹಗಲು ಮತ್ತು ರಾತ್ರಿಯೂ ಕಲರ್ ವಿಡಿಯೋ ವೀಕ್ಷಿಸಬಹುದು. ಅಲ್ಲದೇ ಸೈರನ್, ಕೃತಕ ಶಬ್ದದ ಸೌಲಭ್ಯ ಹೊಂದಿದೆ. ಈ ಕ್ಯಾಮೆರಾವು ಸ್ವಯಂಚಾಲಿತವಾಗಿ ತಿರುಗುತ್ತದೆ. 3ರಿಂದ 4 ಎಕರೆ ವರೆಗಿನ ಸುತ್ತಲಿನ ಚಿತ್ರಣವನ್ನು ವೀಕ್ಷಿಸಬಹುದು.ಗೌಡ್ರು ನಾಗರಾಜ ಹಿಂದೆ ತಮ್ಮ ಜಮೀನಿನಲ್ಲಿ ಪಕ್ಷಿಗಳು, ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲು ವಿಭಿನ್ನವಾಗಿ ಸದ್ದು ಮಾಡುವ ಧ್ವನಿವರ್ಧಕ ಕಂಡುಹಿಡಿದು ಅದರಲ್ಲಿ ಯಶಸ್ಸು ಸಾಧಿಸಿದ್ದರು. ನಂತರ ನಾಗರಾಜ್ ಅವರು ಖಾಸಗಿ ಕಂಪನಿಯ ಕೆಲಸಕ್ಕೆ ಗುಡ್ ಬೈ ಹೇಳಿ ಈಗ ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಈ ಸಿಸಿ ಕ್ಯಾಮೆರಾಕ್ಕೆ ಕಂಪ್ಯೂಟರ್, ಮಾನಿಟರ್, ವೈರ್‌ಗಳ ಅಗತ್ಯತೆ ಇಲ್ಲ. ಹೆಚ್ಚಿನ ಮಾಹಿತಿಗಾಗಿ ನಾಗರಾಜ ಅವರ ಮೊಬೈಲ್ ನಂ. 6363737439 ಸಂಪರ್ಕಿಸಬಹುದು. ತಿರುಗುತ್ತೆ: ಒಂದು ಕ್ಯಾಮೆರಾದಿಂದ 3ರಿಂದ 4 ಎಕರೆ ಜಮೀನನ್ನು ವೀಕ್ಷಣೆ ಮಾಡಬಹುದು. ಸಿಸಿ ಕ್ಯಾಮರಾ ನಮ್ಮ ಕುತ್ತಿಗೆಯ ರೀತಿಯಲ್ಲಿ ರೋಟೇಟ್ ಆಗುತ್ತೆ ಎಂದು ರೈತ ವಿಜ್ಞಾನಿ ಗೌಡ್ರು ನಾಗರಾಜ್ ತಿಳಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌