ಚಂದ್ರು ಕೊಂಚಿಗೇರಿ
ತಾಲೂಕಿನಲ್ಲಿ 26 ಗ್ರಾಮ ಪಂಚಾಯಿತಿಗಳಿವೆ. ಹಗರನೂರು, ಹಿರೇಹಡಗಲಿ, ಮೈಲಾರ, ಹೊಳಲು, ನವಲಿ, ಸೋವೇನಹಳ್ಳಿ, ಕುರುವತ್ತಿ ಮತ್ತು ಕತ್ತೆಬೆನ್ನೂರು ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಉಳಿದಂತೆ ಬೀರಬ್ಬಿ ಕಾಮಗಾರಿ ಪ್ರಗತಿಯಲ್ಲಿದೆ. ನಂದಿಹಳ್ಳಿ, ಹಿರೇಮಲ್ಲನಕೆರೆ, ಹೊಳಗುಂದಿ ಮತ್ತು ಮಕರಬ್ಬಿಯಲ್ಲಿ ಘಟಕ ನಿರ್ಮಿಸಲು ಈ ಬಾರಿ ಟೆಂಡರ್ ಕರೆಯಲಾಗಿದೆ. ಉಳಿದ 13 ಗ್ರಾಪಂಗಳ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣಕ್ಕೆ ಸರ್ಕಾರದ ಜಾಗ ಇದ್ದರೂ, ಗ್ರಾಪಂಗೆ ನೀಡಲು ಜಿಲ್ಲಾಡಳಿತ ಮೀನ-ಮೇಷ ಎಣಿಸುತ್ತ, ಸರ್ಕಾರದ ಜಾಗವೇ ಇಲ್ಲ ಎಂಬ ಸಬೂಬು ಹೇಳುತ್ತಿದೆ.
ಉದ್ದೇಶವೇ ಮೂಲೆಗುಂಪುಮನೆ, ಹೋಟೆಲ್ ಮತ್ತು ಅಂಗಡಿಗಳ ಒಣ ಹಾಗೂ ಹಸಿ ಕಸವನ್ನು ಪಂಚಾಯಿತಿ ವಾಹನಕ್ಕೆ ನೀಡಿ ಸ್ವಚ್ಛತೆ ಕಾಪಾಡಬೇಕಿತ್ತು. ಆದರೆ, ಇತ್ತ ಜನ ಹಸಿ ಹಾಗೂ ಒಣ ಕಸ ಬೇರ್ಪಡಿಸುವ ಗೋಜಿಗೆ ಹೋಗದೆ ಎಲ್ಲ ಕಸವನ್ನು ವಾಹನದಲ್ಲಿ ಹಾಕುತ್ತಾರೆ. ಆ ಕಸವನ್ನು ಗ್ರಾಪಂ ಸಿಬ್ಬಂದಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಬೇಕಿದೆ. ಘಟಕದಲ್ಲಿ ಸಂಗ್ರಹವಾಗುವ ಕಸವನ್ನು ಬೇರ್ಪಡಿಸಲು ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಗೆ ಕೆಲಸ ನೀಡಬೇಕೆಂಬ ನಿಯಮವಿದೆ. ಆದರೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸ ಹಾಕಿ ಕಸಕ್ಕೆ ಬೆಂಕಿ ಹಚ್ಚಿ ಪರಿಸರವನ್ನೇ ಹಾಳುತ್ತಿದ್ದಾರೆ.
ಗ್ರಾಮೀಣ ಪ್ರದೇಶ ಕೆಲವೆಡೆಗಳಲ್ಲಿ ನಿಮ್ಮ ಬಕೀಟೂ ಬೇಡ, ನಮ್ಮ ಕಸನೂ ನಿಮಗೆ ಕೊಡುವುದಿಲ್ಲ. ಅದಕ್ಕೆ ತೆರಿಗೆ ಹಣನೂ ಕಟ್ಟುವುದಿಲ್ಲ ಎಂದು ಜನ ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ 2 ವರ್ಷಗಳ ಕಾಲ ಬಳಕೆದಾರರಿಂದ ಘನತ್ಯಾಜ್ಯವನ್ನು ಸಂಗ್ರಹಿಸುತ್ತಿದೆ. ಆರಂಭದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ 6 ತಿಂಗಳ ಕಾಲ ಗ್ರಾಪಂ ವೇತನ ನೀಡಬೇಕೆಂಬ ಒಪ್ಪಂದವಿದೆ. ನಂತರದಲ್ಲಿ ಆ ಮಹಿಳೆಯರು ಪ್ರತಿ ಮನೆಯಿಂದ ತಿಂಗಳಿಗೆ ₹30, ಅಂಗಡಿಗಳಿಂದ ₹50 ತೆರಿಗೆ ಸಂಗ್ರಹಿಸಿ ಕಸದ ವಾಹನಕ್ಕೆ ಇಂಧನ ಹಾಕಿಸಿ ನಂತರದಲ್ಲಿ ತಮ್ಮ ವೇತನ ಪಡೆದುಕೊಳ್ಳಬೇಕಿದೆ. ಆದರೆ, ಯಾವ ಗ್ರಾಪಂನಲ್ಲಿಯೂ ಕೆಲಸ ಆಗುತ್ತಿಲ್ಲ. ವರ್ಗ-1ರಿಂದ ಬಂದ ತೆರಿಗೆ ಹಣದಲ್ಲೇ ವಾಹನಕ್ಕೆ ಇಂಧನ ಹಾಕುತ್ತಾರೆ. ವಾಹನ ದುರಸ್ತಿಗೂ ತೆರಿಗೆ ಹಣ ಬಳಸುತ್ತಾರೆ.ಪರಿಸರ ಹಾಳು
ಕೋಡಬಾಳ ಚಂದ್ರಪ್ಪ, ಹೊಳಲು ಗ್ರಾಮಸ್ಥ.
ವಿಲೇವಾರಿಗೆ ತಡೆ
ಉಮೇಶ, ತಾಪಂ ಇಒ, ಹೂವಿನಹಡಗಲಿ