- ಮಹಿಳಾಪರ ಕಾನೂನು ಅರಿವಿನ ಕಾಯ೯ಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಡಾ. ಕೆ.ಅನಂತ್ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಮಂಗಳೂರಿನ ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ಮತ್ತು ಚಿತ್ರದುಗ೯ ಜಿಲ್ಲಾ ಮಹಿಳಾ ತರಬೇತುದಾರರ ಸಂಚಲನ ಸಮಿತಿ ಸಹಯೋಗದಲ್ಲಿ ನಡೆದ ಮಹಿಳಾಪರ ಕಾನೂನು ಅರಿವಿನ ಕಾಯ೯ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಚಲನ ಸಮಿತಿಯು ಸಮಾಜದಲ್ಲಿ ದೌಜ೯ನ್ಯಕ್ಕೆ ಒಳಗಾದ, ಮಹಿಳಾ ಪರವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾಯ೯ಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು.
ಸಮಾಜ ಸೇವಕಿ ಕೆ.ಸಿ.ವೀಣಾ ಮಾತನಾಡಿ, ಮಹಿಳೆಯರು ಟಿ.ವಿ. ಸೀರಿಯಲ್‌ಗಳಲ್ಲಿ ಬರುವ ಪಾತ್ರದ ತರ ನಿಜ ಜೀವನದಲ್ಲಿ ಬದುಕಲು ಹೋಗಿ, ಸಮಾಜ ಮತ್ತು ಕುಟುಂಬಗಳಲ್ಲಿ ಕಲಹ, ದೌಜ೯ನ್ಯಗಳು ನಡೆಯಲು ಕಾರಣವಾಗುತ್ತವೆ. ಸಮಾಜದಲ್ಲಿ ಒಂದೇ ಕಡೆಯಿಂದ ತಪ್ಪುಗಳು ಆಗುವುದಿಲ್ಲ. ಎರಡು ಕಡೆಯಿಂದ ನಡೆಯುತ್ತವೆ. ತಪ್ಪುಗಳು ಆಗದಂತೆ ಎಚ್ಚರ ವಹಿಸೋದು ಅನಿವಾಯ೯. ಮಹಿಳೆಯರ ಮೇಲೆ ದೌಜ೯ನ್ಯ ನಡೆದರೆ ಕಾನೂನಿನ ಮೂಲಕ ಪರಿಹಾರ ಕಂಡುಕೊಳ್ಳಲು ಸಂಚಲನದಂತಹ ಸಂಘ ಸಂಸ್ಥೆಗಳು ನೆರವು ನೀಡಬೇಕು ಎಂದು ತಿಳಿಸಿದರು.ನಿಸಗ೯ ಸಂಸ್ಥೆ ನಿದೇ೯ಶಕಿ ವಂದನೀಯ ಸಿಸ್ಟರ್ ಮರಿಯಾ ಪಿಂಟೋ, ಭೋವಿ ಸಮಾಜದ ಕಾಯ೯ದಶಿ೯ ರಾಮಚಂದ್ರಪ್ಪ, ಸಂಚಲನ ರಾಜ್ಯ ಸಮಿತಿಯ ಮಾಜಿ ಅಧ್ಯಕ್ಷೆ ವತ್ಸಲಾ ನಾಯಕ್, ಪೊಲೀಸ್ ಇಲಾಖೆಯ ಚಿದಾನಂದ, ರಾಜ್ಯ ಸಂಚಲನಾ ಖಜಾಂಚಿ ಶೈಲಜ, ಮಹಿಳಾ ಪೊಲೀಸ್ ಮಂಜುಳ, ನಿ.ಶಿ.ಗೀತಾ ಸಿಂಗ್ ಮಾತನಾಡಿದರು. ರಾಜ್ಯ ಮಹಿಳಾ ತರಬೇತುದಾರರ ಸಂಚಲನ ಸಮನ್ವಯ ಸಮಿತಿ ಅಧ್ಯಕ್ಷೆ ಆಶಾಲತ ಅಧ್ಯಕ್ಷತೆ ವಹಿಸಿದ್ದರು.
- - -
- ಜ್ಯೋತಿ, ನ್ಯಾಯವಾದಿ
ಹೊಸದುರ್ಗ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ನಡೆದ ಮಹಿಳಾಪರ ಕಾನೂನು ಅರಿವಿನ ಕಾಯ೯ಕ್ರಮವನ್ನು ಡಿಸಿಸಿ ಬ್ಯಾಂಕ್ ನಿದೇ೯ಶಕ, ಜಿಪಂ ಮಾಜಿ ಸದಸ್ಯ ಡಾ. ಕೆ.ಅನಂತ್ ಉದ್ಘಾಟಿಸಿದರು.