ಕನ್ನಡಪ್ರಭ ವಾರ್ತೆ ಬೇತಮಂಗಲಜಿಲ್ಲೆಯಲ್ಲೇ ಅತಿ ದೊಡ್ಡ ಕೆರೆ ರಾಮಸಾಗರ ಹಾಗೂ ಬೇತಮಂಗಲ ಪಾಲಾರ್ ಕೆರೆಗಳಲ್ಲಿ ನೀರಿನ ಲಭ್ಯತೆಯಿಂದ ಸ್ಥಳೀಯ ಕೊಳವೆ ಬಾವಿಗಳಲ್ಲಿ ಉತ್ತಮ ನೀರಿದ್ದು, ಕುಡಿಯುವ ನೀರಿನ ಅಭಾವವಿಲ್ಲದೆ ಜನ ಜಾನುವಾರುಗಳಿಗೆ ಸಹಕಾರಿಯಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಬಲ್ಲಂಪಲ್ಲಿ, ಜೆ.ಕೆ ಪುರ, ನಾಗಕುಪ್ಪ, ಶ್ರೀನಿವಾಸಸಂದ್ರ, ಮೇಲುಪಲ್ಲಿಗಳಲ್ಲಿ ತಲಾ ೧೨ ಲಕ್ಷ ರು., ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.ಯುಗಾದಿ ಹಬ್ಬದೊಳಗೆ ಗ್ರಾಪಂನಲ್ಲಿ ಪ್ರವಾಸ ಮಾಡಿ ಸ್ಥಳೀಯ ಸಮಸ್ಯೆ ಮತ್ತು ಅಭಿವೃದ್ಧಿಯ ಬಗ್ಗೆ ಸಭೆ ನಡೆಸಲು ತಿರ್ಮಾನಿಸಲಾಗಿತ್ತು, ಆದರೆ ಸದನವಿದ್ದ ಕಾರಣ ಸಾಧ್ಯವಾಗಿರಲಿಲ್ಲ. ಆದರೆ ಇಂದು ೫ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಲೋಕಾರ್ಪಣೆಗೊಳಿಸಿದ್ದು, ಈ ಭಾಗದ ಜನರು ಉತ್ತಮ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು.ಬೇಸಿಗೆ ಎದುರಿಸಲು ಸಿದ್ಧ: ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಬೇಸಿಗೆ ಮತ್ತಷ್ಟು ಬಿಗಡಾಯಿಸಿದೆ, ಆದ್ದರಿಂದ ಆಯಾ ವ್ಯಾಪ್ತಿಯ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಬೇಕು, ಜಿಲ್ಲಾಡಳಿತದಿಂದಲೂ ಬೇಸಿಗೆ ಎದುರಿಸಲು ಅನುದಾನ ಕ್ರಿಯಾಯೋಜನೆ ರೂಪಿಸಿದೆ ಎಂದು ಹೇಳಿದರು.ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಂಗನವಾಡಿ, ಶಾಲಾ ಆವರಣ, ಮತ್ತು ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ಜಾಗವಿಲ್ಲದ ಪರಿಣಾಮ ಸುಮಾ ನಾರಾಯಣಪ್ಪ ಉಚಿತವಾಗಿ ಸ್ಥಳ ದಾನವಾಗಿ ನೀಡಿದ್ದು, ಅವರನ್ನು ಸನ್ಮಾನಿಸಿ ದಾನಿಗಳ ಹೆಸರನ್ನು ನಾಮಫಲಕಗಳಲ್ಲಿ ಅಳವಡಿಸಲು ಗ್ರಾಪಂಗಳಿಗೆ ಸೂಚಿಸಿದರು.ಕೆಜಿಎಫ್ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗುತ್ತದೆ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಘಟಕ ಉದ್ಘಾಟಿಸಿದೆ ಎಂದರು.ಲಂಚ ರಹಿತ ಶಾಸಕಿ: