ಅಡಕೆ ಕೃಷಿ ಸಮಸ್ಯೆಗೆ ಪರಿಹಾರ ಮರೀಚಿಕೆ: ಟಿ.ಎನ್ ಪ್ರಕಾಶ್ ಕಮ್ಮರಡಿ

KannadaprabhaNewsNetwork |  
Published : Feb 02, 2025, 11:47 PM IST
02ಸಿಕೆಎಂ 1: ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಕಮ್ಮರಡಿ ಮಾತನಾಡಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮಲೆನಾಡ ಸಾಂಪ್ರದಾಯಿಕ ಅಡಕೆ ಕೃಷಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಸರ್ಕಾರ ಅಥವಾ ಸದ್ಯದ ಸಂಶೋಧನಾ ವ್ಯವಸ್ಥೆ ಗಳಿಂದ ಪರಿಹಾರ ಇನ್ನೂ ಮರೀಚಿಕೆಯಾಗಿದೆ ಎಂದು ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕೃಷಿ ಆರ್ಥಿಕ ತಜ್ಞ ಡಾ. ಟಿ.ಎನ್ ಪ್ರಕಾಶ್ ಕಮ್ಮರಡಿ ತಿಳಿಸಿದರು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಲೆನಾಡ ಸಾಂಪ್ರದಾಯಿಕ ಅಡಕೆ ಕೃಷಿ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳಿಗೆ ಸರ್ಕಾರ ಅಥವಾ ಸದ್ಯದ ಸಂಶೋಧನಾ ವ್ಯವಸ್ಥೆ ಗಳಿಂದ ಪರಿಹಾರ ಇನ್ನೂ ಮರೀಚಿಕೆಯಾಗಿದೆ ಎಂದು ಕೃಷಿಬೆಲೆ ಆಯೋಗದ ಮಾಜಿ ಅಧ್ಯಕ್ಷ ಹಾಗೂ ಕೃಷಿ ಆರ್ಥಿಕ ತಜ್ಞ ಡಾ. ಟಿ.ಎನ್ ಪ್ರಕಾಶ್ ಕಮ್ಮರಡಿ ತಿಳಿಸಿದರುಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇವುಗಳ ಮಧ್ಯೆ ಅನಗತ್ಯ ಆಮದು, ಜೊತೆಗೆ ಅಡಕೆ ಸೇವನೆಯೇ ಅಪಾಯಕಾರಿ ಕ್ಯಾನ್ಸರ್‌ಗೆ ಕಾರಣ ಎಂಬ ಅಪಪ್ರಚಾರದ ಜೊತೆಗೆ ನಿಷೇಧದ ಭೀತಿ ಕೇಳಿಬರುತ್ತಿದೆ. ಜೊತೆಗೆ ಗಾಡ್ಗಿಲ್, ಕಸ್ತೂರಿ ರಂಗನ್ ವರದಿಗಳು ಅರಣ್ಯ ಒತ್ತುವರಿ ಹೆಸರಿನಲ್ಲಿ ಬಲಾತ್ಕಾರ ಒಕ್ಕಲೆಬ್ಬಿಸುವಿಕೆ ಇವುಗಳು ಆತಂಕ ಸೃಷ್ಟಿಸುತ್ತಿದ್ದು, ಅರಣ್ಯ ವಿನಾಶಕರೆಂಬ ಅಪಾದನೆ ಕೂಡ ಪಶ್ಚಿಮ ಘಟ್ಟದ ಅಡಕೆ ಬೇಸಾಯ ಗಾರರ ಮೇಲಿದೆ ಎಂದು ವಿಷಾಧಿಸಿದರು.ಪ್ರಸ್ತುತ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ನಿವಾರಣೆಗೆ ಅಡಕೆ ಸಹಕಾರ ಮಂಡಳಿ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿ ರಾಜ್ಯದ 170 ತಾಲೂಕುಗಳಲ್ಲಿ ಅಡಕೆ ಬೆಳೆ ಬೆಳೆಯಲಾಗಿದ್ದು, ಅಡಕೆ ಕೃಷಿಯ ಮೇಲೆ ಸಮಗ್ರ ಸಂಶೋಧನೆ ಮತ್ತು ಅಭಿವೃದ್ಧಿ ಕಾರ‍್ಯಗಳನ್ನು ಸ್ಥಿರವಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಈ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಸಧ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.ಫೆ.4 ರಂದು ಮಾಮ್ಕೋಸ್ ಚುನಾವಣೆ ನಡೆಯುತ್ತಿದ್ದು, ಇದರಲ್ಲಿ ಸದಸ್ಯರು ಗಂಭೀರವಾಗಿ ಚಿಂತಿಸಿ ಮತ ಚಲಾಯಿಸುವ ಜೊತೆಗೆ ಅಡಕೆ ಬೆಳೆಗಾರರ ನೆರವಿಗೆ ಧಾವಿಸುವಂತಹ ವ್ಯಕ್ತಿಯನ್ನು ಆಯ್ಕೆಮಾಡಬೇಕೆಂದು ಮನವಿ ಮಾಡಿದರು. ರೋಗ-ರುಜಿನ ಹಾವಳಿ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಕಾಫಿ, ಚಹಾ ಬೆಳೆಗಳಿಗಿರುವ ಸಂಶೋಧನಾ ವ್ಯವಸ್ಥೆ ರಾಜ್ಯಾದ್ಯಂತ ಬೇಕಾಬಿಟ್ಟಿ ವಿಸ್ತರಿಸುವುದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡ ಪಿ.ವಿ ಲೋಕೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.02ಸಿಕೆಎಂ 1:

ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಕಮ್ಮರಡಿ ಮಾತನಾಡಿದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ