ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ 7 ರಿಂದ 20 ವರ್ಷದೊಳಗಿನ ಆಸಕ್ತ ವಿದ್ಯಾರ್ಥಿಗಳು,ಯುವಕ ಯುವತಿಯರು ಪಾಲ್ಗೊಳ್ಳಬಹುದು. ಪ್ರತಿದಿನ ಬೆಳಿಗ್ಗೆ 6.30ರಿಂದ 8.30 ರವರೆಗೆ ತರಬೇತಿ ನಡೆಯಲಿದೆ. ಶಿಬಿರಾರ್ಥಿಗಳಿಗೆ ಹಾಲು, ಮೊಟ್ಟೆ, ಬಾಳೆಹಣ್ಣು ನೀಡಲಾಗುವುದು ಎಂದರು.ಡಾಲ್ಫಿನ್ಸ್ ಕ್ಲಬ್ ವತಿಯಿಂದ ಬೇಸಿಗೆ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಒಳ್ಳೆಯ ಅವಕಾಶವಿದ್ದು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸೂಚನೆಯಂತೆ ಶಿಬಿರದಲ್ಲಿ ಟರ್ಫ್ ಮೈದಾನಕ್ಕೆ ಬಳಸುವ ಶೂ ಮತ್ತು ಹಾಕಿ ಸ್ಟಿಕ್ ಹೊಂದಿರಬೇಕು. ಶಿಬಿರಕ್ಕೆ ನೋಂದಣಿ ಮಾಡಿಕೊಳ್ಳುವ ಆಸಕ್ತ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಜರು ಪಡಿಸಬೇಕು. ಶಾಲಾ ಕಾಲೇಜುಗಳ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕೆಂದು ಮನವಿ ಮಾಡಿದರು.ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ಎಸ್.ವಿ.ಸುನಿಲ್ ಹಾಗೂ ವಿಕ್ರಂಕಾಂತ್ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್, ಖಜಾಂಚಿ ಪ್ರಸನ್ನ ನಾಯರ್, ಪದಾಧಿಕಾರಿಗಳಾದ ಪ್ರಜಾ ಪೂಣಚ್ಚ, ರಂಜನ್ ಮತ್ತಿತರರು ಇದ್ದರು.