ಸೋಮವಾರಪೇಟೆ: ಜೇಸಿ ಸಪ್ತಾಹ ಸಂಪನ್ನ

KannadaprabhaNewsNetwork |  
Published : Nov 15, 2025, 02:45 AM IST
ಜೇಸಿ ಸಪ್ತಾಹ ಸಂಪನ್ನ | Kannada Prabha

ಸಾರಾಂಶ

ಜೇಸಿ ಪುಷ್ಪಗಿರಿ ಸೋಮವಾರಪೇಟೆ ಹಿಲ್ಸ್‌ನ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಜೇಸಿ ಸಪ್ತಾಹ ಸ್ಥಳೀಯ ನಂಜಮ್ಮ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಜೇಸಿ ಪುಷ್ಪಗಿರಿ ಸೋಮವಾರಪೇಟೆ ಹಿಲ್ಸ್‌ನ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಜೇಸಿ ಸಪ್ತಾಹ ಸ್ಥಳೀಯ ನಂಜಮ್ಮ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜೇಸಿ ಸ್ಥಾಪಕ ಅಧ್ಯಕ್ಷ ಕೆ.ಎನ್. ತೇಜಸ್ವಿ ಮಾತನಾಡಿ, ಪ್ರಪಂಚದಲ್ಲಿ ಜೇಸಿ ಪ್ರಾರಂಭಗೊಂಡು ೧೧೫ ವರ್ಷಗಳು ಪೂರೈಸಿದ್ದು, ಸ್ಥಳೀಯವಾಗಿ ೧೯೭೬ರಲ್ಲಿ ಪ್ರಾರಂಭಗೊಂಡ ಸಂಸ್ಥೆ ೫೦ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಂಸ್ಥೆ ವತಿಯಿಂದ ಪ್ರತಿ ವರ್ಷ ಆಯೋಜಿಸುತ್ತಿರುವ ಜೇಸಿ ಸಪ್ತಾಹ ಹಲವು ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡಗುತ್ತಿದೆ. ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ಇಲ್ಲಿ ನಡೆಯುವ ಹಲವು ಸ್ಪರ್ಧಾ ಕಾರ್ಯಕ್ರಮದಲ್ಲಿ ಗ್ರಾಮೀಣ ಭಾಗಗಳಿಂದಲೂ ಪ್ರತಿಭೆಗಳು ಸ್ಪರ್ಧಿಸಿ ಬಹುಮಾನವನ್ನು ಪಡೆಯುತ್ತಿದ್ದಾರೆ ಎಂದರು.ಜೇಸಿ ಸಂಸ್ಥೆಯ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇಂದಿಗೂ ಪಟ್ಟಣದದಲ್ಲಿನ ಸಂಪಿಗೆಕಟ್ಟೆಗೆ ನಿರ್ಮಿಸಿರುವ ವೇದಿಕೆ ಜನಮಾನಸದಲ್ಲಿ ಉಳಿದಿದೆ. ಯಾವುದೇ ಕಾರ್ಯಕ್ರಮವನ್ನಾದರೂ, ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಬೇಕೆಂದರು.

ಸಂಸ್ಥೆಯ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿನುತಾ ಸುದೀಪ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಜೇಶ್, ಯೋಜನಾ ನಿರ್ದೇಶಕ ಎಂ.ಪಿ. ರಾಜೇಶ್, ಜೆಜೆಸಿ ದಿಶಾ ಗಿರೀಶ್ ಇದ್ದರು.

ಛದ್ಮವೇಷ, ಚದುರಂಗ, ಅಮ್ಮನ ಮಡಿಲು, ಬರವಣಿಗೆ ಸ್ಪರ್ಧೆ, ಗ್ರೂಪ್ ಡ್ಯಾನ್ಸ್, ಮ್ಯಾರಾಥಾನ್ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ