ಮದ್ಯ ಸೇವಿಸಲು ತಾಯಿ ಹಣಕೊಡದಿದ್ದಕ್ಕೆಸಿಟ್ಟಿಗೆದ್ದು ಕಸದ ಲಾರಿಗೆ ಸಿಲುಕಿ ಸತ್ತ ಮಗ

KannadaprabhaNewsNetwork |  
Published : Jun 29, 2026, 03:45 AM ISTUpdated : Jun 29, 2026, 04:22 AM IST
Death

ಸಾರಾಂಶ

ಮದ್ಯಸೇವಿಸಲು ತಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಗನೊಬ್ಬ ಕಸದ ಲಾರಿಗೆ ಸಿಲುಕಿ ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಿವಾಸಿ ಸಿದ್ದರಾಜು (29) ಆತ್ಮಹತ್ಯೆ ಮಾಡಿಕೊಂಡ ಯುವಕ

 ಬೆಂಗಳೂರು :  ಮದ್ಯಸೇವಿಸಲು ತಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ಮಗನೊಬ್ಬ ಕಸದ ಲಾರಿಗೆ ಸಿಲುಕಿ ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಿವಾಸಿ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಿವಾಸಿ ಸಿದ್ದರಾಜು (29) ಆತ್ಮ*ತ್ಯೆ ಮಾಡಿಕೊಂಡ ಯುವಕ. ಭಾನುವಾರ ಮುಂಜಾನೆ 3.30ರ ಸುಮಾರಿಗೆ ಸಿ.ಕೆ.ಪಾಳ್ಯ ರಸ್ತೆಯಲ್ಲಿ ಚಲುಸುತ್ತಿದ್ದ ಕಸದ ಲಾರಿಯ ಹಿಂಭಾಗದ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿರುವ ಸಿದ್ದರಾಜು ಮತ್ತು ಆತನ ತಾಯಿ, ಹುಳಿಮಾವುನಲ್ಲಿ ವಾಸವಾಗಿದ್ದಾರೆ. ಈತನ ತಾಯಿ ಖಾಸಗಿ ಶಾಲೆಯಲ್ಲಿ ಸಹಾಯಕಿಯಾಗಿದ್ದಾರೆ. ಈತ ಯಾವುದೇ ಕೆಲಸಕ್ಕೆ ಹೋಗದೆ ಮದ್ಯ ಸೇವಿಸುವುದನ್ನೇ ಚಟವಾಗಿಸಿಕೊಂಡಿದ್ದ. ಮಗನ ಅವ್ಯವಸ್ಥೆಯಿಂದ ತೀವ್ರ ನೊಂದಿದ್ದ ತಾಯಿ, ಕುಡಿತದ ಚಟ ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಿರಲಿಲ್ಲ. ತಾಯಿಗೆ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ.

, ಚಲಿಸುತ್ತಿದ್ದ ಬಿಬಿಎಂಪಿ ಕಸದ ಲಾರಿ ಲಾರಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟ

ಸಿದ್ದರಾಜು ಶನಿವಾರ ರಾತ್ರಿ ತನ್ನ ತಾಯಿ ಬಳಿ ಕುಡಿಯಲು ಹಣ ಕೇಳಿದ್ದಾನೆ.ಅದಕ್ಕೆ ಹಣ ಕೊಡುವುದಿಲ್ಲ ಎಂದಿದ್ದಾರೆ. ಇದರಿಂದ ಕೋಪಗೊಂಡು ಮನೆಯಿಂದ ಹೊರಹೋಗಿದ್ದ ಸಿದ್ದರಾಜು, ತನ್ನ ಸ್ನೇಹಿತರ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಅವರೂ ಹಣ ನೀಡಿಲ್ಲ. ಹೀಗಾಗಿ ಮುಂಜಾನೆ 3.30ರ ಸುಮಾರಿಗೆ ಸಿ.ಕೆ.ಪಾಳ್ಯ ರಸ್ತೆಗೆ ಬಂದು, ಚಲಿಸುತ್ತಿದ್ದ ಬಿಬಿಎಂಪಿ ಕಸದ ಲಾರಿ ಲಾರಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ಸಿದ್ದರಾಜು ಆತ್ಮ*ತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಆದರೆ, ಆತನ ಸಂಬಂಧಿಕರು ಲಾರಿ ಚಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಆರೋಪಿದ್ದಾರೆ.

ಹುಳಿಮಾವು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ಘಟನಾ ಸ್ಥಳದ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾಗ ಆತನೇ ಲಾರಿಗೆ ಸಿಲುಕಿ ಆತ್ಮ*ತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕಾನೂನು ಮತ್ತು ಸುವ್ಯವಸ್ಥೆ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಜೆಡಿಎಸ್‌ ಕಾರ್ಯಕರ್ತರಿಗಾಗಿ ಎಸ್‌ಐಆರ್‌ ಕಾರ್ಯಾಗಾರ: ದೇವಾನಂದ ಚವ್ಹಾಣ
ವರುಣನ ಕೃಪೆಗಾಗಿ ಇಂದ್ರ ಹೋಮ ವಿಶೇಷ ಪೂಜೆ