- ಜಾತಿ ಮುಂದೆ ಕ್ರಿಶ್ಚಿಯನ್ ಸೇರಿಸಿ ರಾಜ್ಯ ಪ್ರಯೋಗ ಶಾಲೆ ಮಾಡಿದ್ದಾರೆ: ಯತ್ನಾಳ್ ಟೀಕೆ - - -
ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಯಿ-ಮಗನ ಮಧ್ಯೆ ಜಗಳ ನಡೆದಿದೆ. ಅದಕ್ಕಾಗಿಯೇ ಇಬ್ಬರೂ ಕರ್ನಾಟಕವನ್ನು ಪ್ರಯೋಗ ಶಾಲೆ ಮಾಡಿಕೊಂಡಿದ್ದಾರೆ. ಆದರೆ, ಕಾಂಗ್ರೆಸ್ಸಿನವರ ಪ್ರಯತ್ನ ಯಶಸ್ವಿ ಆಗುವುದಿಲ್ಲ. ಎಲ್ಲರೂ ಹಿಂದೂಗಳೆಂದು ಬರೆಸುತ್ತಿದ್ದಾರೆ ಎಂದರು.
ಜಾತಿಗಣತಿ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಕೇಂದ್ರ ಸರ್ಕಾರವೇ ಜಾತಿಗಣತಿ ಮಾಡುತ್ತದೆ. ಆದರೂ ಉದ್ದೇಶ ಪೂರ್ವಕವಾಗಿ ಚಿತ್ರ-ವಿಚಿತ್ರ ಜಾತಿಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸೃಷ್ಟಿ ಮಾಡಿದೆ. ಕೆಲವರು ವೀರಶೈವರು, ಲಿಂಗಾಯತ ಅಂತಾ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮಾಜ ಹಾಳು ಮಾಡಲೆಂದೇ ಇರುವ 2-3 ಸ್ವಾಮೀಜಿಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸ್ವಾಮೀಜಿಗಳು ಹಿಂದೂ ಎಂಬುದಾಗಿ ಬರೆಸಲು ಕರೆ ನೀಡಿದ್ದಾರೆ. ರಾಜ್ಯ ಸರ್ಕಾರದ ಜಾತಿಗಣತಿಗೆ ನಮ್ಮ ವಿರೋಧವಿದೆ. ಸರ್ಕಾರ ಇನ್ನಾದರೂ ಜಾತಿಗಣತಿ ಹಿಂಪಡೆಯಲಿ ಎಂದು ಒತ್ತಾಯಿಸಿದರು.ಲಿಂಗಾಯತ ಧರ್ಮ ಎನ್ನುವುದು ಅನುಮೋದನೆಯೇ ಆಗಿಲ್ಲ. ದೇಶದಲ್ಲಿ ಆರು ಧರ್ಮ ಮಾತ್ರ ಇರುವುದು. ಮೀಸಲಾತಿ ಗೊಂದಲ ಆಗಬಾರದು. ಎಲ್ಲರೂ ಹಿಂದೂ ಅಂತಾ ಬರೆಸುತ್ತಿದ್ದಾರೆ. ವೀರಶೈವ ಲಿಂಗಾಯತ ಅಂತೆಲ್ಲಾ ಸಮಾಜವನ್ನು ಒಡೆಯುವ ಕೆಲಸ ಕೆಲವು ಶಕ್ತಿಗಳು ಮಾಡುತ್ತಿವೆ. ಪ್ರತ್ಯೇಕ ಲಿಂಗಾಯತ ಧರ್ಮ ಎಂಬುದು ದೊಡ್ಡ ಸಮಾಜವನ್ನು ಒಡೆಯುವ ಹುನ್ನಾರ ಎಂದು ಯತ್ನಾಳ್ ಕಿಡಿಕಾರಿದರು.
(ಬಾಕ್ಸ್)
- ಸಿದ್ದು, ಎಸ್ಸೆಸ್ಸೆಂ ಪ್ರಚೋದನೆಯೇ ದಾವಣಗೆರೆ ಗಲಭೆಗೆ ಕಾರಣ: ಆರೋಪ ದಾವಣಗೆರೆ: ದೇವರಿಗೆ ಐ ಲವ್ ಅಂತಾ ಹೇಳೋದು ನಮ್ಮ ಧರ್ಮವೇ ಅಲ್ಲ. ಐ ಲವ್ ಅಂತಾ ಪ್ರೇಯಸಿಗೆ ಹೇಳುತ್ತಾರೆ. ಅತ್ಯಂತ ಪ್ರೀತಿಯ ಮಕ್ಕಳಿಗೆ ಹೇಳುತ್ತಾರೆ. ಈಗ ದೇವರಿಗೂ ಅದನ್ನೇ ಉಪಯೋಗಿಸುತ್ತಿದ್ದಾರೆಂದರೆ ಇದು ರಾಜ್ಯದಲ್ಲೂ ಅಶಾಂತಿ ಮೂಡಿಸುವ ಯತ್ನವಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿಗೆ ಕೇಳಿ ನಾವು ಫ್ಲೆಕ್ಸ್ ಹಾಕಬೇಕಾ ಅಂತ? ಮಸೀದಿ ಮುಂದೆ ಹೋಗಬೇಡಿ ಅನ್ನೋರು, ಈದ್ ಮೆರವಣಿಗೆ ದೇವಸ್ಥಾನದ ಮುಂದೆ ಹೋಗಬೇಡಿ ಅಂತಾ ಹೇಳಿ ನೋಡೋಣ. ಮಾಧ್ಯಮಗಳಲ್ಲಿ ಬಂದಿರುವುದೆಲ್ಲಾ ಸತ್ಯವಿರುತ್ತದೆ. ಎಲ್ಲೋ ಒಂದೋ, ಎರಡೋ ಸುಳ್ಳು ಹೇಳಬಹುದು. ಆದರೆ, ಎಲ್ಲ ಮಾಧ್ಯಮಗಳಲ್ಲಿ ಬರುತ್ತಿದೆ. ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲ್ಲು ತೂರಾಟವಾಗಿಲ್ಲ ಎಂಬ ಹೇಳಿಕೆ ನೀಡುವ ಬದಲು, ಮೊದಲು ಪರಿಶೀಲನೆ ಮಾಡಬೇಕು. ಕೃತ್ಯವನ್ನು ಸಮರ್ಥಿಸಿಕೊಳ್ಳಲು ಪೊಲೀಸ್ ಇಲಾಖೆಗೆ ಫ್ರೀ ಹ್ಯಾಂಡ್ ಕೊಟ್ಟಿಲ್ಲ. ಫ್ರೀ ಹ್ಯಾಂಡ್ ಕೊಟ್ಟರೆ ಯಾರು ಏನು ಅಂತಾ ತೋರಿಸುತ್ತಾರೆ ಎಂದು ಯತ್ನಾಳ್ ತಿಳಿಸಿದರು.
- - -
- ಬಸನಗೌಡ ಪಾಟೀಲ ಯತ್ನಾಳ್, ಶಾಸಕ, ವಿಜಯಪುರ ಕ್ಷೇತ್ರ.
(ಫೋಟೋ ಇಲ್ಲ)