ಮನಸ್ಸಿನ ನಿಯಂತ್ರಣದಲ್ಲಿ ಶಬ್ದಕ್ಕೆ ದೊಡ್ಡ ಶಕ್ತಿ ಇದೆ: ರಿತು ಸಾಂಬ್ರಾಣಿ

KannadaprabhaNewsNetwork |  
Published : Oct 26, 2026, 03:15 AM IST
ಉಚಿತ ಧ್ವನಿ ತರಂಗ ಚಿಕಿತ್ಸೆ ನೀಡುತ್ತಿರುವ ಡಾ.ರಿತು ಸಂಬ್ರಾಣಿ. | Kannada Prabha

ಸಾರಾಂಶ

ಶಬ್ದಕ್ಕೆ ದೊಡ್ಡ ಶಕ್ತಿ ಇದೆ, ಅದು ನಮ್ಮ ಮನಸ್ಸಿನ ಶಾಂತಿ, ಉತ್ತಮ ಆರೋಗ್ಯ ಏಕಾಗ್ರತೆಯ ಬಹು ದೊಡ್ಡ ಶಕ್ತಿ ಎಂದು ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ತಜ್ಞೆ ಡಾ. ರಿತು ಸಾಂಬ್ರಾಣಿ ತಿಳಿಸಿದರು.

ಹಾನಗಲ್ಲ: ಶಬ್ದಕ್ಕೆ ದೊಡ್ಡ ಶಕ್ತಿ ಇದೆ, ಅದು ನಮ್ಮ ಮನಸ್ಸಿನ ಶಾಂತಿ, ಉತ್ತಮ ಆರೋಗ್ಯ ಏಕಾಗ್ರತೆಯ ಬಹು ದೊಡ್ಡ ಶಕ್ತಿ ಎಂದು ಯೋಗ ಮತ್ತು ಪ್ರಾಕೃತಿಕ ಚಿಕಿತ್ಸಾ ತಜ್ಞೆ ಡಾ. ರಿತು ಸಾಂಬ್ರಾಣಿ ತಿಳಿಸಿದರು.

ಹಾನಗಲ್ಲಿನ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ ಇಲ್ಲಿನ ಸರಸ್ವತಿ ಮಹಿಳಾ ಮಂಡಳ ಆಯೋಜಿಸಿದ ಧ್ವನಿಯ ಶಕ್ತಿ ಆರೋಗ್ಯದ ಕಡೆಗೆ ಉಚಿತ ಧ್ವನಿ ತರಂಗ ಚಿಕಿತ್ಸೆ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದ ಅವರು, ಔಷಧಿ ಇಲ್ಲದೆ ರೋಗಗಳನ್ನು ಗುಣಪಡಿಸುವ, ಎಲ್ಲದಕ್ಕೂ ಮುಖ್ಯವಾಗಿ ಮಾನಸಿಕ ಶಾಂತಿ, ನೆಮ್ಮದಿ, ವಿಶ್ರಾಂತಿ, ಜೀವನ ಶೈಲಿಗೆ ಹೆಚ್ಚು ಸಹಕಾರಿಯಾದ ಧ್ವನಿ ತರಂಗ ಚಿಕಿತ್ಸೆ ಈಗ ಹೆಚ್ಚು ಪ್ರಚಲಿತವಾಗಿದೆ. ಟಿಬೇಟಿಯನ್ ಮೂಲಕ ಈ ಚಿಕಿತ್ಸಾ ಪದ್ಧತಿ ಅಡ್ಡಪರಿಣಾಮಗಳಿಲ್ಲದ ಆರಾಮದಯಕ ಚಿಕಿತ್ಸೆ. ಲೋಹದ ಬಟ್ಟಲಿನಂತಹ ವಾದ್ಯ ಮೊಳಗಿಸಿ ಅದರ ಧ್ವನಿ ಆಲಿಸುವ ಮೂಲಕ ಅದರ ಆವರ್ತನಗಳು ಮನುಷ್ಯನ ಮೇಲೆ ಸತ್ಪರಿಣಾಮ ಬೀರುತ್ತದೆ. ಒಳ್ಳೆಯ ಧ್ವನಿಯನ್ನು ಕೇಳುವುದರಲ್ಲಿಯೇ ಬಹು ದೊಡ್ಡ ಆರೋಗ್ಯವಿದೆ. ಈ ಮೂಲಕ ಆರೋಗ್ಯದಲ್ಲಿ ದೊಡ್ಡ ಕ್ರಾಂತಿ ಸಾಧ್ಯ. ಕೌಟುಂಬಿಕ ಸಾಮರಸ್ಯ, ವೈಯಕ್ತಿ ಶಾಂತಿ ನೆಮ್ಮದಿಗೆ ಇದು ಉತ್ತಮ ಪರಿಣಾಮ ಬೀರಬಲ್ಲದು. ಏಕಾಗ್ರತೆ ತಂದು ಕೊಟ್ಟು ಮನಷ್ಯನಿಗೆ ಒತ್ತಡ ಜೀವನಕ್ಕೆ ಮುಕ್ತಿ ನೀಡಬಲ್ಲದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ಶಾರದಾ ಉದಾಸಿ, ಇಂದಿನ ಒತ್ತಾಡದ ಯುಗದಲ್ಲಿ ಮನುಷ್ಯ ಅನಾರೋಗ್ಯದತ್ತ ದಾಪುಗಾಲು ಹಾಕುತ್ತಿರುವುದು ವಿಷಾದದ ಸಂಗತಿ. ಆದರೆ ಯಾವುದೇ ಅಡ್ಡ ಪರಿಣಾಮವಿಲ್ಲದ ಧ್ವನಿ ತರಂಗ ಚಿಕಿತ್ಸೆ ಉತ್ತಮ ಅನುಭವ ನೀಡಿದೆ. ಇಂತಹ ಪ್ರಾಕೃತಿಕ ಚಿಕಿತ್ಸೆಯ ಅಗತ್ಯ ಈಗ ಬಹಳಷ್ಟು ಇದೆ. ಇದು ಆರೋಗ್ಯದ ಸಿದ್ಧ ಸೂತ್ರ ಎಂಬುದು ನಮ್ಮ ಅರಿವಿಗೆ ಬಂದಿದೆ ಎಂದರು.

ಮಾಜಿ ಪುರಸಭೆ ಅಧ್ಯಕ್ಷ ವೀಣಾ ಗುಡಿ, ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕಿ ರೇಖಾ ಶೆಟ್ಟರ, ಶಿಕ್ಷಕಿ ರೂಪಾ ಗೌಳಿ, ಕಮಲಾಕ್ಷಿ ಕೊಂಡೋಜಿ, ವಿಜಯಲಕ್ಷ್ಮೀ ಹುಗ್ಗಿಶೆಟ್ಟರ, ಶ್ರೀದೇವಿ ಕೋಟಿ, ನಂದಾ ಕಬ್ಬೂರ, ವೀಣಾ ಬ್ಯಾತನಾಳ, ಶೈಲಾ ಕಬ್ಬೂರ, ಅಕ್ಕಮ್ಮ ಕುಂಬಾರಿ, ಶಾಂತಕ್ಕ ಹೊಳಲದ, ವಿಜಯಲಕ್ಷ್ಮೀ ಗುಡಗುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗಳು ಆತ್ಮವಿಶ್ವಾಸ ಮೂಡಿಸುತ್ತವೆ: ಆರ್.ವಿ. ಚಿನ್ನೀಕಟ್ಟಿ
ಅವನತಿಯತ್ತ ಗ್ರಾಮೀಣ ಕುಡಿಯುವ ನೀರಿನ ಕೆರೆಗಳು