ಕನ್ನಡಪ್ರಭ ವಾರ್ತೆ ಮಡಿಕೇರಿ
‘ನಿಮ್ಮೊಳಗೆ ಹಿತವನ್ನು ಕಂಡುಕೊಳ್ಳಿ, ದೇಹ ಮತ್ತು ಆತ್ಮಗಳ ಸಶಕ್ತೀಕರಣ, ಆರೈಕೆ, ಮನಸ್ಸುಗಳ ಚಿಕಿತ್ಸೆಗಾಗಿ ಧ್ವನಿ ಚಿಕಿತ್ಸೆ’ ಶಿರೋನಾಮೆಯಡಿಯಲ್ಲಿ ಪ್ರತಿಷ್ಠಾನದ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಡಾ.ಶಾಮ್ ರಾಕ್ ಮತ್ತು ಕುಮಾರಿ ಶಿಲ್ಪಿ ದಾಸ್ ಕಾರ್ಯಾಗಾರದ ನೇತೃತ್ವ ವಹಿಸಿದ್ದರು.
ವಿರಾಜಪೇಟೆಶಾಸಕ ಎ.ಎಸ್.ಪೊನ್ನಣ್ಣ, ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷ ಪ್ರಮೋದ್ ಗಣಪತಿ ಉದ್ಘಾಟಿಸಿದರು. ಕಾರಾಗೃಹದ ಉಪಾಧೀಕ್ಷಕ ಸಂಜಯ್ ದತ್ತಿ ಅಧ್ಯಕ್ಷತೆ ವಹಿಸಿದ್ದರು. 160ಕ್ಕೂ ಹೆಚ್ಚು ಕೈದಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ನಿರ್ವಿಶೀಕರಣ, ಒತ್ತಡ ಕಡಿಮೆ ಮಾಡುವುದು ಮತ್ತು ಭಾವನೆಗಳ ನಿಯಂತ್ರಣಗಳನ್ನೊಳಗೊಂಡ ಧ್ವನಿ ಚಿಕಿತ್ಸೆಯ ಪ್ರಯೋಜನಗಳ ಅನುಭವ ಪಡೆದುಕೊಂಡರು.ಕೈದಿಗಳ ಮೇಲೆ ಕಾರ್ಯಾಗಾರದ ಸಕಾರಾತ್ಮಕ ಪರಿಣಾಮಗಳ ಕುರಿತು ತಿಳಿಸಿಕೊಟ್ಟು ಮಾತನಾಡಿದ ಸಂಜಯ್ ದತ್ತಿ ಪ್ರತಿಷ್ಠಾನದ ಪ್ರಯತ್ನಗಳನ್ನು ಶ್ಲಾಘಿಸಿದರು.
ಕ್ಯಾನ್ಸರ್ ರೋಗಿಗಳು, ಸರ್ಕಾರಿ ಶಾಲೆಗಳು ಮತ್ತು ಹಿರಿಯ ನಾಗರಿಕರ ವಸತಿಗಳು ಸೇರಿದಂತೆ ವಿವಿಧ ಸಮುದಾಯಗಳಿಗೆ ಚಿಕಿತ್ಸಾ ಅಧಿವೇಶನಗಳನ್ನು ಮತ್ತು ತಾಳವಾದ್ಯ ವಾದಕರು ಮತ್ತು ನರ್ತಕರ ಸಂವಹನಾತ್ಮಕ ಸಮ್ಮೇಳನಗಳನ್ನು ಡಾ.ಶರಣ್ ರಾಕ್ ಪ್ರತಿಷ್ಠಾನವು ಆಯೋಜಿಸುತ್ತದೆ.