ಮಂಗಳೂರು ನಗರದ ಪ್ರಮುಖ ಅನಿಲ ವಿತರಣಾ ಕಂಪನಿಯಾದ ಗೈಲ್ ಗ್ಯಾಸ್ ದ.ಕ. ಜಿಲ್ಲೆಯಾದ್ಯಂತ 100 ಸಿಎನ್‌ಜಿ(ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಸ್ಟೇಷನ್ ಸ್ಥಾಪಿಸುವ ಯೋಜನೆ ಹೊಂದಿದೆ. ಮಂಗಳೂರಿನ ಮಂಗಳಾದೇವಿ, ಬಂಟ್ವಾಳದ ಕನ್ಯಾನ, ಕಾಡಂಬೆಟ್ಟು, ಪುತ್ತೂರು, ನೆಲ್ಯಾಡಿ, ಉಳ್ಳಾಲ ಹಾಗೂ ಗಡಿಭಾಗ ತಲಪಾಡಿಗಳಿಗೆ ಸಿಎನ್‌ಜಿ ಸ್ಟೇಷನ್ ವಿಸ್ತರಣೆಗೊಳ್ಳಲಿದೆ. ಗೈಲ್ ಗ್ಯಾಸ್‌ನ 22ನೇ ಸಿಎನ್‌ಜಿ ಸ್ಟೇಷನ್ ಸುರತ್ಕಲ್‌ನ ಎಚ್‌ಪಿಸಿಎಲ್ ವಿಜಯ್ ಫ್ಯೂಲ್ಸ್‌ನಲ್ಲಿ ಆರಂಭಗೊಂಡಿದೆ. ಇದು ಮೊದಲ ಆನ್‌ಲೈನ್ ಸಿಎನ್‌ಜಿ ಸ್ಟೇಷನ್ ಆಗಿದ್ದು, ದಿನದ 24 ಗಂಟೆಯೂ ವಾಹನಗಳಿಗೆ ಸಿಎನ್‌ಜಿ ಬಳಕೆಗೆ ಮುಕ್ತವಾಗಿದೆ. ಈ ಸ್ಟೇಷನ್‌ನಲ್ಲಿ ಒಂದೇ ದಿನದಲ್ಲಿ 1 ಸಾವಿರಕ್ಕೂ ಅಧಿಕ ಸಣ್ಣ ವಾಹನ, ಎಲ್‌ಸಿವಿಗಳು, ಬಸ್, ಟ್ರಕ್‌ಗಳಿಗೆ ಸಿಎನ್‌ಜಿ ಲಭ್ಯವಿರುತ್ತದೆ. ಇದು ಪರಿಸರ ಸ್ನೇಹಿ ಇಂಧನವಾಗಿರುವುದರಿಂದ ಮಾಲಿನ್ಯ ನಿಯಂತ್ರಣ ಸಲುವಾಗಿ ವಾಹನಗಳನ್ನು ಸಿಎನ್‌ಜಿಗೆ ಬದಲಾಯಿಸಲು ಅವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ. ಸುರತ್ಕಲ್ ಸಿಎನ್‌ಜಿ ಸ್ಟೇಷನ್ ಕಾರ್ಯಾರಂಭ ವೇಳೆ ಗೈಲ್ ನಿರ್ದೇಶಕ ಆರ್.ಕೆ.ಜೈನ್, ಇಡಿ ಅಜಯ್ ತ್ರಿಪಾಠಿ, ಸಿಜಿಎಂ ಹಿದ್ರೇಶ್ ಕುಮಾರ್, ಜಿಎಂ ಸಾಯಿ ಶಂಕರ್, ಸಿಎಒ ಪಂಕಜ್ ಗುಪ್ತಾ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.