ಸಣ್ಣ ಕೈಗಾರಿಕೆಗಳ ಅಭಿವೃದ್ದಿಯ ದೃಷ್ಟಿಯಲ್ಲಿ ಹಣಕಾಸು ನೇರವು, ಮಾರುಕಟ್ಟೆಯ ವಿಸ್ತರಣೆ ಮತ್ತು ಅಮದು ನೀತಿಗಳ ಕುರಿತು ಚರ್ಚೆ ನಡೆಸಲು ಮೇ. 22 ರಿಂದ 24 ರವರೆಗೆ ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ದಕ್ಷಿಣ ಭಾರತ ಮಟ್ಟದ ಎಂ.ಎಸ್.ಎಂ.ಇ ಸಮಾವೇಶ ಹಾಗೂ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್.ಗಣೇಶರಾವ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರುಸಣ್ಣ ಕೈಗಾರಿಕೆಗಳ ಅಭಿವೃದ್ದಿಯ ದೃಷ್ಟಿಯಲ್ಲಿ ಹಣಕಾಸು ನೇರವು, ಮಾರುಕಟ್ಟೆಯ ವಿಸ್ತರಣೆ ಮತ್ತು ಅಮದು ನೀತಿಗಳ ಕುರಿತು ಚರ್ಚೆ ನಡೆಸಲು ಮೇ. 22 ರಿಂದ 24 ರವರೆಗೆ ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ದಕ್ಷಿಣ ಭಾರತ ಮಟ್ಟದ ಎಂ.ಎಸ್.ಎಂ.ಇ ಸಮಾವೇಶ ಹಾಗೂ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಬಿ.ಆರ್.ಗಣೇಶರಾವ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ 130ಕ್ಕೂ ಹೆಚ್ಚು ಸ್ಮಾಲ್ ಮತ್ತು 12 ಹೆವಿ ಇಂಡ್‌ಸ್ಟ್ರಿಯಲ್‌ಗಳು ತಮ್ಮ ಮಳಿಗೆ ತೆರೆದು ಸಮಾವೇಶ ಮತ್ತು ವಸ್ತು ಪ್ರದರ್ಶನಕ್ಕೆ ಬರುವ ಜನರಿಗೆ ಮಾಹಿತಿ ನೀಡಲಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಎಲ್ಲಾ ಪ್ರತಿನಿಧಿಗಳು ಹಾಗೂ ಕೈಗಾರಿಕೆಗಳ ಮುಖ್ಯಸ್ಥರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ತುಮಕೂರು ಎಂಎಸ್‌ಎಂಇಗಳ ಬೆಳವಣಿಗೆ,ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆ ಅಭಿವೃದ್ಧಿಗೆ ಅಪಾರ ಮಾಡಿರುವುದು, ಸಾಧ್ಯತೆ ಹೊಂದಿರುವ ಉದಯೋನ್ಮುಖ ಕೈಗಾರಿಕಾ ಪ್ರದೇಶವಾಗಿದೆ ಎಂದರು.
ಆತಿಥೇಯ ನಗರವಾಗಿ ತುಮಕೂರನ್ನು ಆಯ್ಕೆ ಅದು ಕಾರ್ಯತಂತ್ರದ ರೂಪಾಂತರಗೊಳ್ಳುತ್ತಿರುವುದನ್ನು ಒತ್ತಿ ಹೇಳುತ್ತದೆ. ಕೈಗಾರಿಕಾ ಕೇಂದ್ರವಾಗಿ ವೇಗವಾಗಿ ಬೆಂಗಳೂರು ನಗರದಿಂದ ಸುಮಾರು 70 ಕಿಮೀ ದೂರದಲ್ಲಿರುವ ತುಮಕೂರು ಕೆಳಗಿನ ಸೌಲಭ್ಯಗಳನ್ನು ಹೊಂದಿದೆ. ಅತ್ಯುತ್ತಮ ರಸ್ತೆ ಮತ್ತು ರೈಲು ಸಂಪರ್ಕ,ಮುಂಬೈ-ಬೆಂಗಳೂರು-ಚನ್ನೈ ಕೈಗಾರಿಕಾ ಕಾರಿಡಾರ್ ಘೋಷಣೆ, ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ವಸಂತನರಸಾಪುರ ಕೈಗಾರಿಕಾ ವಲಯ, ಎಚ್.ಎ.ಎಲ್ ಹೆಲಿಕಾಪ್ಟರ್ ವಿಭಾಗದಂತಹ ಪ್ರಮುಖ ಕೈಗಾರಿಕಾ ಸಂಸ್ಥೆಗಳ ಜೊತೆಗೆ, ಇಂಡಿಯಾ ಫುಡ್ ಪಾರ್ಕ್ನಂತಹ ಮಹತ್ವದ ಮೂಲಸೌಕರ್ಯ ಬಲಿಷ್ಠ ಎಂ.ಎಸ್.ಎಂ.ಇ. ಹಾಗೂ ಪೂರಕ ಕೈಗಾರಿಕಾ ವಾತಾವರಣ ಸೃಷ್ಟಿಸಿವೆ.ಮೂರು ದಿನಗಳ ಕಾರ್ಯಕ್ರಮವು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು, ಸಾರ್ವಜನಿಕ ವಲಯದ ಘಟಕಗಳು, ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ನೀತಿ ನಿರೂಪಕರು ಮತ್ತು ತಾಂತ್ರಿಕ ತಜ್ಞರನ್ನು ಒಟ್ಟುಗೂಡಿಸುವ ಒಂದು ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದರು.ಅಮಾನಿಕೆರೆಯ ಗಾಜಿನ ಮನೆಯಲ್ಲಿ 150೦ಕ್ಕೂ ಹೆಚ್ಚು ಎಂ.ಎಸ್.ಎಂ.ಇ. ಪ್ರದರ್ಶಕರು, ನೂರಾರು ಬಿ2ಬಿ ಸಭೆಗಳು ಮತ್ತು ಚಿಂತನಶೀಲ ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.ಈ ಸಮಾವೇಶವು ಉನ್ನತ ಮಟ್ಟದ ವ್ಯವಹಾರ ಜಾಲತಾಣ ನಿರ್ಮಾಣ ಮತ್ತು ಒಪ್ಪಂದಗಳ ಸಾಧನೆಗೆ ಮಹತ್ವದ ವೇದಿಕೆಯಾಗಲಿದೆ. ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಹಾಗೂ ಹೊಸ ವ್ಯಾಪಾರ ವ್ಯವಹಾರ ಅವಕಾಶಗಳನ್ನು ಕಲ್ಪಿಸಲು ಒಂದು ಸಕ್ರಿಯ ವೇದಿಕೆಯನ್ನು ಒದಗಿಸುವ ಗುರಿಯನ್ನು ಈ ಸಮಾವೇಶ ಹೊಂದಿದೆ.ಈ ಕಾರ್ಯಕ್ರಮವು ಉದ್ಯಮಿಗಳು, ಉದ್ಯಮ ಮುಖಂಡರು, ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯೂಗಳು), ಹಣಕಾಸು ಸಂಸ್ಥೆಗಳು, ತಾಂತ್ರಿಕ ತಜ್ಞರು ಹಾಗೂ ಇತರ ಪ್ರಮುಖ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್.ಬೀರಾದರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಹುಸೇನ್, ನಗರ ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಗ್ರಾಮೀಣ ಜಂಟಿ ಕಾರ್ಯದರ್ಶಿ ದಿನೇಶಕುಮಾರ್.ವಿ., ಖಜಾಂಚಿ ಆರ್.ದೊರೈ, ಉಪಸಮಿತಿ ಅಧ್ಯಕ್ಷ ಸದಾಶಿವ ಆರ್.ಅಮೀನ್, ಸಹ ಅಧ್ಯಕ್ಷ ಆನಂದರಾವ್,ಕೆ, ಉಪಸಮಿತಿಯ ಸಲಹೆಗಾರರಾದ ಶ್ರೀಕಂಠದತ್ತ ಪಿ.ಎಸ್. ಅವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.