ನೈರುತ್ಯ ರೈಲ್ವೆ 7671 ಕೋಟಿ ಆದಾಯ ಗಳಿಸಿದೆ : ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್‌

KannadaprabhaNewsNetwork |  
Published : Mar 18, 2025, 12:36 AM ISTUpdated : Mar 18, 2025, 11:46 AM IST
ಅಶ್ವಿನಿ ವೈಷ್ಣವ್‌  | Kannada Prabha

ಸಾರಾಂಶ

2023-24ರ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆ ವಲಯವು ₹7671.15 ಕೋಟಿ ಆದಾಯ ಗಳಿಸಿದೆ ಎಂದು ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಹುಬ್ಬಳ್ಳಿ: 2023-24ರ ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆ ₹2,78,000 ಕೋಟಿ ಆದಾಯ ಗಳಿಸಿದ್ದರೆ, ನೈರುತ್ಯ ರೈಲ್ವೆ ವಲಯವು ₹7671.15 ಕೋಟಿ ಆದಾಯ ಗಳಿಸಿದೆ ಎಂದು ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಸಂಸತ್‌ ಅಧಿವೇಶನದಲ್ಲಿ ರೈಲ್ವೆ ಬಜೆಟ್‌ ಕುರಿತಂತೆ ಮಾತನಾಡಿದ ಅವರು, ನೈರುತ್ಯ ರೈಲ್ವೆ ವಲಯ ₹7671.15 ಕೋಟಿ ಆದಾಯ ಗಳಿಸಿದ್ದರೆ, ಇನ್ನು ಸಿಬ್ಬಂದಿ ವೆಚ್ಚ ₹3218.44 ಕೋಟಿ, ಪಿಂಚಣಿ ಪಾವತಿ ₹222.08 ಕೋಟಿ, ಇಂಧನ ವೆಚ್ಚ ₹2465.30 ಕೋಟಿ ಮತ್ತು ಹಣಕಾಸು ವೆಚ್ಚ ₹710.03 ಕೋಟಿ ಎಂದು ವಿವರಿಸಿದ್ದಾರೆ.

ರೈಲ್ವೆಯು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಉದ್ದವಾದ ಹಳಿ, ಹೆಚ್ಚಿನ ತೀಕ್ಷ್ಣತೆ ಹೊಂದಿರುವ ಹಳಿಗಳು, ನಿಲ್ದಾಣಗಳು ಮತ್ತು ಲೆವೆಲ್ ಕ್ರಾಸಿಂಗ್‌ಗಳಲ್ಲಿ ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ, ಮಂಜು ನಿರ್ವಹಣಾ ಸಾಧನಗಳ ಹೆಚ್ಚಳ, "ಕವಚ್ " ಸುರಕ್ಷತಾ ವ್ಯವಸ್ಥೆಯ ಅಭಿವೃದ್ಧಿ ಮತ್ತು ದಪ್ಪ ವೆಬ್ ಸ್ವಿಚ್‌ಗಳ ಬಳಕೆ ಮಾಡಲಾಗಿದೆ. ಇದರ ಪರಿಣಾಮವಾಗಿ, ಸುರಕ್ಷತೆಯಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಕಳೆದ ಹತ್ತು ವರ್ಷಗಳಲ್ಲಿ, 5 ಲಕ್ಷಕ್ಕಿಂತ ಹೆಚ್ಚು ಉದ್ಯೋಗಗಳನ್ನು ರೈಲ್ವೆ ಒದಗಿಸಿದ್ದು, ಪ್ರಸ್ತುತ 1 ಲಕ್ಷಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

2030ರೊಳಗೆ, ಭಾರತೀಯ ರೈಲ್ವೆ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಕ್ಕೆ ತಲುಪಿಸಲು ಉದ್ದೇಶಿಸಿದೆ. 2025ರಲ್ಲಿ ಸ್ಕೋಪ್ 1 ಶೂನ್ಯ ಇಂಗಾಲ ನಿರ್ವಹಣೆ ಸಾಧಿಸಲಾಗಿದ್ದು, ಸ್ಕೋಪ್ 2 ಅನ್ನು 2030ರೊಳಗೆ ಶೂನ್ಯಗೊಳಿಸಲು ಸಿದ್ಧತೆ ನಡೆದಿದೆ ಎಂದು ವಿವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ