- ದಾವಣಗೆರೆ ನಗರ, ಜಿಲ್ಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಆದ್ಯತೆ: ನೂತನ ಎಸ್‌ಪಿ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಎಚ್. ಟೆಕ್ಕಣ್ಣವರ್ ಬುಧವಾರ ನಿರ್ಗಮಿತ ಎಸ್ಪಿ ಉಮಾ ಪ್ರಶಾಂತ ಅವರಿಂದ ಅಧಿಕಾರ ಸ್ವೀಕರಿಸಿದರು. ಉಮಾ ಪ್ರಶಾಂತ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು.ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಡಾ.ಶೇಖರ್ ಎಚ್. ಟೆಕ್ಕಣ್ಣವರ್ ಅವರು ಪತ್ನಿ, ಮಕ್ಕಳ ಸಮೇತ ತೆರಳಿ ದರ್ಶನ ಮಾಡಿದರು. ಪೂಜೆ ಸಲ್ಲಿಸಿದ ನಂತರ ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಧಾವಿಸಿ, ಉಮಾ ಪ್ರಶಾಂತ ಅವರಿಂದ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಡಾ.ಶೇಖರ ಎಚ್.ಟೆಕ್ಕಣ್ಣವರ್ ನಿರ್ಗಮಿತ ಎಸ್‌ಪಿ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡ ಅವರು ನೂತನ ಎಸ್ಪಿ ಡಾ. ಶೇಖರ್ ಟೆಕ್ಕನ್ನವರ್ ಅವರಿಗೆ ಪುಷ್ಪಗುಚ್ಛ ನೀಡಿ, ಶುಭ ಹಾರೈಸಿದರು.
ಪೊಲೀಸರ ಬಗ್ಗೆ ಜನರಲ್ಲಿ ಇರುವ ಭಯವನ್ನು ದೂರ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗುವುದು. ಸರ್ಕಾರ ನಮ್ಮಿಂದ ನಿರೀಕ್ಷಿಸುವ ಸೇವೆಯನ್ನು ನಿಷ್ಠೆಯಿಂದ ಜನರಿಗೆ ಒದಗಿಸುತ್ತೇವೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಉತ್ತಮ ಆಡಳಿತ ನೀಡಲು ಪ್ರಯತ್ನಿಸುವೆ ಎಂದು ಅವರು ಹೇಳಿದರು.
ಡ್ರಗ್ಸ್ ಪ್ರಕರಣಗಳ ಬಗ್ಗೆ ಶಿಸ್ತುಬದ್ಧ ತನಿಖೆ ನಡೆಸುವ ಕಾರ್ಯ ಮುಂದುವರಿಸಲಾಗುವುದು. ರಾಜ್ಯದ ಇತರೆ ಭಾಗಗಳಿಂದ ದಾವಣಗೆರೆ ನಗರ, ಜಿಲ್ಲೆಗೆ ಆಗಮಿಸುವವರ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು. ಡ್ರಗ್ಸ್‌ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ಬದ್ಧವಾಗಿದೆ ಎಂದು ನೂತನ ಎಸ್‌ಪಿ ಸ್ಪಷ್ಟಪಡಿಸಿದರು.
- - -
- ಡಾ.ಶೇಖರ್ ಟೆಕ್ಕಣ್ಣವರ್, ಜಿಲ್ಲಾ ಎಸ್‌ಪಿ, ದಾವಣಗೆರೆ.
-11ಕೆಡಿವಿಜಿ12: ದಾವಣಗೆರೆ ನೂತನ ಎಸ್ಪಿ ಡಾ.ಶೇಖರ ಎಚ್. ಟೆಕ್ಕಣ್ಣವರ್ ಅವರಿಗೆ ನಿರ್ಗಮಿತ ಎಸ್ಪಿ ಉಮಾ ಪ್ರಶಾಂತ ಅವರು ಅಧಿಕಾರ ಹಸ್ತಾಂತರಿಸಿದರು.