ಅನಗತ್ಯ ಅಲೆದಾಟ ತಪ್ಪಿಸಲು ಸ್ಪಂದನ ಕೇಂದ್ರ ಸಹಕಾರಿ: ಎಂ.ಎಸ್. ದಿವಾಕರ್

KannadaprabhaNewsNetwork |  
Published : Jul 17, 2025, 12:30 AM IST
15ಎಚ್‌ಪಿಟಿ2- ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅವರು ಸ್ಪಂದನ ಕೇಂದ್ರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. | Kannada Prabha

ಸಾರಾಂಶ

ಕಂದಾಯ ಇಲಾಖೆ ಸೇರಿದಂತೆ ಭೂಮಿ ಸೇವೆ, ಮೋಜಿಣಿ ಸೇವೆ, ಆಧಾರ್ ಸೇವೆ ಮತ್ತು ಸಾಮಾಜಿಕ ಭದ್ರತಾ ಸೇವೆಗಳು ಶೀಘ್ರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರಗಳು ತ್ವರಿತ ಸೇವೆ ನೀಡಲು ಸನ್ನದ್ಧವಾಗಿವೆ.

ಸ್ಪಂದನ ಕೇಂದ್ರ ಪೂಜಾ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕಂದಾಯ ಇಲಾಖೆ ಸೇರಿದಂತೆ ಭೂಮಿ ಸೇವೆ, ಮೋಜಿಣಿ ಸೇವೆ, ಆಧಾರ್ ಸೇವೆ ಮತ್ತು ಸಾಮಾಜಿಕ ಭದ್ರತಾ ಸೇವೆಗಳು ಶೀಘ್ರವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರಗಳು ತ್ವರಿತ ಸೇವೆ ನೀಡಲು ಸನ್ನದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ಪಂದನ ಕೇಂದ್ರ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಸೇವೆಗಳಿಗೆ ಜನರು ಅನಗತ್ಯ ಅಲೆದಾಟ ತಪ್ಪಿಸಲು ಹಾಗೂ ಶೀಘ್ರ ಸೇವೆ ನೀಡಲು ಜಿಲ್ಲಾಡಳಿತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈಗಾಗಲೇ ತಾಲೂಕು ಮಟ್ಟದಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರದ ಮೂಲಕ ಅನೇಕ ಸೇವೆ ನೀಡಲಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಸ್ಪಂದನ ಕೇಂದ್ರದಿಂದಲೂ ತ್ವರಿತ ಸೇವೆ ನೀಡಲು ಮುಂದಾಗಿದೆ. ಸಾರ್ವಜನಿಕರು ಸಾಮಾಜಿಕ ಭದ್ರತಾ ಸೇವೆ, ಕಂದಾಯ ಇಲಾಖೆ, ಭೂಮಿ ಸೇವೆ, ಅಧಾರ್ ನಂತಹ ಕೆಲಸಗಳಿಗೆ ಸ್ಪಂದನ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲೆ ಪಡೆಯಬಹುದಾಗಿದೆ. ಮಧ್ಯವರ್ತಿಗಳಿಂದ ಅವಲಂಬಿತರಾಗದೇ ನೇರವಾಗಿ ಕೇಂದ್ರಗಳಲ್ಲಿನ ಸೇವೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಟಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ತಹಸೀಲ್ದಾರ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ