ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿ.ಪಂ.ಸಿಇಒ ವರ್ಣಿತ್ ನೇಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿಶೇಷ ಚೇತನರಿಗಾಗಿ ಎಲ್ಲ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿನ ಶೇ.5ರಷ್ಟು ಅನುದಾನವನ್ನು ಮೀಸಲಿರಿಸಲಾಗಿದ್ದು, ಈ ಅನುದಾನದ ಉಪಯೋಗ ಪಡೆದುಕೊಳ್ಳುವಂತೆ ಹಾಗೂ ಸರ್ಕಾರದಿಂದ ದೊರೆಯುವ ಸಾಧನ ಸಲಕರಣೆಗಳು, ಪಿಂಚಣಿ ಇತ್ಯಾದಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ಮಾಡಿದರು.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಲೈಬ್ರರಿಯ ವ್ಯವಸ್ಥೆ ಕೂಡ ವಿಶೇಷ ಚೇತನರಿಗೆ ಮಾಡಲಾಗಿದೆ. ವೋಟರ್ ಹೆಲ್ಪ್‌ಲೈನ್‌ನಲ್ಲಿ ಆಧಾರ್ ಕಾರ್ಡನ್ನು ನೋಂದಣಿ ಮಾಡಿಕೊಂಡಲ್ಲಿ ಚುನಾವಣೆಗಳಲ್ಲಿ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.ವಕೀಲ ವೈದ್ಯನಾಥ್ ಮಾತನಾಡಿ, ವಿಶೇಷ ಚೇತನರಿಗಾಗಿ ಕಾನೂನು ರೂಪಿಸುವ ಸಲುವಾಗಿ ವಿಶೇಷ ಚೇತನರ ಕಾಯ್ದೆ ಜಾರಿಗೆ ಬಂದಿದ್ದು, ಇದರಿಂದ ವಿಕಲಚೇತನರ ಹಕ್ಕು ಪೋಷಣೆ ಮಾಡುವುದು 2016ರ ಆರ್‌ಪಿಡಬ್ಲ್ಯುಡಿ ಆಕ್ಟ್ ಜಾರಿಗೆ ಬಂದಿದೆ. ಇದರಿಂದ ಸಮಾಜದಲ್ಲಿ ಇತರರಂತೆ ಬದುಕುವ ಅವಕಾಶ ನೀಡಿದೆ ಎಂದರು.ವಿಕಲಚೇತನರ ಹಕ್ಕನ್ನು ಕಸಿಯುವ ಅವಕಾಶ ಬಂದರೆ ಪ್ರಶ್ನೆ ಮಾಡಲು ಈ ಕಾಯ್ದೆ ಉಪಯೋಗಕಾರಿಯಾಗಿದೆ. ಅವರಿಗಾಗಿ ವಿಶೇಷ ನ್ಯಾಯಾಲಯವಿದೆ ಹಕ್ಕಿಗೆ ಚ್ಯುತಿ ಬಂದಲ್ಲಿ ಪ್ರಶ್ನೆ ಮಾಡುವ ಹಕ್ಕನ್ನು ಈ ಕಾಯ್ದೆ ನೀಡುತ್ತದೆ. ಸಾರ್ವಜನಿಕ ಸ್ಥಳದಲ್ಲಿ ವಿಶೇಷವಾಗಿ ರ‍್ಯಾಂಪ್ ನಿರ್ಮಾಣ ಮಾಡುವುದು ಸರ್ಕಾರಿ ಕಚೇರಿಗಳಲ್ಲಿ ಮೀಸಲಾತಿ ಒದಗಿಸುವದು ವಿಶೇಷ ಸಾಮಾಜಿಕ ಭದ್ರತೆ ನೀಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಉಚಿತ ಕಾನೂನು ಸೇವಾ ಪ್ರಾಧಿಕಾರವಿದೆ ಅದಕ್ಕಾಗಿ ನೇಮಕ ಮಾಡಲಾಗುತ್ತದೆ ಎಮದು ತಿಳಿಸಿದರು.ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಡಾ.ಕುಮಾರ್ ಜಿ.ಎಸ್ ಮಾತನಾಡಿ, ಸರ್ಕಾರಿ ಸವಲತ್ತುಗಳನ್ನು ವಿಶೇಷ ಚೇತನರಿಗೆ ಒದಗಿಸುವಲ್ಲಿ ಮತ್ತಷ್ಟು ಶ್ರಮಿಸಬೇಕು ಎಂದರು.
ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟಗಳನ್ನು ಪ್ರತಿನಿಧಿಸಿದ ಹಸನ್ ಹೊಸಕೇರಿ ಹಾಗೂ ಉತ್ತಮವಾಗಿ ಕೆಲಸ ನಿರ್ವಹಿಸುವಂತಹ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು ಮತ್ತು ಇಲಾಖೆಯ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ಹಾಗೂ ವಿವಿಧ ಯೋಜನೆಗಳ ಬಾಂಡ್‌ಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ವಿಕಲಚೇತನ ಕಲ್ಯಾಣಾಧಿಕಾರಿ ವಿಮಲಾ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.