ಹೊಸಪೇಟೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ, ಅಕ್ಕ ಪಡೆ ಹಾಗೂ ವಿಜಯ ಮಹಿಳಾ ಸುರಕ್ಷಾ ಪಡೆ ತಂಡಗಳ ಸಂಯುಕ್ತ ಆಶ್ರಯದಲ್ಲಿ ಹಂಪಿ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆ ಮತ್ತು ಭದ್ರತೆಯ ಕುರಿತು ಸೋಮವಾರ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಖಿ ಕೇಂದ್ರದ ನಿರ್ವಾಹಕಿ ಬಶೀರಾ ಬಿ. ಅವರು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಕೇಂದ್ರ ನೀಡುವ ಆಸರೆಯ ಬಗ್ಗೆ ಮಾಹಿತಿ ನೀಡಿದರು.
ಯಾವುದೇ ಅಹಿತಕರ ಘಟನೆಗಳು ನಡೆದಾಗ ಅಥವಾ ತುರ್ತು ಸಂದರ್ಭದಲ್ಲಿ ಮಹಿಳಾ ಸಹಾಯವಾಣಿ 181 ಪೊಲೀಸ್ ತುರ್ತು ಸೇವೆ 112, ಮಕ್ಕಳ ಸಹಾಯವಾಣಿ 1098, ಸೈಬರ್ ಕ್ರೈಂ ಸಹಾಯವಾಣಿ 1930ಗೆ ಸಂಪರ್ಕಿಸಬಹುದು. ಅಲ್ಲದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ತಂಡದ ಸದಸ್ಯರು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು. ಅಕ್ಕ ಪಡೆ ಮತ್ತು ವಿಜಯ ಮಹಿಳಾ ಸುರಕ್ಷಾ ಪಡೆಯ ಸಿಬ್ಬಂದಿ ಸ್ಥಳದಲ್ಲಿದ್ದ ಮಹಿಳಾ ಪ್ರವಾಸಿಗರೊಂದಿಗೆ ಸಂವಹನ ನಡೆಸಿ, ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ, ಅಕ್ಕ ಪಡೆ ಹಾಗೂ ವಿಜಯ ಮಹಿಳಾ ಸುರಕ್ಷಾ ಪಡೆಯ ಸದಸ್ಯರು ಉಪಸ್ಥಿತರಿದ್ದರು.