ಸನಾತನ ಸಂಸ್ಕೃತಿಯಲ್ಲಿ ದೇಗುಲಗಳಿಗೆ ವಿಶೇಷ ಪ್ರಾಮುಖ್ಯತೆ: ವಿದ್ಯಾ ಶಂಕರ ದೇಶಿಕೇಂದ್ರ ಸ್ವಾಮೀಜಿ

KannadaprabhaNewsNetwork |  
Published : Oct 28, 2024, 01:16 AM IST
ಗುಬ್ಬಿ ತಾಲ್ಲೂಕಿನ ಸಾಗರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಶರಣ ಕಲ್ಯಾಣದಯ್ಯ ಸ್ವಾಮಿ ದೇವಾಲಯದ ಎರಡನೇ ವರ್ಷದ ವಾರ್ಷಿಕ ಸಭೆಯಲ್ಲಿ ಗೊಲ್ಲಹಳ್ಳಿ ಮಠದ ಶ್ರೀ ವಿಭವಾ ವಿದ್ಯಾಶಂಕರದೇಶಿಕೇಂದ್ರ ಸ್ವಾಮಿಗಳು ಆರ್ಶಿವಚನ ನೀಡಿದರು. | Kannada Prabha

ಸಾರಾಂಶ

ಸಮಾಜದಲ್ಲಿ ಯಾವುದೇ ಜಾತಿ, ಮತ, ಭೇದವಿಲ್ಲದೇ ಎಲ್ಲರೂ ಒಗ್ಗಟ್ಟಾದಾಗ ಮಾತ್ರ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ಸಾಧ್ಯವಾಗುತ್ತದೆ.

ಗುಬ್ಬಿ: ಭಾರತೀಯ ಸಂಸ್ಕೃತಿಯಲ್ಲಿ ಸನಾತನ ಧರ್ಮದ ದೇವಾಲಯಗಳಿಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಎಲ್ಲರೂ ಭಗವಂತನನ್ನು ಸ್ಮರಿಸಬೇಕು ಎಂದು ಗೊಲ್ಲಹಳ್ಳಿ ಮಠದ ಶ್ರೀ ವಿಭವಾ ವಿದ್ಯಾ ಶಂಕರ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಗುಬ್ಬಿ ತಾಲೂಕಿನ ಸಾಗರನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶರಣ ಕಲ್ಯಾಣದಯ್ಯ ಸ್ವಾಮಿ ದೇವಾಲಯದ ಎರಡನೇ ವರ್ಷದ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಯಾವುದೇ ಜಾತಿ, ಮತ, ಭೇದವಿಲ್ಲದೇ ಎಲ್ಲರೂ ಒಗ್ಗಟ್ಟಾದಾಗ ಮಾತ್ರ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ಸಾಧ್ಯವಾಗುತ್ತದೆ ಎಂದರು. ಗ್ರಾಮಗಳಲ್ಲಿ ವಾಸ ಮಾಡುವ ಎಲ್ಲ ವರ್ಗದ ಜನರು ನಾವೆಲ್ಲ ಒಂದೇ ಎಂಬ ಭಾವನೆಯಲ್ಲಿದ್ದಾರೆ. ಶ್ರೀ ಶರಣ ಕಲ್ಯಾಣದಯ್ಯ ಸ್ವಾಮಿ ದೇವಾಲಯ ಶಕ್ತಿ ಪೀಠವಾಗಲಿ. ಈ ದೇವಾಲಯಕ್ಕೆ ಭಕ್ತರ ಸಾಗರ ಹರಿದು ಬರಲಿ ಎಂದು ಶುಭ ಹಾರೈಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್ ಕುಮಾರ್ , ಗ್ರಾಮ ಪಂಚಾಯಿತಿ ಸದಸ್ಯ ಶಿವನಂಜಪ್ಪ ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ , ಮುಖಂಡರಾದ ಗಂಗಾಧರಪ್ಪ , ನಂದೀಶ್ , ಸಿದ್ದರಾಮಣ್ಣ , ಚನ್ನಬಸವಯ್ಯ , ಶಿವಣ್ಣ ,ಮಲ್ಲಿಕಾರ್ಜುನ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಸಂಕಲ್ಪ ಮಾಡಿ: ಮಾಜಿ ಶಾಸಕ ಸುಧಾಕರ್ ಲಾಲ್
ದುಶ್ಚಟ ಬಿಟ್ಟರೆ ವಿವಾಹಕ್ಕೆ ಕನ್ಯೆಯರು ಸಿಕ್ಕಾರು: ಶಾಂತವೀರ ಶ್ರೀ