ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪಂಚಾಯ್ತಿ ಕಚೇರಿ ಮುಂದೆ ಸೇರಿದ ಗ್ರಾಮಸ್ಥರು ಮದ್ದೂರು ತಾಲೂಕಿನ ಕುದರಗುಂಡಿ ಸರ್ವೇ ನಂ. ೨೪೫ರಲ್ಲಿ ೧೦೯ ಎಕರೆ ತಾಲೂಕಿನ ನೊದೆಕೊಪ್ಪಲು ಗ್ರಾಮದ ಸರ್ವೇ ನಂ. ೨೮೪ರಲ್ಲಿ ೨೫೦ ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿಗೆ ಸ್ವಾಧೀನ ಮಾಡುವ ವಿಚಾರ ಈ ಹಿಂದೆಯೂ ೨-೩ ಸಲ ಚರ್ಚೆಯಾಗಿತ್ತು. ನೂರಕ್ಕೆ ಶೇ.೯೯ರಷ್ಟು ರೈತರು ಕೊಡುವುದಿಲ್ಲವೆಂದು ಮೈಸೂರು ಕೆಐಎಡಿಬಿ ಭೂ ಸ್ವಾಧೀನಾಧಿಕಾರಿಗಳ ಮುಂದೆ ಬರವಣಿಗೆ ಮೂಲಕ ನೀಡಿದ್ದೆವು.
ಈ ಭಾಗದ ರೈತರಿಗೆ ಏತ ನೀರಾವರಿ ಸೌಲಭ್ಯವಿರುವುದರಿಂದ ಈ ಸರ್ವೇ ನಂಬರ್‌ಗಳಲ್ಲಿ ತೆಂಗು, ಮಾವು, ಸೀಬೆ, ತರಕಾರಿ ಬೆಳೆಗಳು ಭತ್ತ, ರಾಗಿ, ಕಬ್ಬು, ಹೈನುಗಾರಿಕೆ, ರೇಷ್ಮೆ ಬೆಳೆ ಬೆಳೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈಗ ಮತ್ತೆ ತಾವುಗಳು ಸಭೆ ಕರೆದು ಚರ್ಚೆಗೆ ಕರೆದಿರುವುದು ನಮಗೆ ನೋವುಂಟುಮಾಡಿದೆ. ಯಾವುದೇ ಕಾರಣಕ್ಕೂ ನಮ್ಮ ರಕ್ತ ಕೊಟ್ಟರೂ ಜಮೀನನ್ನು ಕೊಡುವುದಿಲ್ಲ. ನಮ್ಮ ಜಮೀನನ್ನು ಈಗಾಗಲೇ ಗೃಹ ಮಂಡಳಿಯವರು ಕಿತ್ತುಕೊಂಡಿದ್ದಾರೆ. ನಮಗೆ ಉಳಿದಿರುವ ಜಮೀನು ಇಷ್ಟೆ. ಅದನ್ನೂ ಕಳೆದುಕೊಂಡು ಎಲ್ಲಿಗೆ ಹೋಗೋಣ. ನಮ್ಮ ಕುಟುಂಬಗಳ ಗತಿ ಏನು. ಆದ್ದರಿಂದ ತಾವು ದಯಮಾಡಿ ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಿಸುವಂತೆ ತೂಬಿನಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್‌ಗೌಡ ಪಟೇಲ್, ರೆಡ್ಡಿ ಗೋಪಾಲ್, ಸತೀಶ್, ದಿನೇಶ್, ಸಂತೋಷ್, ರವಿ, ಪಾಪ, ಶ್ರೀನಿವಾಸ್, ಲಿಖಿತ್‌ಗೌಡ ಮತ್ತಿತರರಿದ್ದರು.
-ಅಶೋಕ್ ಪಟೇಲ್, ಗ್ರಾಮಸ್ಥರು, ಎಲೆಚಾಕನಹಳ್ಳಿ